BJP ಅಂತಿಮ ಪಟ್ಟಿ ಪ್ರಕಟ, 4 ಕ್ಷೇತ್ರ ನಿಗೂಢ; ಶೋಭಾಗೂ ಟಿಕೆಟ್ ಇಲ್ಲ
Team Udayavani, Apr 23, 2018, 3:49 PM IST
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಅಖಾಡ ರಂಗೇರತೊಡಗಿದ್ದು, ಭಾರತೀಯ ಜನತಾ ಪಕ್ಷ 224 ಕ್ಷೇತ್ರಗಳ ಪೈಕಿ ಸೋಮವಾರ 4ನೇ ಪಟ್ಟಿ ಪ್ರಕಟ ಮಾಡುವ ಮೂಲಕ 220 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಇನ್ನೂ ನಾಲ್ಕು ಕ್ಷೇತ್ರಗಳಲ್ಲಿ ಕಣಕ್ಕಿಳಿಯುವವರು ಯಾರು ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ.
ಇಂದು ಬಿಎಸ್ ವೈ ಪುತ್ರ ವಿಜಯೇಂದ್ರ ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಬೇಕಾಗಿತ್ತು. ಆದರೆ ದಿಢೀರ್ ಬೆಳವಣಿಗೆಯಲ್ಲಿ ವಿಜಯೇಂದ್ರ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಸಮಾವೇಶದಲ್ಲಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಕುರ್ಚಿಗಳನ್ನು ಪುಡಿಗೈದು ರಂಪಾಟ ನಡೆಸಿದ್ದಾರೆ.
ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಾಕಿ:
ವರುಣಾ, ಬಾದಾಮಿ, ಸಕಲೇಶಪುರ ಹಾಗೂ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ
ಶೋಭಾಗೆ ಕೈ ತಪ್ಪಿದ ಟಿಕೆಟ್: ಸಂಸದೆ ಶೋಭಾ ಕರಂದ್ಲಾಜೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಕೂಡಾ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆನ್ನಲಾಗಿತ್ತು. ಆದರೂ ಯಶವಂತಪುರ ಕ್ಷೇತ್ರದ ಟಿಕೆಟ್ ಅನ್ನು ನಟ ಜಗ್ಗೇಶ್ ಅವರಿಗೆ ನೀಡಲಾಗಿದೆ.
7 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಘೋಷಣೆ:
ಭದ್ರಾವತಿ ವಿಧಾನಸಭಾ ಕ್ಷೇತ್ರಕ್ಕೆ ಜಿಆರ್ ಪ್ರವೀಣ್ ಪಾಟೀಲ್, ಯಶವಂತಪುರ ನಟ ಜಗ್ಗೇಶ್, ಬಿಟಿಎಂ ಲೇಔಟ್ ಲಲ್ಲೇಶ್ ರೆಡ್ಡಿ, ರಾಮನಗರ ಎಚ್ ಲೀಲಾವತಿ, ಕನಕಪುರ ನಂದಿನಿ ಗೌಡ, ಹಾಸನ ಜಿ.ಪ್ರೀತಮ್ ಗೌಡ, ಬೇಲೂರು ಎಚ್.ಕೆ.ಸುರೇಶ್.
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಬಿಎಸ್ ವೈ ನೇತೃತ್ವದಲ್ಲಿ ಸಭೆ:
ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ವರುಣಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಸಭೆಯಲ್ಲಿ ಯಡಿಯೂರಪ್ಪ, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿರುವ ರೇವಣಸಿದ್ದಯ್ಯ, ಶ್ರೀರಾಮುಲು, ಗೋ ಮಧುಸೂದನ್, ಬಿವೈ ರಾಘವೇಂದ್ರ ಪಾಲ್ಗೊಂಡಿದ್ದು, ವಿಜಯೇಂದ್ರ ಕೂಡಾ ಕೆಲ ಹೊತ್ತಿನಲ್ಲಿ ಭಾಗವಹಿಸಲಿದ್ದಾರೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.