ಪರಿವರ್ತನಾ ಯಾತ್ರೆ ಬಳಿಕ ರ್ಯಾಲಿಗಳತ್ತ ಬಿಜೆಪಿ ಚಿತ್ತ
Team Udayavani, Jan 30, 2018, 8:53 AM IST
ಬೆಂಗಳೂರು: ಪರಿವರ್ತನಾ ಯಾತ್ರೆ ಸಮಾರೋಪದ ನಂತರ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಬ್ಯುಸಿ ಶೆಡ್ನೂಲ್ ನಿಗದಿಪಡಿಸಿದೆ. ಫೆ.4ರ ಪರಿವರ್ತನಾ ಯಾತ್ರೆ ಬಳಿಕ ಚುನಾವಣೆ ಸಿದ್ಧತೆಗೆ ಬಿಜೆಪಿ ಭರ್ಜರಿ ಪ್ಲಾನ್ ರೂಪಿಸಿರುವ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜ್ಯಾದ್ಯಂತ 19 ರ್ಯಾಲಿ ಆಯೋಜಿಸಲು ಸೂಚಿಸಿದ್ದಾರೆ.
ಫೆ.27 ರಂದು ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಬೃಹತ್ ಕಿಸಾನ್ ರ್ಯಾಲಿ ಹಾಗೂ ಓಬಿಸಿ ಮೋರ್ಚಾ ವತಿಯಿಂದ 8 ರಾಜ್ಯಮಟ್ಟದ ರ್ಯಾಲಿ ನಡೆಸುವಂತೆ ನಿರ್ದೇಶನ ನೀಡಿದ್ದಾರೆ. ಕೋಲಿ, ಕ್ಷತ್ರೀಯ, ಮರಾಠ, ಗೊಲ್ಲ, ನಾಯಕ ಸೇರಿ ಹಿಂದುಳಿದ ವರ್ಗಗಳ ಸಮುದಾಯದ ರ್ಯಾಲಿಗೆ ಸಿದ್ಧತೆ ಮಾಡಿಕೊಳ್ಳಿ. ಎಸ್‌ಸಿ, ಎಸ್‌ಟಿ ಸಮುದಾಯದ 5 ರ್ಯಾಲಿ, ಸ್ಲಂ ಮೋರ್ಚಾದಿಂದ 1 ರ್ಯಾಲಿ, ಮಹಿಳಾ ಮೋರ್ಚಾದಿಂದ 4 ರ್ಯಾಲಿ ಮಾಡಬೇಕೆಂದು ತಿಳಿಸಲಾಗಿದೆ. ಫೆ.4ರ ಬಳಿಕ ಮಾರ್ಚ್ 15 ರೊಳಗೆ ಒಟ್ಟು 19 ರ್ಯಾಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆದರೆ, ಒಕ್ಕಲಿಗ, ಲಿಂಗಾಯತ, ಕುರುಬ ಸಮುದಾಯದ
ಸಮಾವೇಶ ನಡೆಸದೇ ಇರಲು ತೀರ್ಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.
ಸಮಾವೇಶ ನಡೆಸಲು ತೀರ್ಮಾನ: ರಾಷ್ಟ್ರಪತಿಯವರನ್ನು ಕರೆಸಿ ಯಾದಗಿರಿಯಲ್ಲಿ ಅಂಬಿಗರ ಚೌಡಯ್ಯ ಜಯಂತಿ. ರಾಷ್ಟ್ರಪತಿಯವರು ಬಾರದಿದ್ದರೆ ಸ್ಥಳ ಬದಲಾವಣೆ. ಫೆ. 10 ರಂದು ರಾಯಚೂರಿನಲ್ಲಿ ಹಿಂದುಳಿದ ವರ್ಗಗಳ ಸಮಾವೇಶ. ಫೆ.18 ರಂದು ಬೆಳಗಾವಿಯಲ್ಲಿ ಕ್ಷತ್ರೀಯ ಸಮಾವೇಶ, ಮಾರ್ಚ್ 3ರಂದು ಕೋಲಾರ ಜಿಲ್ಲೆ ಮಾಲೂರಿನಲ್ಲಿ ಬಲಿಜ ಸಮಾವೇಶ, ಮಾರ್ಚ್ 13ರಂದು ತುಮಕೂರಿನಲ್ಲಿ ಯಾದವ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.