BJP: ಬಂಡಾಯಕ್ಕೆ ಬಿಜೆಪಿ ವರಿಷ್ಠರು ಗರಂ: ಯತ್ನಾಳ್‌ಗೆ ಶೋಕಾಸ್‌ ನೋಟಿಸ್‌

ಪದೇ ಪದೆ ರಾಜ್ಯ ನಾಯಕತ್ವದ ವಿರುದ್ಧ ವಾಗ್ಧಾಳಿ ; ಪಕ್ಷದ ಸೂಚನೆಗೂ ಯತ್ನಾಳ್‌ ನಿರ್ಲಕ್ಷ್ಯ

Team Udayavani, Dec 3, 2024, 6:50 AM IST

BJP: ಬಂಡಾಯಕ್ಕೆ ಬಿಜೆಪಿ ವರಿಷ್ಠರು ಗರಂ: ಯತ್ನಾಳ್‌ಗೆ ಶೋಕಾಸ್‌ ನೋಟಿಸ್‌

ಬೆಂಗಳೂರು: ಪಕ್ಷದ ವರಿಷ್ಠರ ಮನೆಬಾಗಿಲು ತಲುಪಿ ರುವ ಬಿಜೆಪಿಯ ಬಣ ಬಡಿದಾಟ ಈಗ ನಿರ್ಣಾಯಕ ಹಂತಕ್ಕೆ ಮುಟ್ಟಿದೆ. ಪಕ್ಷದ ಸೂಚನೆ ಇದ್ದರೂ ರಾಜ್ಯ ನಾಯಕತ್ವದ ವಿರುದ್ಧ ಶಾಸಕ ಬಸನ ಗೌಡ ಯತ್ನಾಳ್‌ ಪದೇ ಪದೆ ವಾಗ್ಧಾಳಿ ನಡೆಸುತ್ತಿರುವುದಕ್ಕೆ ಬಿಜೆಪಿ ವರಿಷ್ಠರು ಸಿಟ್ಟುಗೊಂಡಿ ದ್ದಾರೆ. ಹೀಗಾಗಿ ಯತ್ನಾಳ್‌ಗೆ ಈಗ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿ ಯಿಂದ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗಿದೆ.

ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಕೈ ಮೇಲಾದಂತೆ ತೋರುತ್ತಿದ್ದು, 10 ದಿನಗಳ ಒಳಗೆ ನೋಟಿಸ್‌ಗೆ ಉತ್ತರ ನೀಡುವಂತೆ ಯತ್ನಾಳ್‌ಗೆ ಗಡುವು ನೀಡಲಾಗಿದೆ. ನೋಟಿಸ್‌ ಜಾರಿಯಾಗುವ ವೇಳೆ ಯತ್ನಾಳ್‌ ದಿಲ್ಲಿಯಲ್ಲೇ ಇದ್ದರು. ರವಿವಾರ ರಾತ್ರಿಯೇ ತೆರಳಿದ್ದ ಅವರು, ಬುಧವಾರ ಸಂಸತ್ತಿನ ವಕ್ಫ್ ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್‌ ಅವರನ್ನು ತಮ್ಮ ತಂಡದ ಜತೆಗೆ ಭೇಟಿ ಮಾಡುವ ಉದ್ದೇಶ ಹೊಂದಿದ್ದಾರೆ. ಆದರೆ ನೋಟಿಸ್‌ ಜಾರಿ ಬಳಿಕವೂ ಅವರು ವಾಗ್ಧಾಳಿ ನಡೆಸಿದ್ದಾರೆ.

ಅಲ್ಲದೆ ರಮೇಶ್‌ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್‌ ಬಂಗಾರಪ್ಪ ಪ್ರತ್ಯೇಕವಾಗಿ ದಿಲ್ಲಿಗೆ ತಲುಪಿದ್ದಾರೆ. ಹೀಗಾಗಿ ರಾಜ್ಯದ ಬಣ ಕಿತ್ತಾಟ ಈಗ ದಿಲ್ಲಿ ತಲುಪಿದಂತಾಗಿದ್ದು, ಇನ್ನೂ ಎರಡು ದಿನ ಅಲ್ಲಿಯೇ ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ.

ಕಳೆದ ವಾರವಷ್ಟೇ ದಿಲ್ಲಿಗೆ ತೆರಳಿದ್ದ ವಿಜಯೇಂದ್ರ ಅವರು ವರಿಷ್ಠರನ್ನು ಭೇಟಿ ಮಾಡಿ ಯತ್ನಾಳ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದರ ಬೆನ್ನಿಗೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅಖಾಡಕ್ಕೆ ಇಳಿಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬಿಜೆಪಿ ವರಿಷ್ಠರು ಕೇಂದ್ರ ಶಿಸ್ತು ಸಮಿತಿ ಸದಸ್ಯ ಕಾರ್ಯದರ್ಶಿ ಓಂ ಪಾಠಕ್‌ ಮೂಲಕ ನೋಟಿಸ್‌ ಜಾರಿಗೊಳಿಸಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?
ರಾಜ್ಯ ನಾಯಕತ್ವದ ವಿರುದ್ಧ ನಿಮ್ಮ ನಿರಂತರ ವಾಗ್ಧಾಳಿ, ಪಕ್ಷದ ನಿರ್ದೇಶನಗಳನ್ನು ಧಿಕ್ಕರಿಸುವುದನ್ನು ನೀವು ನಿರಂತರವಾಗಿ ಮುಂದುವರಿಸಿದ್ದೀರಿ. ರಾಜಕೀಯ ಮತ್ತು ಸಾರ್ವಜನಿಕವಾಗಿ ಮಹತ್ವ ಪಡೆದ ಎಲ್ಲ ಸಂದರ್ಭಗಳಲ್ಲೂ ನೀವು ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಹೇಳಿಕೆ ಗಳನ್ನು ನೀಡಿದ್ದೀರಿ. ನಿಮ್ಮ ನಿಲುವುಗಳನ್ನು ಮಾಧ್ಯಮ ಗಳು ಮತ್ತು ವಿವಿಧ ವೇದಿಕೆಗಳಲ್ಲೂ ವ್ಯಕ್ತಮಾಡಿದ್ದೀರಿ. ಇಂಥ ವರ್ತನೆಗೆ ಸಂಬಂಧಪಟ್ಟಂತೆ ಈ ಹಿಂದೆಯೂ ಹಲವು ಬಾರಿ ಪಕ್ಷ ಶೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು. ನಿಮ್ಮಿಂದ ಸದ್ವರ್ತನೆಯ ಭರವಸೆ ಲಭಿಸಿತ್ತು. ಇಷ್ಟಾದ ಮೇಲೂ ನಿಮ್ಮ ಅಶಿಸ್ತಿನ ಕೃತ್ಯಗಳು ಅವ್ಯಾಹತವಾಗಿ ಮುಂದುವರಿದಿವೆ. ಇದು ಅತ್ಯಂತ ಕಳವಳಕಾರಿ ಸಂಗತಿ.

ನಿಮ್ಮ ಹಿರಿತನವನ್ನು ಆಧರಿಸಿ ಈ ಹಿಂದೆ ನೀವು ಸಲ್ಲಿಸಿದ ವಿವರಣೆಗಳ ಬಗ್ಗೆ ಕೇಂದ್ರ ಶಿಸ್ತು ಸಮಿತಿ ಮೃದು ನಿಲುವು ತಳೆದಿತ್ತು. ಆದರೆ ನೀವು ಮಾಡಿದ ಸುಳ್ಳು ಆರೋಪಗಳು, ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ವರ್ತಿಸಿದ್ದು ಬಿಜೆಪಿಯ ನಿಯಮ 25ನೇ ವಿಧಿಯ ಪ್ರಕಾರ ಅಶಿಸ್ತು ಹಾಗೂ ನಿಯಮ ಉಲ್ಲಂಘನೆಯಾಗಿದೆ. ಇದಕ್ಕಾಗಿ ನಿಮ್ಮ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಬಹುದು ಎಂದು ಪಕ್ಷ ಭಾವಿಸಿದ್ದು, ಈ ಎಲ್ಲ ಆರೋಪಗಳಿಗೆ ಸೂಕ್ತ ಕಾರಣ ತಿಳಿಸಬೇಕು. ಈ ನೋಟಿಸ್‌ ಲಭಿಸಿದ 10 ದಿನಗಳಲ್ಲಿ ವಿವರಣೆಯನ್ನು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಸಲ್ಲಿಸಬೇಕು. ಇಲ್ಲವಾದಲ್ಲಿ ನಿಮಗೆ ಸ್ಪಷ್ಟನೆ ನೀಡುವುದಕ್ಕೆ ಏನೂ ಇಲ್ಲ ಎಂದು ಭಾವಿಸಿ ಮುಂದಿನ ನಿರ್ಣಯಕ್ಕೆ ಪಕ್ಷ ಸ್ವತಂತ್ರವಾಗಿದೆ ಎಂದು ಭಾವಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಪ್ರತಿಕ್ರಿಯೆ ನೀಡದ ವಿಜಯೇಂದ್ರ
ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೀಡಿಲ್ಲ. ಪಕ್ಷದ ಕಚೇರಿಯ ಬಳಿ ಮಾಧ್ಯಮದವರು ಪ್ರಶ್ನಿಸಿದಾಗ, ಇವತ್ತಷ್ಟೇ ನೋಟಿಸ್‌ ನೀಡಿ¨ªಾರೆ. 10 ದಿನ ಬಾಕಿಯಿದೆ. ನಾನು ಆ ಬಗ್ಗೆ ಹೆಚ್ಚೇನೂ ಹೇಳಲು ಬಯಸುವುದಿಲ್ಲ ಎಂದು ಕಿರು ಪ್ರತಿಕ್ರಿಯೆ ನೀಡಿದರು.

ಉಲ್ಟಾ ಹೊಡೆದ ಯತ್ನಾಳ್‌
ಪಕ್ಷ ನೋಟಿಸ್‌ ನೀಡಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಟ್ವೀಟ್‌ ಮಾಡಿ ಉತ್ತರ ನೀಡುತ್ತೇನೆ ಎಂದು ಹೇಳಿದ್ದ ಯತ್ನಾಳ್‌ ಕೆಲವೇ ತಾಸುಗಳಲ್ಲಿ ಉಲ್ಟಾ ಹೊಡೆದು ವಿಜಯೇಂದ್ರ ವಿರುದ್ಧ ಮತ್ತೆ ಆಕ್ರೋಶ ವ್ಯಕ್ತಪಡಿಸಿದರು.
ಎಕ್ಸ್‌ ಖಾತೆಯಲ್ಲಿ ನೋಟಿಸ್‌ ಪ್ರತಿಯನ್ನೂ ಹಂಚಿಕೊಂಡಿದ್ದ ಅವರು, ಕೇಂದ್ರ ಶಿಸ್ತು ಸಮಿತಿ ನೀಡಿದ ನೋಟಿಸ್‌ಗೆ ಸೂಕ್ತ ಉತ್ತರ ನೀಡುತ್ತೇನೆ. ಜತೆಗೆ ರಾಜ್ಯ ಘಟಕದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿವರಣೆಯನ್ನೂ ನೀಡುತ್ತೇನೆ. ಹಿಂದುತ್ವದ ಬಗೆಗಿನ ನನ್ನ ಬದ್ಧತೆ, ಭ್ರಷ್ಟಾಚಾರ, ವಕ್ಫ್ ಹಾಗೂ ಕುಟುಂಬ ರಾಜಕಾರಣದ ವಿರುದ್ಧದ ನನ್ನ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದರು.
]
ಕೆಲವೇ ತಾಸುಗಳ ಬಳಿಕ ದಿಲ್ಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, “ಈ ನೋಟಿಸ್‌ ನಕಲಿ ಇರಬಹುದು. ಇದು ವಿಜಯೇಂದ್ರ ಸೃಷ್ಟಿಯಾಗಿರಬಹುದು. ಅವರ ಅಪ್ಪನ ಸಹಿಯನ್ನೇ ನಕಲಿ ಮಾಡಿರಲಿಲ್ಲವೇ? ವಾಟ್ಸ್‌ಆ್ಯಪ್‌ನ ಲ್ಲಿ ಬಂದಿರುವುದನ್ನು ನಂಬುವುದು ಹೇಗೆ? ನೋಟಿಸ್‌ ಕೈ ಸೇರಿದ ಬಳಿಕ ಉತ್ತರಿಸಲು ಸಾಧ್ಯ ಎಂದು ತಿರುಗಿ ಬಿದ್ದಿದ್ದಾರೆ.

ನೋಟಿಸ್‌ನಲ್ಲಿ ಏನಿದೆ?
-ರಾಜ್ಯದ ಪಕ್ಷ ನಾಯಕತ್ವದ ವಿರುದ್ಧ ನಿರಂತರವಾಗಿ ದಾಳಿ ಮುಂದುವರಿಸಿದ್ದೀರಿ
-ಪಕ್ಷದ ಅಧಿಕೃತ ನಿಲುವಿಗೆ ವಿರುದ್ಧವಾಗಿ ಹೇಳಿಕೆಗಳನ್ನು ನೀಡಿದ್ದೀರಿ
-ನಿಮ್ಮ ನಿಲುವುಗಳನ್ನು ಮಾಧ್ಯಮ, ವಿವಿಧ ವೇದಿಕೆಗಳಲ್ಲೂ ವ್ಯಕ್ತಪಡಿಸಿದ್ದೀರಿ
-ನಿಮ್ಮ ಇಂಥ ವರ್ತನೆಗಾಗಿ ಈ ಹಿಂದೆಯೂ ನೋಟಿಸ್‌, ನಿಮ್ಮಿಂದ ಸದ್ವರ್ತನೆಯ ಭರವಸೆ
-ಇಷ್ಟಾದ ಮೇಲೂ ನಿಮ್ಮ ಅಶಿಸ್ತಿನ ಕೃತ್ಯಗಳು ಅವ್ಯಾಹತವಾಗಿ ಮುಂದುವರಿದಿವೆ
-ನಿಮ್ಮ ಹಿರಿತನ ಆಧರಿಸಿ ಕೇಂದ್ರ ಶಿಸ್ತು ಸಮಿತಿ ಮೃದು ನಿಲುವು ತಳೆದಿತ್ತು.
-ಪಕ್ಷದ ನಿಯಮ 25ನೇ ವಿಧಿಯ ಪ್ರಕಾರ ಅಶಿಸ್ತು ಹಾಗೂ ನಿಯಮ ಉಲ್ಲಂಘನೆ
-ಇದಕ್ಕಾಗಿ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು?
-ನೋಟಿಸ್‌ ಲಭಿಸಿ 10 ದಿನಗಳಲ್ಲಿ ವಿವರಣೆ ನೀಡಿ

ಯತ್ನಾಳ್‌ ಉಚ್ಚಾಟಿಸಿ:
ಜಿಲ್ಲಾಧ್ಯಕ್ಷರ ಆಗ್ರಹ
ಬೆಂಗಳೂರು: ಯತ್ನಾಳ್‌ ವಿರುದ್ಧ ಉಗ್ರ ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿಯ ವಿವಿಧ ಜಿಲ್ಲಾಧ್ಯಕ್ಷರು ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಹಾವೇರಿ ಜಿಲ್ಲಾಧ್ಯಕ್ಷ ಅರುಣ್‌ ಕುಮಾರ್‌ ಪೂಜಾರ್‌, ರಾಜ್ಯಾಧ್ಯಕ್ಷರನ್ನು ನಿಂದಿಸುವುದು ಎಂದರೆ ಜಿಲ್ಲಾಧ್ಯಕ್ಷರನ್ನು ನಿಂದಿಸಿದಂತೆ. ಮುಲಾಜಿಲ್ಲದೆ ಯತ್ನಾಳ್‌ ಅವರನ್ನು ಪಕ್ಷದಿಂದ ಹೊರಕ್ಕೆ ಹಾಕಬೇಕು ಎಂದರು. ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಸಿ.ಕೆ. ರಾಮಮೂರ್ತಿ ಮಾತನಾಡಿ, ಯತ್ನಾಳ್‌ ಪಕ್ಷಕ್ಕಿಂತ ದೊಡ್ಡವರೇ? ಪಕ್ಷವು ತಾಯಿ ಇದ್ದಂತೆ. ಯತ್ನಾಳ್‌ ಅವರು ತಾಯಿಗೆ ಅವಮಾನ ಮಾಡುತ್ತಿದ್ದಾರೆ ಎಂದರು.

ಬಿವೈವಿ ತಂಡಕ್ಕೂ ನೋಟಿಸ್‌?
ಬೆಂಗಳೂರು: ಬಿಜೆಪಿ ರಾಜ್ಯ ಘಟಕದಲ್ಲಿ ನಡೆದಿರುವ ಬಣ ರಾಜಕಾರಣದ ಮಧ್ಯೆ ಕೇಂದ್ರ ಶಿಸ್ತು ಸಮಿತಿಯಿಂದ ಇನ್ನಷ್ಟು ಜನರಿಗೆ ನೋಟಿಸ್‌ ಜಾರಿಯಾಗುವ ಸಾಧ್ಯತೆ ಇದೆ. ಬಿಜೆಪಿಯ ದಿಲ್ಲಿ ಮೂಲ ಗಳ ಪ್ರಕಾರ ಈ ವಿದ್ಯಮಾನದಲ್ಲಿ ಎರಡೂ ಬಣಗಳಿಂದ ಮಾತಿನ ಚಕಮಕಿ ನಡೆದಿದೆ. ಹೀಗಾಗಿ ವಿಜಯೇಂದ್ರ ಬಣದ ಒಂದಿಬ್ಬರು ಮಾಜಿ ಶಾಸಕರಿಗೂ ನೋಟಿಸ್‌ ಜಾರಿಯಾಗಲಿದೆ ಎನ್ನಲಾಗಿದೆ.

ಬೆಂಗಳೂರಿಗೆ ಬಂದ ಬಿಜೆಪಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬೆಂಗಳೂರು: ಸಂಘಟನ ಪರ್ವದ ವಿಶೇಷ ಸಭೆಯ ನಿಮಿತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್‌ ಚುಗ್‌ ಸೋಮವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಮಂಗಳವಾರ ಸಭೆ ನಡೆಯಲಿದೆ. ಈ ಸಂದರ್ಭ ಕೆಲವು ಜಿಲ್ಲಾಧ್ಯಕ್ಷರು ಯತ್ನಾಳ್‌, ರಮೇಶ್‌ ಜಾರಕಿ ಹೊಳಿ, ಕುಮಾರ ಬಂಗಾರಪ್ಪ, ಅರವಿಂದ ಲಿಂಬಾವಳಿ ಮತ್ತಿತರರ ವಿರುದ್ಧ ದೂರು ನೀಡುವ ಸಾಧ್ಯತೆ ಇದೆ.

ಕೇಂದ್ರ ಶಿಸ್ತು ಸಮಿತಿ ನೀಡಿದ ನೋಟಿಸ್‌ಗೆ ಸೂಕ್ತ ಉತ್ತರ ನೀಡುತ್ತೇನೆ. ಜತೆಗೆ ರಾಜ್ಯ ಘಟಕದ ಪ್ರಸ್ತುತ ಸ್ಥಿತಿಗತಿ ಬಗ್ಗೆ ವಿವರಣೆಯನ್ನೂ ನೀಡುತ್ತೇನೆ. ಹಿಂದುತ್ವದ ಬಗೆಗಿನ ನನ್ನ ಬದ್ಧತೆ, ಭ್ರಷ್ಟಾಚಾರ, ವಕ್ಫ್ ಹಾಗೂ ಕುಟುಂಬ ರಾಜಕಾರಣದ ವಿರುದ್ಧದ ನನ್ನ ಹೋರಾಟ ಮುಂದುವರಿಯುತ್ತದೆ.
-ಬಸನಗೌಡ ಪಾಟೀಲ್‌ ಯತ್ನಾಳ್‌, ಶಾಸಕ

ನೋಟಿಸ್‌ಗೆ ನಾವು ಸಮರ್ಥವಾಗಿಯೇ ಉತ್ತರ ಕೊಡುತ್ತೇವೆ. ಏನೇ ಬಂದರೂ ಯತ್ನಾಳ್‌ ಬೆನ್ನಿಗೆ ನಿಲ್ಲುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇನ್ನೂ ಬಹಳ ಸಣ್ಣ ಹುಡುಗ. ಅವನಿಗೆ ಅಧ್ಯಕ್ಷ ಹುದ್ದೆ ನಿಭಾಯಿಸಲು ಆಗುವುದಿಲ್ಲ. ರಾಜಕಾರಣ ಗೊತ್ತಿಲ್ಲ. ಹೀಗಾಗಿ ಆದಷ್ಟು ಬೇಗ ಹುದ್ದೆ ತ್ಯಾಗ ಮಾಡಬೇಕು.
-ರಮೇಶ್‌ ಜಾರಕಿಹೊಳಿ, ಶಾಸಕ

ಯತ್ನಾಳ್‌ ಅವರಿಗೆ ಇವತ್ತಷ್ಟೇ ನೋಟಿಸ್‌ ನೀಡಿದ್ದಾರೆ. 10 ದಿನ ಇದೆ. ನಾನು ಆ ಬಗ್ಗೆ ಹೆಚ್ಚೇನೂ ಹೇಳಲು ಬಯಸುವುದಿಲ್ಲ. ನೋಟಿಸ್‌ ನಿಜವೋ, ಸುಳ್ಳೋ ಎಂಬುದನ್ನು ಕಾಲವೇ ಹೇಳುತ್ತದೆ.
– ಬಿ.ವೈ. ವಿಜಯೇಂದ್ರ,
ಬಿಜೆಪಿ ರಾಜ್ಯಾಧ್ಯಕ್ಷ

ಟಾಪ್ ನ್ಯೂಸ್

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

7

‌RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್‌ ಕುಮಾರ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

arrest-woman

Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

POlice

Manipal: ವೇಶ್ಯಾವಾಟಿಕೆ; ನಾಲ್ವರುಪೊಲೀಸರ ವಶಕ್ಕೆ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.