ಭ್ರಷ್ಟಾಚಾರದ ವಿಚಾರವಾಗಿ ಬಿಜೆಪಿ ಸುಮ್ಮನಿರುವುದು ಅಪರಾಧ: ಎಂ. ಬಿ.ಪಾಟೀಲ್
Team Udayavani, May 10, 2022, 2:35 PM IST
ಬೆಂಗಳೂರು: 13, 14 , 15 ಉದಯಪುರದಲ್ಲಿ ಚಿಂತನ ಶಿಬಿರ ನಡೆಯಲಿದ್ದು, ಅಲ್ಲಿಸುರ್ಜೇವಾಲರನ್ನು ಭೇಟಿ ಮಾಡುತ್ತೇನೆ. ನನ್ನ ಆಕ್ಷನ್ ಪ್ಲಾನ್ ಅವರಿಗೆ ಹೇಳುತ್ತೇನೆ ನಂತರ ಎಲ್ಲಾ ಜಿಲ್ಲೆಗೆ ಭೇಟಿ ಕೊಡುತ್ತೇನೆ. ಜಿಲ್ಲೆಗಳಿಗೆ ಭೇಟಿ ನೀಡಿದ ಬಳಿಕ ರೂಪುರೇಷೆ ಸಿದ್ದಮಾಡುತ್ತೇವೆ ಎಂದು ಮಾಜಿ ಸಚಿವ ಎಂ. ಬಿ.ಪಾಟೀಲ್ ಹೇಳಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರ ಮಾಡಿಲ್ಲವೇ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಮಾತನಾಡಿ, ನಾವು ಮಾಡಿದರೆ ಆರೋಪ ಮಾಡಬಹುದಿತ್ತು. ಆಗ ಇವರು ಸುಮ್ಮನಿದ್ದಿದ್ದು ಯಾಕೆ? ಸುಮ್ಮನಿರುವುದು ಅಪರಾಧವಲ್ಲವೇ? ಮೂರು ವರ್ಷ ಆಯ್ತು ತನಿಖೆ ಮಾಡಬಹುದಿತ್ತಲ್ಲಾ? ಯಾಕೆ ಯಾವ ತನಿಖೆ ಮಾಡಲಿಲ್ಲ. ಎಲ್ಲದರಲ್ಲೂ ಭ್ರಷ್ಟಾಚಾರದ ಆರೋಪ ಬರುತ್ತಿಲ್ಲವೇ? ಬಿ.ಸಿ.ಪಾಟೀಲ್ ಆಪರೇಷನ್ ಗೆ ಹೋದವರಲ್ಲವೇ? ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಅಶ್ವತ್ಥ್ ನಾರಾಯಣ್ ಮೇಲೆ ಆರೋಪ ವಿಚಾರದ ಕುರಿತು ಮಾತಮಾಡಿ, ನಾವು ಯಾವುದನ್ನು ಬಿಟ್ಟಿಲ್ಲ. ಅಶ್ವತ್ಥ್ ನಾರಾಯಣ್ ಮೊದಲು ರಾಜೀನಾಮೆ ಕೊಡಬೇಕು. ಸಚಿವರಾಗಿರುವುದರಿಂದ ತನಿಖೆ ಮಾಡಲ್ಲ. ಸಬ್ ಇನ್ಸ್ ಪೆಕ್ಟರ್ ತನಿಖೆ ಮಾಡೋಕೆ ಸಾಧ್ಯವೇ? ಹಾಗಾಗಿ ಅಶ್ವತ್ಥ್ ನಾರಾಯಣ್ ರಾಜೀನಾಮೆ ನೀಡಬೇಕು ಎಂದರು.
ಭ್ರಷ್ಟಾಚಾರ ಮಾಡಿದವರನ್ನು ಹೊರಗೆ ಹಾಕುತ್ತಾರೆ. ಧ್ವನಿ ಎತ್ತಿದವರಿಗೆ ನೊಟೀಸ್ ಕೊಡುತ್ತಾರೆ. ಪಿಎಸ್ ಐ ನೇಮಕಾತಿಯಲ್ಲಿ ಅಶ್ವತ್ಥ್ ನಾರಾಯಣ್ ಸಹೋದರನ ಹೆಸರಿದೆ. ಅವರಿಗೆ ಯಾಕೆ ನೊಟೀಸ್ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ಉಡುಪಿ: ಕೊರಗ ಸಮುದಾಯದ ಫಲಾನುಭವಿಗೆ ಬಿಜೆಪಿ ನಿರ್ಮಿಸಿದ “ದೀನ್ ದಯಾಳ್ ನಿವಾಸ” ಹಸ್ತಾಂತರ
ಅಶ್ವತ್ಥ್ ನಾರಾಯಣ್ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಮಗಳು, ನನ್ನಮಗ ಸ್ನೇಹಿತರು. ಹಾಗಾಗಿ ಭೇಟಿ ಮಾಡುವುದು ಸ್ವಾಭಾವಿಕ. ಅವರನ್ನು ನಾನು ಭೇಟಿ ಮಾಡಲ್ಲ ಅಂತ ಏನೂ ಇಲ್ಲ. ಅವರನ್ನು ನಾನು ಭೇಟಿ ಮಾಡಿಲ್ಲ. ಭೇಟಿ ಮಾಡಬಾರದು ಅಂತ ಏನೂ ಇಲ್ಲ. ನಾನು ಪ್ರಚಾರ ಸಮಿತಿ ಅಧ್ಯಕ್ಷನಾಗಿದ್ದೇನೆ. ಅವರು ಮತ್ತೊಂದು ಪಕ್ಷದ ಸೀನಿಯರ್ ಲೀಡರ್ ಇದ್ದಾರೆ. ಎಂಜಿನಿಯರಿಂಗ್ ಪ್ರೋಗ್ರಾಂ ಇತ್ತು. ಅಲ್ಲಿಗೆ ನನ್ನನ್ನು ಆಹ್ವಾನಿಸಿದ್ದರು. ನಾನು ಹೋಗಲಿಲ್ಲ. ಅಶ್ವತ್ಥ ನಾರಾಯಣ್ ಭೇಟಿ ನಿನ್ನೆ ಆಗಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.