ಬೋಟ್ ದುರಂತ: 14 ಶವ ಸಂಬಂಧಿಕರಿಗೆ ಹಸ್ತಾಂತರ
Team Udayavani, Jan 24, 2019, 12:52 AM IST
ಕಾರವಾರ: ಕೂರ್ಮಗಡ ಬೋಟ್ ದುರಂತದಲ್ಲಿ ಮೃತಪಟ್ಟ 14 ಜನರ ಶವಗಳನ್ನು ಅವರವರ ಸಂಬಂಧಿಕರಿಗೆ ಮಂಗಳವಾರ ರಾತ್ರಿಯೇ ಹಸ್ತಾಂತರಿಸಲಾಯಿತು. ಶವಗಳನ್ನು ಅವರ ಗ್ರಾಮಕ್ಕೆ ತಲುಪಿಸಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು. ಬೋಟ್ ದುರಂತದಲ್ಲಿ ಕಾಣೆಯಾಗಿರುವ ಕೀರ್ತಿ ಸೋಮಪ್ಪ ಬಾಳಲಕೊಪ್ಪ (7) ಬುಧವಾರ ಸಂಜೆ ಸಿಕ್ಕಿದ್ದು, ಸಂದೀಪ ಪರುಶುರಾಮ (10)ಗಾಗಿ ಕರಾವಳಿ ಕಾವಲು ಪಡೆ, ನೇವಿ ಹೆಲಿಕಾಪ್ಟರ್ ಚೇತಕ್, ನೇವಿ, ಕೋಸ್ಟ್‌ಗಾರ್ಡ್‌ನ ಅತ್ಯಾಧುನಿಕ ಬೋಟ್‌ಗಳು ಅರಬ್ಬಿ ಸಮುದ್ರದ ವ್ಯಾಪ್ತಿಯಲ್ಲಿ ಹುಟುಕಾಟ ಮುಂದುವರೆಸಿವೆ.
ಪರುಶುರಾಮ ಬಾಳಲಕೊಪ್ಪ, ಅವರ ಪತ್ನಿ ಭಾರತಿ ಹಾಗೂ ಮಕ್ಕಳಾದ ಸಂಜೀವಿನಿ, ಸೌಜನ್ಯ ಅವರ ಶವಗಳನ್ನು ಅವರ ಕುಟುಂಬದವರಿಗೆ ಮಂಗಳವಾರ ರಾತ್ರಿ ಹಸ್ತಾಂತರಿಸಲಾಯಿತು. ಇದೇ ದುರಂತದಲ್ಲಿ ಸಾವನ್ನಪ್ಪಿದ ಮಂಜವ್ವ ಹಾಗೂ ಮಕ್ಕಳಾದ ಕಿರಣ್, ಅರುಣ್ ಅವರ ಶವಗಳನ್ನು ಮರಣೋತ್ತರ ಪರೀಕ್ಷೆ ನಂತರ ಮಂಜವ್ವ ಅವರ ಪತಿ ಸೋಮಪ್ಪ ಬಾಳಲಕೊಪ್ಪ ಅವರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾಡಳಿತ ಹಾವೇರಿಯ ಹೊಸೂರಿಗೆ ಶವ ಸಾಗಿಸಲು ವ್ಯವಸ್ಥೆ ಮಾಡಿತ್ತು. ಕಾರವಾರ ಸಮೀಪದ ಕಡವಾಡದ ಗಣಪತಿ ಕೋಠಾರಕರ್, ಮೀನಾಕ್ಷಿ ಗಣಪತಿ ಕೋಠಾರಕರ್, ರಾಮನಗುಳಿಯ ನಿಲೇಶ್ ರೋಹಿದಾಸ ಪೆಡ್ನೇಕರ್, ಕೊಪ್ಪಳದ ಅನ್ನಕ್ಕ ಇಂಗಳದಾಳ, ಪೊಂಡಾದ ಗೀತಾ ಜೆ.ತಳೇಕರ, ಶ್ರೇಯಸ್ ಪಾವುಸ್ಕರ್ ಅವರ ಶವಗಳನ್ನು ಸಹ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಗ್ರಾಮಸ್ಥರಿಗೆ ಶಾಸಕಿ ನೆರವು: ಹೊಸೂರು ಗ್ರಾಮದಿಂದ ಬಂದಿದ್ದ 80 ಜನರಿಗೆ ಶಾಸಕಿ ರೂಪಾಲಿ ನಾಯ್ಕ ವಾಹನ ವ್ಯವಸ್ಥೆ ಮಾಡಿ, ಧೈರ್ಯ ತುಂಬಿ ಹೊಸೂರಿಗೆ ಕಳುಹಿಸಿದರು. ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ನೆರವನ್ನು ಮಾಡಿಸುವುದಾಗಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ದುರಂತದಲ್ಲಿ ಬದುಕುಳಿದ ಪರುಶುರಾಂ ಬಾಳಲಕೊಪ್ಪ ಅವರ ಏಕೈಕ ಪುತ್ರ ಗಣೇಶ್ ಪರುಶುರಾಮ ಅಜ್ಜಿಯ ಮಡಿಲು ಸೇರಿ ಸ್ವಂತ ಊರಿಗೆ ಪಯಣ ಬೆಳಸಿದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Revenue Officers: ನಿಮಗೆ ಸಲಾಂ ಹೊಡೀಬೇಕಾ?: ತಹಶೀಲ್ದಾರ್‌ಗೆ ಕಂದಾಯ ಸಚಿವ ತರಾಟೆ
MUST WATCH
ಹೊಸ ಸೇರ್ಪಡೆ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ
Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ
New Method: ಕಾಣೆಯಾದ ಹೋರಿ ಹುಡುಕಲು “ಜಿಪಿಎಸ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.