ಬ್ರಹ್ಮರಥ ಕುಕ್ಕೆ ಪುರ ಪ್ರವೇಶ ಇಂದು

ವಿವಿಧ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆ

Team Udayavani, Oct 2, 2019, 4:02 AM IST

c-42

ಸುಬ್ರಹ್ಮಣ್ಯ: ರಥಕ್ಕೂ ದೇವಸ್ಥಾನಕ್ಕೂ ಹತ್ತಿರದ ನಂಟು. ದೇವಸ್ಥಾನಗಳ ಉತ್ಸವದ ಪ್ರತೀಕವಾಗಿ ಬಳಸುವ ರಥ ದೇವರ ವಾಹನವೇ ಆಗಿರುತ್ತದೆ ಎನ್ನುವುದು ನಂಬಿಕೆ. ಸುಬ್ರಹ್ಮಣ್ಯ ಕ್ಷೇತ್ರದ ಬ್ರಹ್ಮರಥ ಪ್ರಸಿದ್ಧವಾಗಿದೆ, ಮಹಿಮಾನ್ವಿತವೂ ಆಗಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರತಿದಿನ ಸಹಸ್ರಾರು ಭಕ್ತರು ಭೇಟಿ ನೀಡು ತ್ತಿರುತ್ತಾರೆ. ಚಂಪಾ ಷಷ್ಠಿ ಮಹೋತ್ಸವದಂದು ಎಳೆಯುವ ತೇರನ್ನು ಕಣ್ತುಂಬಿಕೊಳ್ಳುತ್ತಾರೆ. 450ಕ್ಕೂ ಅಧಿಕ ವರ್ಷಗಳ ಬ್ರಹ್ಮರಥ ಶಿಥಿಲಾವಸ್ಥೆಗೆ ತಲುಪಿದ್ದರಿಂದ ನೂತನ ಬ್ರಹ್ಮರಥ ಸಮರ್ಪಣೆಯಾಗುತ್ತಿದೆ.

ಕೋಟೇಶ್ವರದಲ್ಲಿ ಸಿದ್ಧಗೊಂಡ ಬ್ರಹ್ಮರಥ ಅ. 2ರಂದು ಕುಕ್ಕೆ ಪುರ ಪ್ರವೇಶಿಸಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಭಕ್ತರು ಕಾತರಿಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥವನ್ನು ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪ ನಾಯಕನು (ಕ್ರಿ.ಶ. 1582-1629)ನಿರ್ಮಿಸಿ ಕೊಟ್ಟಿದ್ದನು ಎನ್ನುವುದು ದಾಖಲೆಯಿಂದ ತಿಳಿದುಬರುತ್ತದೆ. 1923ರಲ್ಲಿ ಗಣಪತಿ ರಾವ್‌ ಐಗಳ ಅವರ ಪ್ರಾಚೀನ ಇತಿಹಾಸ ದಾಖಲೆಗಳಲ್ಲಿ ಈ ಅಂಶಗಳಿವೆ. ಪ್ರತಿಮಾಶಾಸ್ತ್ರ, ಚಿತ್ರಕಲೆ, ಜ್ಯಾಮಿತಿಕ ಅಂಶ, ಪೌರಾಣಿಕ ಸನ್ನಿವೇಶಗಳ ಹಿನ್ನೆಲೆ ತಿಳಿದ ಶಿಲ್ಪಿಗಳು ರಥ ರಚಿಸಿದ್ದಾಗಿ ತಿಳಿದು ಬರುತ್ತದೆ.

ಜೀವರಾಶಿಗಳ ಚಿತ್ರ
ಬ್ರಹ್ಮರಥದಲ್ಲಿ 6 ಚಕ್ರಗಳಿವೆ. ಪ್ರತಿ ಚಕ್ರದ ಎತ್ತರ ಎಂಟು ಅಡಿ 6 ಅಂಗುಲ. ಒಂದು ಚಕ್ರದಲ್ಲಿ ಮರದ 5 ಬೃಹತ್‌ ತುಂಡುಗಳು ಇವೆ. ರಥದ ಚಕ್ರಗಳ ಅಗಲ 21 ಅಂಗುಲ, ದಪ್ಪ 10 ಅಂಗುಲ ಇದೆ. ಬ್ರಹ್ಮರಥದಲ್ಲಿ ಜೀವರಾಶಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಇವುಗಳಲ್ಲಿ ಅಸಂಖ್ಯ ವಿಸ್ಮಯಗಳಿದ್ದು, ಕಾಲಾಂತರದಲ್ಲಿ ಬಹುತೇಕ ಚಿತ್ರಗಳು ನಶಿಸಿದ್ದವು. ಅದೇ ಮಾದರಿಯಲ್ಲಿ ಈಗಿನ ಬ್ರಹ್ಮರಥ ನಿರ್ಮಾಣಗೊಂಡಿದೆ.

ಅದ್ಭುತ ಕೆತ್ತನೆಗಳಿವೆ
ನೂತನ ರಥದಲ್ಲಿ ಈ ಮೊದಲಿನಂತೆ 16 ಅಂತಸ್ತು ಹೊಂದಿದೆ. ಅವುಗಳಲ್ಲಿ ಕ್ರಮವಾಗಿ ಆರು ನೇಗಳನ ಸಾಲುಗಳು, ಆನೆ ಸಾಲು, ಹೂವಿನ ಸಾಲು, ದ್ರಾಕ್ಷಿ ಬಳ್ಳಿಗಳ ಸಾಲು, ಪದ್ಮ ಸಾಲು, ವಿಗ್ರಹಗಳ ಒಂದನೇ ಸಾಲು, ಬಳ್ಳಿಗಳ ಸಾಲು, ಕೊನೆ ಅಡ್ಡೆಗಳ ಸಾಲು, ವಿಗ್ರಹಗಳ ಎರಡನೇ ಸಾಲು, ವಿಗ್ರಹಗಳಿಂದ ಕೂಡಿದ ಕೊನೆ ಅಡ್ಡೆಗಳ ಎರಡನೇ ಸಾಲು, ಕೊನೆ ಅಡ್ಡೆಗಳ ಮೂರನೇ ಸಾಲು, ವಿಗ್ರಹಗಳ ನಾಲ್ಕನೇ ಸಾಲು, ಬಳ್ಳಿಗಳ ಸಾಲು ಹಾಗೂ ಕೊನೆಯ ಅಂತಸ್ತಿನಲ್ಲಿ ಮುಚ್ಚಿಗೆ ನಿರ್ಮಿಸ ಲಾಗಿದೆ. ನೂತನ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ವಿಗ್ರಹ. ಕುದುರೆ ಸವಾರರ ವಿಗ್ರಹ, ಸಿಂಹಗಳು, ಬೃಹತ್‌ ಗಾತ್ರದ ದ್ವಾರಪಾಲಕ ವಿಗ್ರಹಗಳ ಅದ್ಭುತ ಕೆತ್ತನೆಗಳಿವೆ.

25 ಟನ್‌ ತೂಕ
ರಥವು ಸ್ಕಂದ್ಯ ಶಿಲ್ಪ ಪ್ರಕಾರ ರಚನೆಗೊಂಡಿದ್ದು, ರಥವು ನೆಲದಿಂದ ಅಡ್ಡೆಯ ತನಕ 17 ಅಡಿ ಎತ್ತರ ಹೊಂದಿದೆ. ಚಿತ್ರಪಟ 4 ಕಾಲು ಅಡಿ ಎತ್ತರ, ದೊಡ್ಡಗೂಡು 20 ಅಡಿ ಎತ್ತರ, ಸಣ್ಣಗೂಡು 8 ಅಡಿ ಎತ್ತರ, ಕಲಶ 6.5 ಅಡಿ ಎತ್ತರವಿದೆ. 16 ಚಕ್ರಗಳನ್ನು ಹೊಂದಿದ್ದು, 8.5 ಅಡಿ ಎತ್ತರವಿದೆ. ನೆಲದಿಂದ ಕಲಶದ ತುದಿ ತನಕ 64.5 ಅಡಿ ಎತ್ತರದ ರಥದ ತೂಕ 25 ಟನ್‌ ಇದೆ. ಶಿಲ್ಪಿ ಲಕ್ಷ್ಮೀನಾರಾಯಣ ಕೋಟೇಶ್ವರ ನೇತೃತ್ವದಲ್ಲಿ 65 ಮಂದಿ ಶಿಲ್ಪಿಗಳು ಕೆತ್ತನೆ ನಡೆಸಿದ್ದಾರೆ. ಬೋಗಿ, ಸಾಗುವಾನಿ ಮರ ಬಳಸಿಕೊಳ್ಳಲಾಗಿದೆ. ಹಲಸಿನ ಮರದಿಂದ ದೇವರ ಪೀಠ ನಿರ್ಮಿಸಲಾಗಿದೆ.

ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್‌ ಶೆಟ್ಟಿ ಕಡಬ 2.50 ಕೋಟಿ ರೂ. ವೆಚ್ಚದಲ್ಲಿ ರಥ ಸಮರ್ಪಿಸಿದ್ದು, ರಥ ಆಗಮಿಸುವ ಕ್ಷಣ ಐತಿಹಾಸಿಕ ದಿನವಾಗಲಿದೆ. 400 ವರ್ಷಗಳ ಬಳಿಕ ರಥ ಆಗಮಿಸುತ್ತಿರುವುದು ಇಂದಿನ ತಲೆಮಾರಿನ ಜನತೆಗೆ ಅದ್ಭುತ ಅನುಭವ ಮತ್ತು ಪುಣ್ಯದ ದಿನ.

ಸಂಭ್ರಮದ ವಾತಾವರಣ
ಪುರ ಪ್ರವೇಶಕ್ಕೆ ಕುಕ್ಕೆಯಲ್ಲಿ ಅದ್ದೂರಿ ಸಿದ್ಧತೆಗಳು ನಡೆದಿವೆ. ನಗರವನ್ನು ಅದ್ಭುತವಾಗಿ ಸಿಂಗರಿಸಲಾಗಿದೆ. ಕೇಸರಿ ಧ್ವಜ, ಪತಾಕೆಗಳು ರಾರಾಜಿಸುತ್ತಿವೆ. ಕಣ್ಣೆತ್ತಿ ನೋಡಿದಲ್ಲೆಲ್ಲ ಫ್ಲೆಕ್ಸ್‌, ಬ್ಯಾನರ್‌ಗಳು ಗೋಚರಿಸುತ್ತಿವೆ. ರಸ್ತೆಗಳ ತಾತ್ಕಾಲಿಕ ದುರಸ್ತಿ ನಡೆಯುತ್ತಿದೆ. ಕುಲ್ಕುಂದ, ಕುಮಾರಧಾರಾ, ಕಾಶಿಕಟ್ಟೆ ಈ ಮೂರು ಕಡೆ ರಥ ಆಕೃತಿಯ ದ್ವಾರಗಳು ನಿರ್ಮಾಣಗೊಂಡಿವೆ. ಕೈಕಂಬದಿಂದ ರಥ ಮೆರವಣಿಗೆ ಬರುವ ವೇಳೆ ಪೂರ್ಣಕುಂಭ ಸ್ವಾಗತ, ಮಂಗಲ ಮಂತ್ರ ಘೋಷ, ಕುಣಿತ ಭಜನೆ, ಗೊಂಬೆ ಕುಣಿತ. 15ಕ್ಕೂ ಅಧಿಕ ಸ್ತಬ್ಧಚಿತ್ರ, ಬೊಂಬೆ ಕುಣಿತ, ಕೇರಳದ ಚೆಂಡೆ, ವಿವಿಧ ಕಲಾತಂಡಗಳ ನೃತ್ಯ ತಂಡಗಳು ಭಾಗವಹಿಸಲಿವೆ.

ಅಕರ್ಷಕ, ಸುಡುಮದ್ದು ಪ್ರದರ್ಶನವಿರಲಿದೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು, ಗಣ್ಯರು, ಭಕ್ತರು ಭಾಗವಹಿಸಲಿರುವರು.

ಸಿಂಗಾರಗೊಂಡಿದೆ ಸುಬ್ರಹ್ಮಣ್ಯ ಕ್ಷೇತ್ರ
ಸುಬ್ರಹ್ಮಣ್ಯ: ಬ್ರಹ್ಮರಥ ಬುಧವಾರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಪ್ರವೇಶಿಸುವ ಹಿನ್ನೆಲೆಯಲ್ಲಿ ನಗರವನ್ನು ಸಿಂಗರಿಸಲಾಗಿದೆ.

ರಥ ಸ್ವಾಗತಿಸಿ ಮೆರವಣಿಗೆ ಸಾಗಿ ಬರುವ ಕೈಕಂಬದಿಂದ ರಥಬೀದಿ ತನಕದ 8 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಕೇಸರಿ ತೋರಣ ಕಟ್ಟಲಾಗಿದೆ. ನಡುವೆ ಅಲ್ಲಲ್ಲಿ ಸಂಘ-ಸಂಸ್ಥೆಗಳಿಂದ ಸ್ವಾಗತ ಬ್ಯಾನರ್‌ ಹಾಕಲಾಗಿದೆ. ಕೈಕಂಬದಲ್ಲಿ ಸುಂದರವಾಗಿ ಸ್ವಾಗತ ದ್ವಾರ ನಿರ್ಮಿಸಿದ್ದು, ಕಣ್ಮನ ಸೆಳೆಯುತ್ತಿದೆ.

ಕುಲ್ಕುಂದ, ಕುಮಾರಧಾರಾ, ಕಾಶಿಕಟ್ಟೆಯಲ್ಲಿ ರಥದ ಮಾದರಿಯ ಮೂರು ಸ್ವಾಗತ ಗೋಪುರಗಳನ್ನು ಜನಪದೀಯ ಶೈಲಿಯಲ್ಲಿ ಸ್ಥಳೀಯರು ರಚಿಸಿದ್ದಾರೆ. ಕುಮಾರಧಾರಾದಿಂದ ರಥಬೀದಿ ತನಕ ರಸ್ತೆ ಬದಿ ಸಾಲು ಬಣ್ಣದ ಕೊಡೆಗಳನ್ನು ಇರಿಸಲಾಗಿದೆ. ವಿವಿಧ ಮುಖವರ್ಣಿಕೆಗಳ ಚಿತ್ರಗಳು ರಸ್ತೆಯ ಎರಡೂ ಬದಿ ಮನ ಸೆಳೆಯುತ್ತಿವೆ. ರಸ್ತೆಯುದ್ದಕ್ಕೂ ಮಾವಿನ ಎಲೆ ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿದೆ. ಈ ಐತಿಹಾಸಿಕ ಕ್ಷಣದಲ್ಲಿ ಭಾಗವಹಿಸುವ ಅವಕಾಶ ಜನತೆಗೆ ಒದಗಿ ಬಂದಿದ್ದು, ಆ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ.

ಬ್ರಹ್ಮರಥವು ಮಂಗಳವಾರ ಬಲ್ಯ ದೇವಸ್ಥಾನದಲ್ಲಿ ತಂಗಿ, ಅ. 2ರ ಬೆಳಗ್ಗೆ 8ಕ್ಕೆ ಹೊರಟು ಕಡಬ ಮಾರ್ಗ ವಾಗಿ ಕುಕ್ಕೆ ಕ್ಷೇತ್ರ ತಲುಪಲಿದೆ. ಅಪ ರಾಹ್ನ 2ಕ್ಕೆ ರಥವು ಕುಲ್ಕುಂದ ತಲುಪುವ ನಿರೀಕ್ಷೆ ಇದ್ದು, ಅಲ್ಲಿಂದ ಮೆರವಣಿಗೆ ಕ್ಷೇತ್ರಕ್ಕೆ ಸಾಗಲಿದೆ.

ಸ್ವಾಗತಕ್ಕೆ ಏರ್ಪಾಡು
ಕೋಟೇಶ್ವರದಿಂದ ಹೊರಟು ರಥ ಸಾಗಿ ಬಂದ ದಾರಿಯುದ್ದಕ್ಕೂ ಅನೇಕ ಮಂದಿ ಗಣ್ಯರು ಸ್ವಾಗತ ಕೋರಿರುವರು. ಆಯಾ ತಾಲೂಕುಗಳ ಶಾಸಕರು, ಗಣ್ಯರು ಪಾಲ್ಗೊಂಡಿರುವರು. ಬ್ರಹ್ಮರಥ
ಅ. 2ರಂದು ಕ್ಷೇತ್ರ ಪ್ರವೇಶಿಸಲಿದ್ದು, ಅದ್ದೂರಿ ಸ್ವಾಗತಕ್ಕೆ ಎಲ್ಲ ಏರ್ಪಾಡು ಮಾಡಲಾಗಿದೆ.
– ನಿತ್ಯಾನಂದ ಮುಂಡೋಡಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ, ಕುಕ್ಕೆ ಸುಬ್ರಹ್ಮಣ್ಯ

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌

Shiggvi-Yatnal

Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್‌

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.