Brand Bengaluru ; 30 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ: ಡಿಸಿಎಂ
Team Udayavani, Jul 15, 2023, 9:20 PM IST
ಬೆಂಗಳೂರು: ”ಬ್ರ್ಯಾಂಡ್ ಬೆಂಗಳೂರು” ಕುರಿತು ಬೆಂಗಳೂರಿನ ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ನಾಗರಿಕ ಸಂಘ, ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಶನಿವಾರ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಸಂವಾದ ನಡೆಸಿದರು.
ಈ ವೇಳೆ ಪದಾಧಿಕಾರಿಗಳು ಬೆಂಗಳೂರಿನ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಅಂಶಗಳ ಬಗ್ಗೆ ಚರ್ಚಿಸಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.
“ಇಂದು ನಾನು ಬೆಂಗಳೂರಿನ ಜನರ ಸಲಹೆಯನ್ನು ಸ್ವೀಕರಿಸಿದ್ದೇನೆ. ನನಗೆ 30 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಬ್ರಾಂಡ್ ಬೆಂಗಳೂರು ಭಾಗವಾಗಲು ಅಪಾರ್ಟ್‌ಮೆಂಟ್ ಅಸೋಸಿಯೇಷನ್ ವಿನಂತಿಸಿದ್ದೇನೆ. ಕೆಲ ದಿನಗಳಲ್ಲಿ ನಾನು ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ಭೇಟಿಯಾಗಿ ಅವರ ಅಭಿಪ್ರಾಯಗಳನ್ನು ಪಡೆಯುತ್ತೇನೆ” ಎಂದು ಡಿಕೆ ಶಿವಕುಮಾರ್ ಹೇಳಿದರು.
ಬ್ರ್ಯಾಂಡ್ ಬೆಂಗಳೂರು ಯೋಜನೆಗೆ ನಾಗರಿಕರೇ ಧ್ವನಿ. ಅವರ ಸಹಕಾರ ಹಾಗೂ ಬೆಂಬಲದ ಮೂಲಕ ಬೆಂಗಳೂರಿನ ಅಭಿವೃದ್ಧಿ ಸಾಧ್ಯ. ಹೀಗಾಗಿ ಸಕಾರಾತ್ಮಕವಾಗಿರುವ ಸಂಗ್ರಹಿತ ಸಲಹೆಗಳನ್ನು ಪರಿಷ್ಕರಿಸಿ ಪರಿಗಣಿಸಲು ಉನ್ನತ ಸಮಿತಿಯೊಂದನ್ನು ರೂಪಿಸಲಾಗಿದೆ. ಈಗ ಕೆಲವರ ಸಲಹೆಗಳನ್ನಷ್ಟೇ ಪರಿಗಣಿಸದೆ ಪ್ರತಿಯೊಬ್ಬರ ಸಲಹೆಗಳಿಗೂ ಆದ್ಯತೆ ನೀಡಲಾಗುತ್ತದೆ. ಬೆಂಗಳೂರಿನ ಸಂಚಾರ ನಿರ್ವಹಣೆ, ಮೂಲಸೌಲಭ್ಯ, ಮಳೆ ನೀರು ಸರಾಗವಾಗಿ ಹರಿಯುವಿಕೆ, ತಂತ್ರಜ್ಞಾನ ಬಳಕೆ ಸೇರಿದಂತೆ ವಿವಿಧ ಏಳು ಅಂಶಗಳ ಮೇಲೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದ್ದು, ಬೆಂಗಳೂರಿನ ನಾಗರಿಕರು, ತಜ್ಞರು, ಪರಿಣಿತರು ಹಾಗೂ ಆಸಕ್ತರು http://brandbengaluru.karnataka.gov.in ವೆಬ್‌ಸೈಟ್‌ಗೆ ಲಾಗಿನ್ ಆಗಿ ನಿಮ್ಮ ಸಲಹೆಗಳನ್ನು ನಮಗೆ ಕಳಿಸಬಹುದು ಎಂದು ಡಿಸಿಎಂ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.