ಮಂಡ್ಯ:ಮದುವೆ ದಿನವೇ ಪರೀಕ್ಷೆಗೆ ಹಾಜರಾದ ವಧು!
Team Udayavani, May 9, 2018, 3:46 PM IST
ಮಂಡ್ಯ: ಹೆಣ್ಣಿಗೆ ಮದುವೆ ಅನ್ನುವುದು ಮಹತ್ವದ ದಿನ ಆದಿನ ಮದುಮಗಳಾಗಿ ಹಸೆಮಣೆ ಏರುವ ಗಳಿಗೆ. ಬೇರೆ ಯಾವುದೇ ಕೆಲಸವು ಮದುಮಗಳಿಗಿಲ್ಲ. ಆದರೆ ಕೆ.ಆರ್.ಪೇಟೆಯಲ್ಲಿ ದ್ವಿತೀಯ ಬಿ.ಕಾಂ ವಿದ್ಯಾರ್ಥಿನಿ ಪರೀಕ್ಷೆ ಬರೆದು ಮದುವೆ ಮಂಟಪಕ್ಕೆ ತೆರಳಿ ಸುದ್ದಿಯಾಗಿದ್ದಾಳೆ.
ಕಾವ್ಯಾ ಎಂಬಾಕೆಗೆ ಲೋಹಿತ್ ಎನ್ನುವ ವರನೊಂದಿಗೆ ವಿವಾಹ ನಿಗದಿಯಾಗಿತ್ತು. ಆದರೆ ಇಂದೇ ಟ್ಯಾಕ್ಸೆಷನ್ ಪರೀಕ್ಷೆಯೂ ಇತ್ತು. 9.15 ರ ವೇಳೆ ಸಾಲಂಕೃತ ವಧುವಾಗಿ ಪರೀಕ್ಷಾ ಕೊಠಡಿಯಲ್ಲಿ ಹಾಜರಿದ್ದ ಕಾವ್ಯಾ, ಸಂಭ್ರಮದಲ್ಲಿಯೇ ಪರೀಕ್ಷೆ ಬರೆದು ಮಹೂರ್ತಕ್ಕೆ ಸರಿಯಾಗಿ ಮದುವೆ ಮಂಟಪಕ್ಕೆ ತೆರಳಿದ್ದಾರೆ.
ಪ್ರತಿಭಾವಂತೆಯಾಗಿರುವ ಕಾವ್ಯಾ ಈಗಾಗಲೇ ಬರೆದಿರುವ 3 ಸೆಮ್‌ಗಳಲ್ಲಿ 90% ಅಂಕ ಪಡೆದಿದ್ದರು. ಈ ಬಾರಿ ಪರೀಕ್ಷೆ ಬರೆಯಲಾಗದೆ ಉಳಿದುಹೋಗಬಾರದು ಎಂದು ಕಾವ್ಯಾ ಮನೆಯವರು ಮತ್ತು ಗಂಡನ ಮನೆಯವರು ಪರೀಕ್ಷೆ ಬರೆಯಲೇಬೇಕೆಂದು ಪ್ರೋತ್ಸಾಹ ನೀಡಿದ್ದಾರೆ. ಈ ನಿರ್ಧಾರಕ್ಕೆ ಸಾಮಾಜಿಕ ತಾಣಗಳು ಸೇರಿದಂತೆ ಎಲ್ಲೆಡೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಅದೇಷ್ಟೋ ಹೆಣ್ಣು ಮಕ್ಕಳು ಮದುವೆಗಾಗಿ ಶಿಕ್ಷಣವನ್ನೇ ಮೊಟಕುಗೊಳಿಸಿದ್ದು, ಪರೀಕ್ಷೆಗಳನ್ನು ತಪ್ಪಿಸಿಕೊಂಡಿದ್ದು ಇದೆ. ಅಂತಹದರಲ್ಲಿ ಈ ಘಟನೆ ಎಲ್ಲರಿಗೂ ಮಾದರಿ ಎನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್ ಸ್ಥಾಪನೆ: ಕೇಂದ್ರ ಸಚಿವ ಜೋಶಿ
BSY POCSO Case: ಜ.10ಕ್ಕೆ ವಿಚಾರಣೆ ಮುಂದೂಡಿದ ಧಾರವಾಡ ಹೈಕೋರ್ಟ್
‘ರಾಜಕೀಯ ನಿವೃತ್ತಿ’ ಸುದ್ದಿಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಸ್ಪಷ್ಟನೆ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.