ಆತ್ಮೀಯತೆಯ ತಾಯಿ ಹೃದಯಿ ಯಡಿಯೂರಪ್ಪ
Team Udayavani, Jul 27, 2021, 6:20 AM IST
ಯಡಿಯೂರಪ್ಪ ಅವರಿಗೆ ಒಮ್ಮೊಮ್ಮೆ ತುಂಬ ಕೋಪ ಬರುತ್ತದೆ. ಕ್ಷಣಾರ್ಧದಲ್ಲೇ ಅದನ್ನು ಮರೆತು ಬಿಡುತ್ತಾರೆ. ಯಾರ ಮೇಲೂ ಕೋಪದಿಂದಾಗಿ ದ್ವೇಷ ಸಾಧನೆ ಮಾಡುವ ಸ್ವಭಾವ ಅವರದ್ದಲ್ಲ. ಎಲ್ಲರನ್ನು ಆತ್ಮೀಯತೆಯಿಂದ ಮಾತನಾಡಿಸುವ ತಾಯಿ ಹೃದಯಿ.
ಮಂಡ್ಯದಿಂದ ಶಿಕಾರಿಪುರಕ್ಕೆ ಅಳಿಯನಾಗಿ ಬಂದು, ಆರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದ ಅವರು, ನಂತರ ಜನ ಸಂಘದ ಜವಾಬ್ದಾರಿಯನ್ನು ವಹಿಸಿಕೊಂಡು, ಪಕ್ಷವನ್ನು ಬಲಪಡಿಸುವಲ್ಲಿ ಅನೇಕ ಹೋರಾಟಗಳನ್ನು ಮಾಡಿದರು. ಅವರದ್ದು ಕ್ಷಣ ಕ್ಷಣಕ್ಕೂ ಹೋರಾಟದ ಬದುಕು, ಹೋರಾಟದ ಅದಮ್ಯ ಚೇತನ ಎಂದರೂ ತಪ್ಪಾಗದು. ಸದಾ ಚಟುವಟಿಕೆ, ಕ್ರಿಯಾಶೀಲತೆ ಹಾಗೂ ವಿನೂತನ ಯೋಜನೆಗಳೊಂದಿಗೆ ಕೆಲಸ ಮಾಡುವುದು ಅವರ ಸ್ವಭಾವದಲ್ಲೇ ಇದೆ. ಶಿಕಾರಿಪುರದಲ್ಲಿ ಪಕ್ಷ ಸಂಘಟನೆಯ ಆರಂಭದ ದಿನದಲ್ಲಿ ತಲೆಗೆ ಗಂಭೀರ ಏಟು ಬಿದ್ದಾಗಲೂ ಅವರ ಧೈರ್ಯ ಕುಂದಲಿಲ್ಲ. ಅಧಿಕಾರಕ್ಕೆ ಬಂದ ನಂತರ ರಾಜಕೀಯ ಕಾರಣಕ್ಕೆ ಅಪಮಾನವಾದಾಗಲೂ ಹೋರಾಟ ಮರೆಯಲಿಲ್ಲ. ಯಾವ ಅವಮಾನದಿಂದಲೂ ಅವರು ಕುಗ್ಗಲಿಲ್ಲ. ಸದಾ ಜನರ ವಿಶ್ವಾಸಗಳಿಸುತ್ತಾ, ಅವರಿತ ಚಟುವಟಿಕೆಯಿಂದ ಮತ್ತೆಮತ್ತೆ ಮೇಲೇಳುತ್ತಲೇ ಬಂದವರು. ಅವರ ನಡೆದು ಬಂದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ, ಕಲ್ಲು ಮುಳ್ಳುಗಳ ಕಾಡುದಾರಿಯಾಗಿತ್ತು. ಆ ಕಾಡು ದಾರಿಯಲ್ಲಿ ಸಾಗಿಬಂದು ರಾಜ್ಯಕ್ಕೆ ಅಮೃತದ ಫಲ ನೀಡಿದ ಧೀಮಂತ ನಾಯಕ.
ನಮ್ಮದು 50 ವರ್ಷಕ್ಕೂ ಮೀರಿದ ಗೆಳೆತನ. ನಾನು ಚಿಕ್ಕವನಾಗಿದ್ದಾಗಿನಿಂದಲೂ ಯಡಿಯೂರಪ್ಪ ಅವರನ್ನು ಬಲ್ಲವ. ನಂತರ ಅವರೊಂದಿಗೆ ಪಕ್ಷ ಸಂಘಟನೆಯಲ್ಲೂ ಕಾರ್ಯ ನಿರ್ವಹಿಸಿದ್ದೇನೆ. ಹಾಗೆಯೇ ಅವರು ಅಧಿಕಾರಕ್ಕೆ ಬಂದ ನಂತರವೂ ಸ್ವಲ್ಪ ಸಮಯ ಅವರೊಂದಿಗೆ ಸೇವೆ ಸಲ್ಲಿಸಿದ್ದೇನೆ. ರಾಜ್ಯದ ಬಡಜನರ ನಾಡಿ ಮಿಡಿತ ಗೊತ್ತಿರುವ ಕೆಲವೇ ಕೆಲವು ನಾಯಕರಲ್ಲಿ ಇವರು ಒಬ್ಬರಾಗಿದ್ದಾರೆ. ಯಡಿಯೂರಪ್ಪನವರಷ್ಟು ಬಾರಿ ಕರ್ನಾಟಕವನ್ನು ಸುತ್ತಿದ, ಪ್ರವಾಸ ಮಾಡಿದ ಇನ್ನೊಬ್ಬ ರಾಜಕಾರಣಿ ವಿಧಾನಸೌಧದ ಒಳಗೆ ಮತ್ತು ಹೊರೆಗೆ ಹೋರಾಟವನ್ನು ನಡೆಸಿದ ಚೈತನ್ಯದ ಚಿಲುಮೆ. ಅಧಿಕಾರದಲ್ಲಿದ್ದಾಗಲೂ ಸದಾ ಬಡ ಜನರ ಕಲ್ಯಾಣಕ್ಕಾಗಿಯೋ ಯೋಜನೆ, ಯೋಜನೆಗಳನ್ನು ರೂಪಿಸುತ್ತಿದ್ದರು.
ಅವರಲ್ಲಿ ಸಂಘಟನಾ ಕೌಶಲ್ಯ ಕರಗತವಾಗಿತ್ತು. ಯಾರಿಗೆ ಯಾವ ಜವಾಬ್ದಾರಿ ನೀಡಿಬೇಕು ಮತ್ತು ಯಾರಿಂದ ಹೇಗೆ ಪಕ್ಷದ ಕಾರ್ಯ ಮಾಡಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆಯಿತ್ತು ಹಾಗೂ ಅದರಂತೆಯೇ ಕಾರ್ಯನಿರ್ವಹಿಸಿದ್ದರು. ಕೇವಲ ಅಧಿಕಾರ ಕ್ಕಾಗಿಯೇ ಪಕ್ಷಕ್ಕೆ ಬರುವವನ್ನು ನೋಡಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎನ್ನುವ ಛಲಗಾರ ಮತ್ತು ರಾಜ್ಯ, ದೇಶ ಮತ್ತು ಧರ್ಮದ ಹಿತಕ್ಕೆ ಸಂಬಂಧಿಸಿದಂತೆ ಸ್ಪಷ್ಟ ತಿಳಿವಳಿಕೆ, ಅವರಲ್ಲಿ ಆರಂಭದ ದಿನಗಳಿಂದಲೂ ನಾನು ಕಂಡಿದ್ದೇನೆ. ಯಡಿಯೂರಪ್ಪನವರ ಇನ್ನೊಂದು ವಿಶೇಷವೆಂದರೆ, ಆಡಳಿತ ಮತ್ತು ಹಣಕಾಸು ಈ ಎರಡರ ಜತೆಗೆ ಇಂಗ್ಲಿಷ್. ಈ ಮೂರು ವಿಷಯವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತಮ್ಮ ಜಾಣ್ಮೆಯ ಆಲೋಚನೆಗಳಿಂದ ಕಲಿತಿದ್ದರು. ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಸಬೇಕು ಎಂಬ ಬುದ್ದಿವಂತಿಕೆ ಮತ್ತು ಜನರ ಕಲ್ಯಾಣದ ಯೋಜನೆಯ ಅನುಷ್ಠಾನಕ್ಕೆ ಎಂದೂ ವಿಳಂಬ ಮಾಡುತ್ತಿರಲಿಲ್ಲ.
ಅಪಮಾನ, ಹಿನ್ನಡೆಯಾದಾಗ ಪ್ರತಿಬಾರಿಯೂ ಧೈರ್ಯದಿಂದ ಮೇಲೇಳುವ ಅವರ ಗುಣ, ಅಪರಿಮಿತ ಚಟುವಟಿಕೆ, ನಿರಂತರ ಸೃಜನಶೀಲತೆ ಸದಾ ಪ್ರೇರಣೆ.
ಎಂ.ಪಿ.ಕುಮಾರ, ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಹಾಗೂ
ಒಡನಾಡಿ, ರಾಷ್ಟ್ರೋತ್ಥಾನ ಪರಿಷತ್ನ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.