ಬಿಜೆಪಿಗೆ ಸೇರ್ಪಡೆಯಾದ ಬಿಎಸ್ ಪಿ ಶಾಸಕ ಎನ್.ಮಹೇಶ್: ಸಚಿವ ಸ್ಥಾನದ ಸುಳಿವು ನೀಡಿದ ಬಿಎಸ್ ವೈ
Team Udayavani, Aug 5, 2021, 1:14 PM IST
ಬೆಂಗಳೂರು: ಬಿಎಸ್ ಪಿ ಶಾಸಕ ಎನ್.ಮಹೇಶ್ ಅವರು ಬಿಜೆಪಿ ನಾಯಕರ ಸಮ್ಮುಖದಲ್ಲಿ ಗುರುವಾರ ಬಿಜೆಪಿಗೆ ಸೇರ್ಪಡೆಯಾದರು. ಸಿಎಂ ಬಸವರಾಜ್ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಮಹೇಶ್ ಚಳುವಳಿಯ ಹಿನ್ನೆಲೆಯಿಂದ ಬಂದವರು. ಅವರ ಸಂಘಟನಾ ಶಕ್ತಿ ಬಹು ದೊಡ್ಡದು. ಅವರು ಶಾಸಕರಾಗುವ ಮುನ್ನವೇ ದಲಿತರ ಹೃದಯ ಗೆದ್ದವರು. ಕೊಳ್ಳೆಗಾಲದ ಎಲ್ಲ ಜನಾಂಗ ಅವರನ್ನು ಆರಿಸಿದೆ. ನಮ ಪಕ್ಷದ ಸಿದ್ಧಾಂತ ಮನವರಿಕೆಯಾದ ಮೇಲೆ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಸ್ವಯಂ ಪ್ರೇರಣೆಯಿಂದ ಬೆಂಬಲ ಮಾಡಿದ್ದರು. ಈ ಹಿಂದೆ ಯಡಿಯೂರಪ್ಪನವರಿಗೆ ಸಹಕಾರ ಕೊಟ್ಟಿದ್ದರು ಇಂದು ಅವರು ನಮ್ಮ ಪಕ್ಷಕ್ಕೆ ಬರ್ತಿದ್ದಾರೆ, ಅವರ ಸೇವೆಯನ್ನ ಪಕ್ಷ ಬಳಸಿಕೊಳ್ಳಲಿದೆ ಎಂದರು.
ಆನೆಬಲ ಬಂದಂತಾಗಿದೆ: ಈ ವೇಳೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಮಹೇಶ್ ಸೇರ್ಪಡೆಯಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ. ಇಡೀ ರಾಜ್ಯ ಸುತ್ತಿ ಪಕ್ಷ ಕಟ್ಟುತ್ತೇವೆ. ನಾಡಿನ ಉದ್ದಗಲಕ್ಕೂ ಪರಿಶಿಷ್ಟರಿದ್ದಾರೆ. ಮಹೇಶ್ ಸೇರ್ಪಡೆಯಿಂದ ಎಲ್ಲರೂ ಪಕ್ಷಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. ಪರಿಶಿಷ್ಟರನ್ನ ಬಿಜೆಪಿಗೆ ಸೇರಿಸುವ ಕೆಲಸ ಆಗಬೇಕು, ಪಕ್ಷ ದಲಿತರ ಹಿಂದೆ ಇದೆ ಎನ್ನುವ ಸಂದೇಶ ಹೋಗಬೇಕು ಎಂದರು.
ಇದನ್ನೂ ಓದಿ:ರಾಷ್ಟ್ರೀಯ ಅಧ್ಯಕ್ಷರೇ ಹೇಳಿದ್ದಾರೆ… ವರುಣಾ ಕ್ಷೇತ್ರದ ಮೇಲೆ ಕಣ್ಣಿಟ್ಟ ವಿಜಯೇಂದ್ರ
ಈ ವೇದಿಕೆಯಲ್ಲಿ ಎಲ್ಲಾ ಗಣ್ಯರಿದ್ದಾರೆ. ಶಾಸಕ ಮಹೇಶ್ ಎಲ್ಲರ ಪ್ರೀತಿ ಗಳಿಸಿದ್ದಾರೆ. ದಲಿತ ನಾಯಕ ಸೇರಿದ್ದಾನೆಂಬುದು ಬೊಮ್ಮಾಯಿಗೆ ಗೊತ್ತಿದೆ. ಅವರು ಇದನ್ನ ಗಮನದಲ್ಲಿಟ್ಟುಕೊಳ್ತಾರೆ ಎಂದು ಪರೋಕ್ಷವಾಗಿ ಮಹೇಶ್ ಗೆ ಸಚಿವ ಸ್ಥಾನದ ಬಗ್ಗೆ ಬಿಎಸ್‌ವೈ ಸುಳಿವು ನೀಡಿದರು.
ಇದೇ ವೇಳೆ ನೂತನ ಸಚಿವ ಸಂಪುಟವನ್ನು ಯಡಿಯೂರಪ್ಪ ಗುಣಗಾನ ಮಾಡಿದರು. ಬಸವಾರಾಜ್ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟ ಸಮಾನತೆಯಿಂದ ಕೂಡಿದೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂಪುಟ ರಚನೆಯಾಗಿದೆ ಎಂದರು. ಮುಂದಿನ ದಿನಗಳಲ್ಲಿ ರಾಜ್ಯ ಪ್ರವಾಸ ಮಾಡುತ್ತೇವೆ. ಈ ಮೂಲಕ ಬಹಳಷ್ಟು ನಾಯಕರನ್ನ ಪಕ್ಷಕ್ಕೆ ಸೇರಿಲಿಕೊಳ್ಳಲಿದ್ದೇವೆ. ಮುಂದಿನ ಚುನಾವಣೆಯಲ್ಲಿ 135- 140 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪರಿವರ್ತನೆಯ ಗಾಳಿ ಬೀಸುತ್ತಿದೆ: ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ನಮ್ಮ ಪಕ್ಷಕ್ಕೆ ಮಹೇಶ್ ಸೇರ್ಪಡೆಯಾಗಿದ್ದಾರೆ. ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಬೇರೆ ಬೇರೆಪಕ್ಷಗಳಿಂದ ಬರುತ್ತಿದ್ದಾರೆ. ಮೋದಿ, ಬಿಎಸ್ ವೈ ಅಭಿವೃದ್ಧಿ ಪಥ ಇಲ್ಲಿಗೆ ತಂದಿದೆ. ದೆಹಲಿಯಲ್ಲಿ ಮಹೇಶ್ ಭೇಟಿ ಮಾಡಿದ್ದರು. ನನ್ನ ಜೊತೆ ಪಕ್ಷದ ಬಗ್ಗೆ ಮಾತನಾಡಿದ್ದರು. ತತ್ವ,ಸಿದ್ಧಾಂತಗಳನ್ನ ಒಪ್ಪಿದ್ದರು. ಅವರ ಸೇರ್ಪಡೆ ಪಕ್ಷಕ್ಕೆ ಬಲ ತುಂಬಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.