ಬಿಜೆಪಿಗರು ಬ್ಲೂ ಫಿಲಂ ನೋಡಿ ಅಧಿಕಾರ ಕಳೆದುಕೊಂಡವರು..!
Team Udayavani, Nov 11, 2017, 2:54 PM IST
ಬೆಂಗಳೂರು: ‘ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ವಯಸ್ಸಾಗಿದ್ದು ಅರುಳು ಮರಳು, ಹೀಗಾಗಿ ನನ್ನ ವಿರುದ್ಧ ಮನಸ್ಸಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ವಿಜಯನಗರ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನುಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ಕಿಡಿ ಕಾರಿದರು.’ಬಿಜೆಪಿಗರು ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಮಾತನಾಡುತ್ತಾರೆ. ಅವರು ಲಜ್ಜೆ ಗೆಟ್ಟವರು, ನಯವಂಚಕರು,ಭ್ರಷ್ಟರು.ಕೆಲವರು ಬ್ಲೂ ಫಿಲಂ ನೋಡಿ ಅಧಿಕಾರ ಕಳೆದುಕೊಂಡರು’ ಎಂದು ಕಿಡಿ ಕಾರಿದರು. ಇದೇ ವೇಳೆ ‘ಬ್ಲೂ ಫಿಲಂ ಅಂದ್ರೆ ಗೊತ್ತಾ, ನೀಲಿ ಚಿತ್ರ’ ಎಂದು ವಿವರ ನೀಡಿ ನೆರೆದವರನ್ನು ನಗೆ ಗಡಲಲ್ಲಿ ತೇಲಿಸಿದರು.
‘ಬಿಜೆಪಿಯವರು ಲೂಟಿ ಹೊಡದು ಮೊಸಳೆ ಕಣ್ಣೀರು ಸುರಿಸುತ್ತಾರೆ. ಯಡಿಯೂರಪ್ಪ, ಅಮಿತ್ ಶಾ ಜೈಲಿಗೆ ಹೋಗಿ ಬಂದದ್ದನ್ನು ಜನ ಮರೆತಿಲ್ಲ. ನಮ್ಮದು ಭ್ರಷ್ಟಾಚಾರ ಮುಕ್ತ ಸರ್ಕಾರ. ಜನತೆ ನೋಡಿದ್ದಾರೆ. ಮುಂದೆಯೂ ನಮಗೆ ಅಧಿಕಾರ ನೀಡುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನನ್ನ ವಿರುದ್ಧ ಆರೋಪ ಮಾಡಿರುವ ಭ್ರಷ್ಟಾಚಾರ ಆರೋಪಗಳನ್ನು ಬಿಜೆಪಿ ನಾಯಕರು ತಾಕತ್ತಿದ್ದರೆ ಸಾಬೀತು ಮಾಡಲಿ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಸವಾಲು ಹಾಕಿದರು.
‘ಬೆಂಗಳೂರು ನಗರಾಭಿವೃದ್ಧಿಗೆ 7000 ಕೋಟಿ ರೂ ನಾವು ನೀಡಿದ್ದೇವೆ. ಬಿಜೆಪಿಯವರು 3000 ಕೋಟಿ ರೂ ಬಿಲ್ ಬಾಕಿ ಉಳಿಸಿದ್ದರು. ನಾವು ಅದನ್ನೂ ತೀರಿಸಿದ್ದೇವೆ’ಎಂದರು.
‘ರಾಜ್ಯದಲ್ಲಿ ಶಾ ಮಂತ್ರದಂಡ ನಡೆಯುವುದಿಲ್ಲ,ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Devi Temple: ಹಾಸನಾಂಬೆ ದೇವಿ ದರ್ಶನ ಅವ್ಯವಸ್ಥೆ, ಭಕ್ತರ ಆಕ್ರೋಶ: ವಿಶೇಷ ಪಾಸ್ ರದ್ದು
Hasanambe Temple: ಇಂಥ ಹಲವು ಡಿಸಿಗಳನ್ನು ನೋಡಿದ್ದೇನೆ: ಎಚ್.ಡಿ.ರೇವಣ್ಣ ಕಿಡಿ
Waqf Notice Issue: ಬಿಜೆಪಿ- ಕಾಂಗ್ರೆಸ್ ನಾಯಕರಿಂದ ರಾಜಕೀಯ ವಾಕ್ಸಮರ
MUST WATCH
ಹೊಸ ಸೇರ್ಪಡೆ
Hyderabad: ಈರುಳ್ಳಿ ಬಾಂಬ್ ಪಟಾಕಿ ಸ್ಫೋಟ; ಒಬ್ಬ ಸಾವು, 6 ಮಂದಿಗೆ ಗಾಯ
Udupi: ಗೀತಾರ್ಥ ಚಿಂತನೆ- 81: ಮೇಲ್ನೋಟದಲ್ಲಿ ಕಳಕಳಿ, ಒಳನೋಟದಲ್ಲಿ ರಾಜ್ಯಲೋಭ!
Kannada Rajyotsava: ಮುಖ್ಯಮಂತ್ರಿಗಳು ಇವ ನಮ್ಮವ ಎಂದಿದ್ದರು!
Unity lesson: ರಾಜ್ಯ ಸರ್ಕಾರ ಫೇಲಾಗ್ಬಾರ್ದು, ಒಗ್ಗಟ್ಟಾಗಿರಿ: ಎಐಸಿಸಿ ಅಧ್ಯಕ್ಷ ಖರ್ಗೆ ಪಾಠ
Waqf Property: ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಮುಸ್ಲಿಮರಿಗೂ ವಕ್ಫ್ ನೋಟಿಸ್ ಬಿಸಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.