Budget; ಗ್ರಾಮೀಣ ಜಮೀನಿಗೆ ಇನ್ನು “ಭೂ ಆಧಾರ್’; ನಗರ ಪ್ರದೇಶಗಳಲ್ಲಿ ಆಸ್ತಿಗಳ ಡಿಜಿಟಲೀಕರಣ
Team Udayavani, Jul 24, 2024, 6:26 AM IST
ಹೊಸದಿಲ್ಲಿ: ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಭೂಮಿ ಆಧಾರಿತವಾಗಿ ನಿಖರತೆ ಸಾಧಿಸಲು, ಸುಧಾರಣೆಗಳನ್ನು ಮಾಡಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಘೋಷಣೆ ಮಾಡಿದೆ. ಗ್ರಾಮೀಣ ಭಾಗಗಳಲ್ಲಿ ಜಮೀನುಗಳಿಗೆ “ಭೂ ಆಧಾರ್’ (ಯುನಿಕ್ ಐಡೆಂಟಿಫಿಕೇಶನ್ ನಂಬರ್) ಜಾರಿ ಮಾಡಲು ನಿರ್ಧರಿಸಿದೆ. ನಗರ ಭಾಗಕ್ಕೆ ಬಂದರೆ ಎಲ್ಲ ದಾಖಲೆಗಳನ್ನು ಡಿಜಿಲೀಕರಣಗೊಳಿಸಲಿದೆ. ಇದಕ್ಕಾಗಿ ಪ್ರತ್ಯೇಕ ಐಟಿ ವ್ಯವಸ್ಥೆಯನ್ನೇ ಸಿದ್ಧಪಡಿಸಲಿದೆ.
ರಾಜ್ಯ ಸರ್ಕಾರಗಳೊಂದಿಗೆ ಸೇರಿ ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಕೆಲಸ ಮಾಡಲಿದೆ. ಮುಂದಿನ ಮೂರು ವರ್ಷಗಳಲ್ಲಿ ತನ್ನ ಗುರಿಯನ್ನು ಸಾಧಿಸಲು ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹಧನವನ್ನೂ ಕೇಂದ್ರ ನೀಡಲಿದೆ.
ಗ್ರಾಮೀಣ ಭಾಗಕ್ಕೆ ಭೂ ಆಧಾರ್
ಗ್ರಾಮೀಣ ಭೂಸುಧಾರಣೆಗಳಿಗೆ ಜಮೀನುದಾರರಿಗೆ ಯುನಿಕ್ ಲ್ಯಾಂಡ್ ಪಾರ್ಸೆಲ್ ಐಡೆಂಟಿಫಿಕೇಶನ್ ನಂಬರ್ (ಯುಎನ್‌ಪಿಐಎನ್) ನೀಡಲಾಗುತ್ತದೆ. ಇದನ್ನು ಭೂ ಆಧಾರ್ ಎಂದೇ ಕೇಂದ್ರ ಸರ್ಕಾರ ಕರೆದಿದೆ. ವ್ಯಕ್ತಿಗಳಿಗೆ ಆಧಾರ್ ಸಂಖ್ಯೆ ಕೊಡುವಂತೆ ಭೂಮಿಗೂ ಇನ್ನು ಮುಂದೆ ಆಧಾರ್ ಮಾದರಿಯ ಸಂಖ್ಯೆಯೊಂದು ಸಿಗಲಿದೆ. ಇದಕ್ಕಾಗಿ ಈಗಾಗಲೇ ಆಧಾರ್ ಸಂಖ್ಯೆಗಳನ್ನು ಜಮೀನುಗಳಿಗೆ ಲಿಂಕ್ ಮಾಡುವ ಕಾರ್ಯವೂ ಸಾಗಿದೆ. ಭೂಮಾಲಿಕರ ಒಡೆತನದ ಆಧಾರದಲ್ಲಿ ಸಿದ್ಧವಾಗಿರುವ ಭೂಮಿಯ ನಕ್ಷೆಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್ಗಳಲ್ಲಿ ಸಂಗ್ರಹಿಸಿಡಲಾಗುತ್ತದೆ. ಕೃಷಿಕರ ನೋಂದಣಿ ಪುಸ್ತಕಕ್ಕೂ ಇದನ್ನು ಸಂಪರ್ಕಿಸಲಾಗುತ್ತದೆ.
ನಗರ ಭಾಗದಲ್ಲಿ ಪಕ್ಕಾ ಡಿಜಿಟಲೀಕರಣ
ನಗರ ಭಾಗದಲ್ಲೂ ಭೂದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗುತ್ತದೆ. ಜಿಐಎಸ್ ಮ್ಯಾಪಿಂಗ್ ಎಂಬ ಸಾಫ್ಟ್ವೇರ್ ಬಳಸಿ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ಆಸ್ತಿ ದಾಖಲೆಗಳ ನಿರ್ವಹಣೆಗಾಗಿ ಒಂದು ಪ್ರತ್ಯೇಕ ಐಟಿ ವ್ಯವಸ್ಥೆಯನ್ನೇ ಸಿದ್ಧಪಡಿಸಲಾಗುತ್ತದೆ. ತೆರಿಗೆಗಳನ್ನು ಅಪ್ಡೇಟ್ ಮಾಡಲು, ನಿರ್ವಹಿಸಲು ಈ ವ್ಯವಸ್ಥೆಯನ್ನು ಬಳಸಲಾಗುತ್ತದೆ. ನಗರಾಡಳಿತಗಳಿಗೆ ಆರ್ಥಿಕವಾಗಿ ಲಾಭವಾಗಲಿ ಎಂಬ ಕಾರಣದಿಂದ ಈ ನಿರ್ಧಾರ ಮಾಡಲಾಗಿದೆ. ಸದ್ಯ ಹಲವು ಆಸ್ತಿಗಳಿಗೆ ಸೂಕ್ತ ದಾಖಲೆಗಳಿರುವುದಿಲ್ಲ ಅಥವಾ ತಪ್ಪುತಪ್ಪಾಗಿ ಇರುತ್ತವೆ. ಇಂತಹ ಆಸ್ತಿಗಳ ತೆರಿಗೆ ಆಡಳಿತಗಳಿಗೆ ತಪ್ಪುತ್ತಿದೆ. ಕೇಂದ್ರದ ಕ್ರಮದಿಂದ ಇದು ಸರಿಯಾಗುವ ನಿರೀಕ್ಷೆಯಿದೆ.
ಜಿಐಎಸ್ ಮ್ಯಾಪಿಂಗ್ ಅಂದರೇನು?: ಜಿಯೋಗ್ರಾಫಿಕ್ ಇನ್ಫಾರ್ಮೇಶನ್ ಸಿಸ್ಟಮ್ ಎನ್ನುವುದು ಒಂದು ಸಾಫ್ಟ್ವೇರ್. ಸೂಕ್ತ ಅಂಕಿಸಂಖ್ಯೆಗಳ ಆಧಾರದಲ್ಲಿ ನಕ್ಷೆಗಳನ್ನು ಸಿದ್ಧಪಡಿಸಲಾಗುತ್ತದೆ. ಇದರಿಂದ ನಿರ್ದಿಷ್ಟ ಜಮೀನಿನ ನಿಖರ ಮಾಹಿತಿ ಸಿಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್; ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು
ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Dangerous Stunt: 5 ವರ್ಷದ ಬಾಲಕನನ್ನು ಕಾರಿನ ಬಾನೆಟ್ ಮೇಲೆ ಕೂರಿಸಿ ಸ್ಟಂಟ್
BBK11: ಕ್ಯಾಪ್ಟನ್ ಆಗುವ ಆತುರದಲ್ಲಿ ಗೇಮ್‌ನಲ್ಲಿ ಮೋಸ? – ಭವ್ಯ ವಿರುದ್ದ ಗಂಭೀರ ಆರೋಪ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.