Budget ಮಂಡನೆ ಸಿಎಂಗೆ ತಂತಿ ಮೇಲಿನ ನಡಿಗೆ
Team Udayavani, Jan 18, 2024, 12:23 AM IST
ಬೆಂಗಳೂರು: ರಾಜ್ಯದಲ್ಲಿ 14 ಬಾರಿ ಬಜೆಟ್ ಮಂಡಿಸುವುದರ ಜತೆಗೆ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ. ಆದಾಗ್ಯೂ ಈ ಸಲದ ಬಜೆಟ್ ಮಂಡನೆ ದೊಡ್ಡ ಸವಾಲಾಗಲಿದ್ದು, ಅಕ್ಷರಶಃ ತಂತಿ ಮೇಲಿನ ನಡಿಗೆ ಆಗಿದೆ.
ಒಂದೆಡೆ ಈ ಹಿಂದಿನ ಬಿಜೆಪಿ ಅವಧಿಯಲ್ಲಿ ಆರ್ಥಿಕ ಅಶಿಸ್ತು ಇತ್ತು ಎಂದು ಸ್ವತಃ ಕಾಂಗ್ರೆಸ್ ಸರಕಾರ ಹೇಳಿದೆ. ಅದನ್ನು ಸರಿದಾರಿಗೆ ತರಬೇಕಿದೆ. ಮತ್ತೂಂದೆಡೆ ಐದೂ ಗ್ಯಾರಂಟಿಗಳಿಗೆ ಮೀಸಲಿಡಬೇಕಾದ ಮೊತ್ತ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಶೇ. 40ರಷ್ಟು ಅಂದರೆ 56 ರಿಂದ 58 ಸಾವಿರ ಕೋಟಿ ರೂ.ಗಳಿಗೆ ಏರಿಕೆ ಆಗುವ ಸಾಧ್ಯತೆ ಇದೆ. ಕಳೆದ ಬಾರಿ ಗ್ಯಾರಂಟಿಗೆ ಅಂದಾಜು 35 ಸಾವಿರ ಕೋಟಿ ಮೀಸಲಿಡ ಲಾಗಿತ್ತು. ಇನ್ನೊಂದೆಡೆ ಕುಂಠಿತ ಗೊಂಡ “ಅಭಿವೃದ್ಧಿ ಯಂತ್ರ’ಕ್ಕೆ ವೇಗ ನೀಡಲು ಒಂದಿಷ್ಟು ಹಣ ನೀಡಬೇಕಾಗಿದೆ.
“ಖಂಡಿತ ಈ ಬಾರಿಯ ಬಜೆಟ್ ನಮಗೆ ದೊಡ್ಡ ಸವಾಲಾಗಿದೆ. ಗ್ಯಾರಂಟಿಗಳನ್ನು ಮುಂದುವರಿಸಿ ಕೊಂಡು ಹೋಗುವುದರ ಜತೆಗೆ 12 ತಿಂಗಳಿಗೆ ಹಣ ಮೀಸಲಿಡಬೇಕಾಗಿ ರುವು ದರಿಂದ 56-58 ಸಾವಿರ ಕೋಟಿ ರೂ.ಗೆ ಏರಿಕೆ ಆಗಲಿದೆ. ಹಿಂದಿನ ಸರಕಾ ರದ ಅವಧಿಯಲ್ಲಾದ ಬಿಲ್‌ಗಳನ್ನು ಕ್ಲಿಯರ್ ಮಾಡಿ, ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಿದೆ. ಇದಕ್ಕೆ ಸಾಕಷ್ಟು ಅನುದಾನ ಬೇಕು. ಈ ಹಿನ್ನೆಲೆಯಲ್ಲಿ ಇದು ಸವಾಲು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಸ್ಪಷ್ಟಪಡಿಸುತ್ತಾರೆ.
ಸವಾಲಿಗೆ ರಾಯರಡ್ಡಿ ಸಲಹೆ
ಈ ಸಂಬಂಧ “ಉದಯವಾಣಿ’ ಜತೆಗೆ ಮುಕ್ತ ವಾಗಿ ಮಾತನಾಡಿದ ಅವರು, “ಈ ಸವಾಲು ಎದುರಿಸಲು ಸರಕಾರ ಕೂಡ ಮಾನಸಿಕವಾಗಿ ಸಿದ್ಧವಾಗುತ್ತಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ನಮ್ಮ ಮುಂದೆ ಸಾಕಷ್ಟು ದಾರಿಗಳಿವೆ. ಅದಕ್ಕೆ ಮನಸ್ಸು ಮಾಡಬೇಕಷ್ಟೇ. ಉದಾಹರಣೆಗೆ ಈಗಲೂ ಅನೇಕ ಅಂಗಡಿಗಳಲ್ಲಿ ಗ್ರಾಹಕರಿಗೆ ಸಮರ್ಪಕ ಬಿಲ್ ನೀಡುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಿದರೆ, ರಾಜ್ಯದಲ್ಲಿ ಕನಿಷ್ಠ 10 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಹೆಚ್ಚಲಿದೆ ಎಂಬುದು ನನ್ನ ಅಂದಾಜು. ಜತೆಗೆ ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ಪೆಟ್ರೋಲ್-ಡೀಸೆಲ್ ಬೆಲೆ ನಮ್ಮಲ್ಲಿ ಕಡಿಮೆ ಇದೆ. ಹಾಗಾಗಿ, ಗಡಿಭಾಗಗಳಲ್ಲಿ ನೆರೆಯ ರಾಜ್ಯಗಳಿಂದ ಸಾಕಷ್ಟು ಪೆಟ್ರೋಲ್-ಡೀಸೆಲ್ ತುಂಬಿಸಿಕೊಂಡು ಹೋಗಲಾಗುತ್ತಿದೆ. ಇದಕ್ಕೆ ನಿಯಂತ್ರಣ ಹಾಕುವುದು. ನಗರಗಳ ಅಕ್ರಮ ಆಸ್ತಿಗಳನ್ನು ಸಕ್ರಮ ಗೊ ಳಿಸುವುದು, ನಗರಪ್ರದೇಶಗಳ ಆಸ್ತಿಗಳ ಮರುಸಮೀಕ್ಷೆ, ಗಣಿ ಮತ್ತು ಭೂವಿಜ್ಞಾನದಲ್ಲಿ ರಾಜಸ್ವ ಸಂಗ್ರಹದಂಥ ಹಲವು ಮಾರ್ಗಗಳಿವೆ. ಇದೆಲ್ಲವೂ ಸಾಧ್ಯವಾದರೆ 15 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಂಪನ್ಮೂಲ ಹರಿದುಬರಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.