ಮಂಗಳ ಗ್ರಹದಲ್ಲಿ ಮನೆ ನಿರ್ಮಾಣಕ್ಕೆ ಭೂಲೋಕದಲ್ಲಿ ಸಿದ್ಧಗೊಳ್ಳುತ್ತಿವೆ ಇಟ್ಟಿಗೆ!
Team Udayavani, Apr 22, 2022, 7:10 AM IST
ಬೆಂಗಳೂರು: ಮಂಗಳ ಗ್ರಹದಲ್ಲಿ ಮನೆ ನಿರ್ಮಿಸುವ ಭವಿಷ್ಯದ ಕನಸಿಗೆ ಈಗಾಗಲೇ ಭೂಲೋಕದಲ್ಲಿ ಇಟ್ಟಿಗೆಗಳು ಸಿದ್ಧಗೊಂಡಿವೆ!
ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ವಿಜ್ಞಾನಿ ಗಳು, ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ (ಇಸ್ರೋ) ಸಹಭಾಗಿತ್ವದಲ್ಲಿ ಇಂತಹದ್ದೊಂದು ವಿನೂತನ ಪ್ರಯೋಗ ನಡೆಸಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.
ಅದರಂತೆ ಮಂಗಳನ ಮಣ್ಣನ್ನು ಕೃತಕವಾಗಿ ಮರುಸೃಷ್ಟಿಸಿ ಈ ಇಟ್ಟಿಗೆ ರೂಪಿಸಲಾಗಿದೆ. ಭೂಮಿಗೆ ಹೋಲಿಸಿದರೆ, ಮಂಗಳ ಗ್ರಹದ ವಾತಾವರಣ ನೂರು ಪಟ್ಟು ತೆಳುವಾಗಿರುವುದರಿಂದ ಅಲ್ಲಿನ ಮಣ್ಣು ಸಹಜವಾಗಿ ಇಟ್ಟಿಗೆಯಂತೆ ಗಟ್ಟಿರೂಪ ತಾಳುವ ಗುಣ ಹೊಂದಿಲ್ಲ. ಹೀಗಾಗಿ ಮಂಗಳನ ಮಣ್ಣು ಗಟ್ಟಿಗೊಳ್ಳುವಂತಹ ವಿಧಾನವನ್ನು ಐಐಎಸ್ಸಿ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಇಟ್ಟಿಗೆ ನಿರ್ಮಾಣಗೊಂಡಿದ್ದು ಹೀಗೆ :
ಮೊದಲಿಗೆ ಮಂಗಳ ಗ್ರಹದ ಮಣ್ಣನ್ನು ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಸಿದ್ದಾರೆ. ಈ ಮಣ್ಣನ್ನು ಸಸ್ಯಜನ್ಯ ಅಂಟು, ನ್ಪೊರಸಾರ್ಸಿನ ಪಾಸ್ಟಿಯುರಿ ಎನ್ನುವ ಬ್ಯಾಕ್ಟೀರಿಯಾ, ಯೂರಿಯಾ, ನಿಕ್ಕೆಲ್ ಕ್ಲೋರೈಡ್ ಅನ್ನು ಮಿಶ್ರಣ ಮಾಡಿ ಸ್ಲರಿ ರೂಪ ತಂದಿದ್ದಾರೆ. ಈ ಸ್ಲರಿಯನ್ನು ಯಾವುದೇ ಆಕೃತಿಯ ಅಚ್ಚಿಗೆ ಸುರಿಯಬಹುದಾಗಿದೆ. ಕೆಲವು ದಿನಗಳ ಅನಂತರ ಬ್ಯಾಕ್ಟೀರಿಯಾವು ಯೂರಿಯಾವನ್ನು ಕ್ಯಾಲ್ಸಿಯಂ ಕಾಬೋìನೆಟ್‌ನ ಹರಳುಗಳನ್ನಾಗಿ ಪರಿವರ್ತಿಸುತ್ತದೆ. ಹರಳುಗಳು ಮತ್ತು ಸೂûಾ¾ಣು ಜೀವಿಗಳನ್ನು ಸೃಜಿಸುವ ಬಯೋ ಪಾಲಿಮರ್‌ಗಳು ಮಣ್ಣಿನ ಕಣಗಳನ್ನು ಹಿಡಿದಿಡುವ ಸಿಮೆಂಟ್ ರೀತಿ ಕಾರ್ಯನಿರ್ವಹಿಸುತ್ತವೆ.
ಸವಾಲಿನ ಕೆಲಸ :
“ಮಂಗಳನ ಮಣ್ಣನ್ನು ಬಳಸಿ ಇಟ್ಟಿಗೆ ನಿರ್ಮಾಣ ಮಾಡುವುದು ಸವಾಲಿನ ಕೆಲಸವಾಗಿತ್ತು. ಮಂಗಳನ ಮಣ್ಣಿನಲ್ಲಿ ಅಪಾರ ಪ್ರಮಾಣದ ಕಬ್ಬಿಣದ ಅಂಶವಿದೆ. ಇದು ಜೀವಿಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ. ಆರಂಭದಲ್ಲಿ ನಮ್ಮ ಬ್ಯಾಕ್ಟೀರಿಯಾ ಈ ಮಣ್ಣಿನಲ್ಲಿ ಬೆಳೆಯಲೇ ಇಲ್ಲ, ಈ ಸಂದರ್ಭದಲ್ಲಿ ನಿಕ್ಕೆಲ್ ಕ್ಲೋರೈಡ್ ಬಳಸಿ ಮಂಗಳನ ಮಣ್ಣುನ್ನು ಬ್ಯಾಕ್ಟಿರಿಯಾ ಬೆಳೆಯಲು ಯೋಗ್ಯಗೊಳಿಸಲಾಯಿತು. ಇದು ನಮ್ಮ ಸಂಶೋಧನೆಯ ಮಹತ್ವದ ಘಟ್ಟ’ ಎಂದು ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಐಐಎಸ್ಸಿಯ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಅಲೋಕ್ ಕುಮಾರ್ ವಿವರಿಸಿದ್ದಾರೆ.
ಪ್ರಯೋಗ ಮುಂದುವರಿಯಲಿದೆ :
ಇಟ್ಟಿಗೆಯ ಮೇಲೆ ಮಂಗಳನ ವಾತಾವರಣ ಮತ್ತು ಕಡಿಮೆ ಗುರುತ್ವಕಾರ್ಷಣೆಯ ಪರಿಣಾಮದ ಅಧ್ಯಯನಕ್ಕೆ ಚಿಂತನೆ ನಡೆದಿದೆ. ಭೂಮಿಯ ವಾತಾವರಣಕ್ಕಿಂತ ಮಂಗಳನ ವಾತಾವರಣ ನೂರುಪಟ್ಟು ತೆಳುವಾಗಿದೆ. ಹಾಗೆಯೇ ಶೇ. 95ರಷ್ಟು ಇಂಗಾಲಾಮ್ಲವನ್ನು ಹೊಂದಿವೆ. ಇದು ಬ್ಯಾಕ್ಟೀರಿಯಾದ ಬೆಳವಣಿಗೆಯ ಮೇಲೆ ಕೆಟ್ಟಪರಿಣಾಮ ಬೀರಬಹುದು. ಆದ್ದರಿಂದ ಸಂಶೋಧಕರು ಮಂಗಳ ಗ್ರಹದ ವಾತಾವರಣವನ್ನು ಹೋಲುವ ಚೇಂಬರ್‌ವೊಂದನ್ನು ನಿರ್ಮಿಸಿದ್ದು ಇಲ್ಲಿ ಪ್ರಯೋಗ ಮುಂದುವರಿಯಲಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಇಟ್ಟಿಗೆ ಮಂಗಳನಲ್ಲಿಗೆ :
ಮಂಗಳ ಗ್ರಹದ ಪರಿಸ್ಥಿತಿಯಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯ ಮೇಲೆ ನಿಗಾ ಇಡಲು ಉಪಕರಣವೊಂದನ್ನು ನಿರ್ಮಿಸಲಾಗಿದೆ. ಇಸ್ರೋದ ನೆರವಿನೊಂದಿಗೆ ಈ ಇಟ್ಟಿಗೆಯನ್ನು ಮಂಗಳ ಗ್ರಹಕ್ಕೆ ಕಳುಹಿಸಿ ಅಲ್ಲಿ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಪರಿಶೀಲಿಸುವ ಯೋಜನೆ ರೂಪಿಸಲಾಗಿದೆ ಎಂದು ಈ ಯೋಜನೆಯಲ್ಲಿ ಭಾಗಿಯಾಗಿರುವ ಇನ್ನೋರ್ವ ವಿಜ್ಞಾನಿ ರಶ್ಮಿ ದೀಕ್ಷಿತ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.