ಮೊದಲ ಬಾರಿಗೆ ರೈಲಿನಲ್ಲಿ ಬಸ್ ಸಾಗಣೆ; ದೊಡ್ಡಬಳ್ಳಾಪುರದಿಂದ ಚಂಡೀಗಢಕ್ಕೆ ಹೊರಟ 32 ಬಸ್‌ಗಳು
Team Udayavani, May 19, 2022, 1:18 AM IST
ಬೆಂಗಳೂರು: ಬೆಂಗಳೂರು ವಿಭಾಗವು ಇದೇ ಮೊದಲ ಬಾರಿಗೆ ಸರಕು ಸಾಗಣೆ ರೈಲಿನಲ್ಲಿ ಬಸ್‌ಗಳನ್ನು ಸಾಗಣೆ ಮಾಡಿದೆ. ಇಲ್ಲಿನ ದೊಡ್ಡಬಳ್ಳಾಪುರದ ಗೂಡ್ಸ್‌ಶೆಡ್‌ನಿಂದ ಬುಧವಾರ ಚಂಡೀಗಢಕ್ಕೆ 32 ಬಸ್‌ಗಳನ್ನು ರೈಲಿನಲ್ಲಿ ಕಳುಹಿಸಿಕೊಡಲಾಯಿತು. ಈ ಮೂಲಕ 23.27 ಲಕ್ಷ ರೂ. ಆದಾಯ ಗಳಿಸಿದೆ.
2,500 ಕಿ.ಮೀ. ದೂರದಲ್ಲಿರುವ ಚಂಡೀಗಢಕ್ಕೆ 5ರಿಂದ 6 ದಿನಗಳಲ್ಲಿ ಈ ಬಸ್‌ಗಳು ರೈಲಿನ ಮೂಲಕ ತಲುಪಲಿವೆ. ಈ ಹಿಂದೆ ಪ್ಯಾಸೆಂಜರ್ ಬಸ್‌ಗಳನ್ನು ದೊಡ್ಡ ದೊಡ್ಡ ಟ್ರಕ್‌ಗಳ ಮೂಲಕ ಸಾಗಣೆ ಮಾಡಲಾಗುತ್ತಿತ್ತು. ಇದರಿಂದ ಸಮಯದ ಜತೆಗೆ ಭಾರಿ ಪ್ರಮಾಣದ ಡೀಸೆಲ್ ಖರ್ಚಾಗುತ್ತಿತ್ತು. ವಾಯುಮಾಲಿನ್ಯ ಮತ್ತು ಸಂಚಾರದಟ್ಟಣೆ ಹೆಚ್ಚಿತ್ತು.
ವಿವಿಧ ಹಂತಗಳಲ್ಲಿ 64 ಬಸ್ ರವಾನೆ
32 ರ್ಯಾಕ್‌ಗಳಲ್ಲಿ ಮೊದಲ ಹಂತದಲ್ಲಿ ಬಿಎಸ್-6 ಮಾದರಿಯ 32 ಪ್ರಯಾಣಿಕರ ಬಸ್‌ಗಳನ್ನು ಚಂಡೀಗಢಕ್ಕೆ ರೈಲಿನಲ್ಲಿ ಸಾಗಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ 64 ಬಸ್‌ಗಳನ್ನು ವಿವಿಧ ಹಂತಗಳಲ್ಲಿ ರೈಲಿನಲ್ಲೇ ಸಾಗಿಸಲು ಉದ್ದೇಶಿಸಲಾಗಿದೆ.
ಈ ಸಂಬಂಧ ಬ್ಯುಸಿನೆಸ್ ಡೆವಲಪ್‌ಮೆಂಟ್ ಯೂನಿಟ್ ತಂಡವು ಅಶೋಕ್ ಲೈಲ್ಯಾಂಡ್ ಹಾಗೂ ಐವಿಸಿ ಲಾಜಿಸ್ಟಿಕ್ಸ್ ಮತ್ತು ಹಿಮಾಚಲ ಪ್ರದೇಶ ರಸ್ತೆ ಸಾರಿಗೆ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರ ನೆರವಿನಿಂದ ಸಾಗಣೆ ಸಾಧ್ಯವಾಗಿದೆ ಎಂದು ಬೆಂಗಳೂರು ವಿಭಾಗೀಯ ರೈಲ್ವೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.