ಶಿರಾ, ಆರ್.ಆರ್. ನಗರ: ಬಿಜೆಪಿ – ಜೆಡಿಎಸ್ ನಡುವೆ ಒಳ ಒಪ್ಪಂದ ಸಾಧ್ಯತೆ
Team Udayavani, Oct 2, 2020, 6:02 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಿರಾ ನಿಮಗೆ.., ರಾಜರಾಜೇಶ್ವರಿ ನಗರ ನಮಗೆ! ಇಂಥದ್ದೊಂದು ಅಡ್ಜಸ್ಟ್‌ಮೆಂಟ್ ರಾಜಕಾರಣಕ್ಕೆ ಎರಡೂ ಕ್ಷೇತ್ರಗಳು ಸಾಕ್ಷಿಯಾಗಲಿವೆಯೇ? ಕೆಲವು ವಿದ್ಯಮಾನ ಗಳನ್ನು ಗಮನಿಸಿದರೆ ಇಂಥ ಸಾಧ್ಯತೆ ಇದೆ ಎಂದನಿಸುತ್ತಿದೆ.
ಮೂರೂ ಪಕ್ಷಗಳಿಗೂ ಉಪ ಚುನಾವಣೆ ಪ್ರತಿಷ್ಠೆಯಾಗಿದೆಯಾದರೂ “ಶತ್ರುವಿನ ಶತ್ರು ಮಿತ್ರ’ ಸಿದ್ಧಾಂತದಡಿ ಒಳ ಒಪ್ಪಂದದ ಸಾಧ್ಯತೆಗಳಿವೆ.
ಬಿಜೆಪಿ ನಾಯಕರು ಜೆಡಿಎಸ್ ಸಂಪರ್ಕದಲ್ಲಿದ್ದು, ಶಿರಾದಲ್ಲಿ ಜೆಡಿಎಸ್‌ಗೆ ಸಹಕರಿಸಿ ರಾಜರಾಜೇಶ್ವರಿ ನಗರದಲ್ಲಿ ಲಾಭ ಪಡೆಯುವ ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಶಿರಾದಲ್ಲಿ ಬಿಜೆಪಿಗೆ ಅಷ್ಟಾಗಿ ನೆಲೆ ಇಲ್ಲ. ಅಲ್ಲಿ ಜೆಡಿಎಸ್‌ಗೆ ಸಹಕರಿಸಿದರೆ ಆರ್.ಆರ್. ನಗರದಲ್ಲಿ ಅವರ ಬೆಂಬಲ ಸಿಗಬಹುದಾ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ನಾಯಕರಿದ್ದಂತಿದೆ.
ಡಿ. ಕೆ. ರವಿ ಪತ್ನಿ ಸ್ಪರ್ಧೆ?
ಜೆಡಿಎಸ್‌ನಲ್ಲಿರುವ ಹನುಮಂತ ರಾಯಪ್ಪ ಅವರು ರಾಜರಾಜೇಶ್ವರಿ ನಗರದಲ್ಲಿ ಪುತ್ರಿ ಕುಸುಮಾ ಡಿ.ಕೆ. ರವಿ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ. ಜತೆಗೆ ಪುತ್ರಿಗೆ ಜೆಡಿಎಸ್ ಬೆಂಬಲ ಪಡೆಯುವ ಕಸರತ್ತು ನಡೆಸುತ್ತಿದ್ದಾರೆ ಎಂದೂ ಹೇಳ ಲಾಗುತ್ತಿದೆ. ಇದರ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕಾರ್ಯತಂತ್ರವಿದೆ ಎನ್ನಲಾಗುತ್ತಿದೆ. ಆರ್.ಆರ್. ನಗರದಲ್ಲಿ ಮುನಿ ರತ್ನರನ್ನು ಸೋಲಿಸಲು ಡಿಕೆಶಿ ಸಹೋದರರು ಪಣ ತೊಟ್ಟಿದ್ದಾರೆ.
ಜೆಡಿಎಸ್‌ಗೆ ಶಿರಾ ಪ್ರತಿಷ್ಠೆ
ಶಿರಾವನ್ನು ಉಳಿಸಿಕೊಳ್ಳುವುದು ಜೆಡಿಎಸ್‌ಗೆ ಹಾಗೂ ಆರ್.ಆರ್. ನಗರದಲ್ಲಿ ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ಬಿಜೆಪಿ ಹಾಗೂ ಜೆಡಿಎಸ್‌ನ ಏಕೈಕ ಗುರಿ ಕಾಂಗ್ರೆಸ್ ಮಣಿಸುವುದು. ಬಿಎಸ್‌ವೈ- ಎಚ್‌ಡಿಕೆ ಪದೇಪದೆ ಭೇಟಿ ನಡೆಸಿದ್ದರ ಮರ್ಮವೂ ಇದೇ ಎನ್ನಲಾಗುತ್ತಿದೆ.
ಆರ್. ಆರ್. ನಗರ: ಕಾಂಗ್ರೆಸ್‌ನಿಂದ ನಾಲ್ವರ ಹೆಸರು
ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಶಾಸಕ ಬಾಲಕೃಷ್ಣ, ರûಾ ರಾಮಯ್ಯ ಹಾಗೂ ಪ್ರಿಯಾ ಕೃಷ್ಣ ಅವರ ಹೆಸರುಗಳು ಪ್ರಸ್ತಾವವಾಗಿವೆ. ಈ ನಡುವೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಕುಸುಮಾ ಆದಿಚುಂಚನಗಿರಿ ಸ್ವಾಮೀಜಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಕೊಂಡಿದ್ದು, ಅವರೂ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿದೆ. ಗುರುವಾರ ಕ್ಷೇತ್ರದ ಮುಖಂಡರ ಜತೆ ಚರ್ಚಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಚುನಾವಣ ಉಸ್ತುವಾರಿ ಡಿ.ಕೆ. ಸುರೇಶ್ ಅವರು, ನಾಲ್ವರ ಹೆಸರು ಸಭೆಯಲ್ಲಿ ಪ್ರಸ್ತಾವವಾಗಿದೆ. ಯಾರೇ ಸ್ಪರ್ಧಿಸಿದರೂ ಡಿ.ಕೆ.ಸುರೇಶ್ ಅವರೇ ಕಣದಲ್ಲಿದ್ದಾರೆ ಎಂದು ಭಾವಿಸಿ ಪಕ್ಷಕ್ಕಾಗಿ ದುಡಿಯಬೇಕೆಂದು ಕಾರ್ಯ ಕರ್ತರಿಗೆ ತಿಳಿಸಲಾಗಿದೆ ಎಂದರು.
ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.