Byelection; ಚನ್ನಪಟ್ಟಣದಲ್ಲಿ ದೋಸ್ತಿ ಅಭ್ಯರ್ಥಿ ಆಗಿ ನಿಖಿಲ್‌?

ರಾಜ್ಯದಲ್ಲಿ ಗರಿಗೆದರಿದ ಉಪ ಚುನಾವಣೆ ರಾಜಕಾರಣ...ಸಿಪಿವೈ ನಡೆ ಬಗ್ಗೆ ಕುತೂಹಲ

Team Udayavani, Oct 5, 2024, 6:48 AM IST

NIkhil KUMMI

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ಮೇಲೆ ದೂರು-ಪ್ರತಿದೂರು ಸಲ್ಲಿಕೆಯ ಸಮರ ನಡೆಯುತ್ತಿರುವ ಬೆನ್ನಲ್ಲೇ ರಾಜಕೀಯ ಮಿನಿಸಮರಕ್ಕೂ ರಾಜ್ಯ ರಾಜಕಾರಣ ಅಣಿಯಾಗುತ್ತಿದೆ.

ಒಂದೆಡೆ ಸಿಎಂ ವಿರುದ್ಧ ಮುಡಾ ಹಗರಣ, ಮತ್ತೂಂದೆಡೆ ಕೇಂದ್ರ ಮಂತ್ರಿ ಕುಮಾರಸ್ವಾಮಿ ವಿರುದ್ಧದ ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ, ನಿರ್ಮಲಾ ಸೀತಾರಾಮನ್‌ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರ ವಿರುದ್ಧದ ಚುನಾವಣ ಬಾಂಡ್‌ ಪ್ರಕರಣ, ಸಚಿವ ಪ್ರಿಯಾಂಕ್‌ ಖರ್ಗೆ, ಎಂ.ಬಿ. ಪಾಟೀಲ್‌, ಛಲವಾದಿ ನಾರಾಯಣಸ್ವಾಮಿ ವಿರುದ್ಧದ ಕೆಐಎಡಿಬಿಸಿಎ ನಿವೇಶನ ದುರ್ಬಳಕೆ, ಕೆ.ಎನ್‌. ರಾಜಣ್ಣ ವಿರುದ್ಧ ಅಪೆಕ್ಸ್‌ ಬ್ಯಾಂಕ್‌ ಹಗರಣ… ಹೀಗೆ ಪರಸ್ಪರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.ಇದಕ್ಕೆ ಇಂಬು ನೀಡುವಂತೆ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಯಾವುದೇ ಕ್ಷಣದಲ್ಲಾದರೂ ಕೇಂದ್ರ ಚುನಾವಣ ಆಯೋಗ ಮುಹೂರ್ತ ನಿಗದಿಪಡಿಸುವ ಸಾಧ್ಯತೆಗಳಿದ್ದು, ಅ. 10ರೊಳಗಾಗಿ ಉಪಚುನಾವಣೆಯ ವೇಳಾಪಟ್ಟಿ ಘೋಷಣೆಯಾಗುವ ಸಂಭವವಿದೆ.

ಈ ಕಾರಣದಿಂದಾಗಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಗುರುವಾರ ನಿಖೀಲ್‌ ಕುಮಾರಸ್ವಾಮಿ ಅವರೊಂದಿಗೆ ರಾಜ್ಯ ಬಿಜೆಪಿ ಉಸ್ತುವಾರಿ ಆಗಿರುವ ರಾಧಾಮೋಹನ್‌ ಅಗರ್‌ವಾಲ್‌ ಅವರನ್ನು ಭೇಟಿ ಮಾಡಿ ಬಂದಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತಷ್ಟು ಚುರುಕಾಗಿದ್ದು, ಶುಕ್ರವಾರ ದಿಢೀರನೆ ಚನ್ನಪಟ್ಟಣಕ್ಕೆ ಭೇಟಿ ನೀಡಿ ಕೆಲ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈ ಎರಡೂ ಬೆಳವಣಿಗೆಗಳು ಚನ್ನಪಟ್ಟಣ ಉಪಚುನಾವಣೆಯ ದಿನಾಂಕ ಸನ್ನಿಹಿತವಾಗಿರುವುದನ್ನು ಸೂಚಿಸುತ್ತಿದ್ದು, ಬಿಜೆಪಿ ಟಿಕೆಟ್‌ ಆಕಾಂಕ್ಷಿ ಸಿ.ಪಿ. ಯೋಗೇಶ್ವರ್‌ ನಡೆಯೇನು ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿದೆ.

ಅಗರ್‌ವಾಲ್‌ ಭೇಟಿಯಾದ ಎಚ್‌ಡಿಕೆ
ಚನ್ನಪಟ್ಟಣಕ್ಕೆ ತಾನು ಅಭ್ಯರ್ಥಿ ಅಲ್ಲ ಎನ್ನುತ್ತಲೇ ವೇದಿಕೆ ಸಜ್ಜುಗೊಳಿಸಿಕೊಳ್ಳುತ್ತಿರುವ ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಸ್ಥಳೀಯವಾಗಿ ಸಭೆಗಳನ್ನು ನಡೆಸಿ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಜಯಮುತ್ತು ಹೆಸರು ಮುಂಚೂಣಿಯಲ್ಲಿ ಇದೆಯಾದರೂ ಗುರುವಾರ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್‌ ಅಗರ್‌ವಾಲ್‌ ಅವರನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನಿಖೀಲ್‌ ಜತೆ ಭೇಟಿ ಮಾಡಿರುವುದು ಹಲವು ಪ್ರಶ್ನೆ ಗ ಳಿಗೆ ಉತ್ತರ ಕೊಟ್ಟಂತಿದೆ. ಚನ್ನಪಟ್ಟಣ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್‌ರನ್ನು ಕಣಕ್ಕಿಳಿಸುವ ಮಾತುಕತೆ ನಡೆದಿದೆ ಎನ್ನಲಾಗಿದೆ.

ಸಿಪಿವೈ ನಡೆ ಬಗ್ಗೆ ಕುತೂಹಲ
ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ಮಾಡಿಕೊಂಡಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ಗೆ ಟಿಕೆಟ್‌ ಕೈತಪ್ಪಿದರೆ ಮುಂದಿನ ನಡೆಯೇನು ಎನ್ನುವ ಕುತೂಹಲ ಬಿಜೆಪಿಯಲ್ಲೂ ಇದೆ. ಪಕ್ಷೇತರರಾಗಿ ಸ್ಪರ್ಧಿಸುತ್ತಾರಾ? ಕೊನೆಯ ಕ್ಷಣದಲ್ಲಿ ಕಾಂಗ್ರೆಸ್‌ ಸೇರುತ್ತಾರಾ ಅಥವಾ ಬಿಜೆಪಿಯಲ್ಲಿದ್ದುಕೊಂಡೇ ತಟಸ್ಥರಾಗುತ್ತಾರಾ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ.

ಕೈ ಕಟ್ಟಾಳು ಯಾರು? ಡಿಕೆಶಿ, ಡಿಕೆಸು ಅಥವಾ ಹೊಸಮುಖ?
ಮೈತ್ರಿ ಒಳಗಿನ ಬೆಳವಣಿಗೆ ಗಮನಿಸಿ ಶುಕ್ರವಾರ ದಿಢೀರನೇ ಚನ್ನಪಟ್ಟಣಕ್ಕೆ ತೆರಳಿದ ಡಿಸಿಎಂ ಡಿ.ಕೆ. ಶಿವಕುಮಾರ್‌, 60 ಕೋಟಿ ರೂ. ಮೊತ್ತದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ. ಈಗಾಗಲೇ ಚನ್ನಪಟ್ಟಣಕ್ಕೆ 300 ಕೋಟಿ ರೂ. ವಿಶೇಷ ಅನುದಾನ ಘೋಷಣೆಯಾಗಿದೆ. ಈ ಪೈಕಿ 60 ಕೋಟಿ ರೂ.ಗಳ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಿರುವ ಡಿಸಿಎಂ, ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ ಅನಂತರ 20ಕ್ಕೂ ಹೆಚ್ಚು ಬಾರಿ ಭೇಟಿ ಕೊಟ್ಟಿದ್ದಾರೆ. ಯಾರೇ ಸ್ಪರ್ಧಿಸಿದರೂ ನಾನೇ ಅಭ್ಯರ್ಥಿ ಎನ್ನುತ್ತಿರುವ ಅವರು, ಸಹೋದರ ಡಿ.ಕೆ. ಸುರೇಶ್‌ರನ್ನೇ ಕೊನೆಯ ಕ್ಷಣದಲ್ಲಿ ಕಣಕ್ಕಿಳಿಸಬಹುದು ಎನ್ನಲಾಗಿದೆ.

ಟಾಪ್ ನ್ಯೂಸ್

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

uppunda

Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್‌ ಭೇಟಿ

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Tumbe

illegal Sand: ತುಂಬೆ, ಮಾರಿಪಳ್ಳ: ಮರಳು ಅಡ್ಡೆಗೆ ದಾಳಿ; 20 ಬೋಟ್‌ಗಳ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rangapattana-Elephnat

Dasara: ಶ್ರೀರಂಗಪಟ್ಟಣ ದಸರಾಗೆ ಆರಂಭದಲ್ಲೇ ವಿಘ್ನ: ಅಡ್ಡಾದಿಡ್ಡಿ ಓಡಾಡಿದ ಆನೆ

1-siddu

Caste Census ಸಂಘರ್ಷ!; ಸಂಪುಟದಲ್ಲಿ ಚರ್ಚಿಸಿ ಸಮೀಕ್ಷಾ ವರದಿ ಮಂಡನೆ: ಸಿದ್ದರಾಮಯ್ಯ

Exam 3

UG, PG ಏಕರೂಪ ವೇಳಾಪಟ್ಟಿ : ಎಪ್ರಿಲ್‌ 18, 19ಕ್ಕೆ ಸಿಇಟಿ

Siddanna 2

CM Siddaramaiah ಮಾಸಾಂತ್ಯಕ್ಕೆ ದಿಲ್ಲಿಗೆ : ಕುತೂಹಲ

Exam

Journalism; ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಅರ್ಜಿ ಅಹ್ವಾನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

Tirupati Laddu Controversy: ತಿರುಪತಿ ಲಡ್ಡು ವಿವಾದ ಸ್ವತಂತ್ರ ತನಿಖೆಗೆ SIT: ಸುಪ್ರೀಂ

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Hockey India League: 7 ವರ್ಷ ಬಳಿಕ ಹಾಕಿ ಇಂಡಿಯಾ ಲೀಗ್‌ ಪುನಾರಂಭ.. ಡಿ.28ಕ್ಕೆ ಕೂಟ ಶುರು

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

uppunda

Disease: ಉಪ್ಪುಂದದಲ್ಲಿ ಕಾಲರಾ ಭೀತಿ; 200ಕ್ಕೂ ಅಧಿಕ ಮಂದಿ ಅಸ್ವಸ್ಥ; ತಹಶೀಲ್ದಾರ್‌ ಭೇಟಿ

1-horoscope

Daily Horoscope: ಅವಕಾಶಗಳ ಆಯ್ಕೆಯ ವಿಷಯದಲ್ಲಿ ಗೊಂದಲ, ವ್ಯಾಪಾರಿಗಳಿಗೆ ಉತ್ತಮ ಲಾಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.