ವರ್ಗಾವಣೆ ಪರ್ವ; 15 ಐಪಿಎಸ್ ಅಧಿಕಾರಿಗಳ ಟ್ರಾನ್ಸ್’ಫರ್: ದ.ಕನ್ನಡ ಎಸ್ಪಿಯಾಗಿ ರಿಷ್ಯಂತ್
Team Udayavani, Jun 20, 2023, 4:08 PM IST
ದಕ್ಷಿಣ ಕನ್ನಡ ಎಸ್ ಪಿಯಾಗಿ ಸಿ.ಬಿ ರಿಷ್ಯಂತ್
ಬೆಂಗಳೂರು: ನೂತನ ಸರ್ಕಾರದಿಂದ ಐಪಿಎಸ್ ಅಧಿಕಾರಿಗಳ ವರ್ಗವಾಣೆ ಪರ್ವ ಮುಂದುವರಿದಿದ್ದು, ಮಂಗಳವಾರ ಮತ್ತೆ 15 ಮಂದಿ ಅಧಿಕಾರಿಗಳ ಟ್ರಾನ್ಸ್ ಫರ್ ಮಾಡಲಾಗಿದೆ.
ಬೆಂಗಳೂರು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ರನ್ನು ಕೆಎಸ್ಆರ್ ಪಿ ಐಜಿಪಿಯಾಗಿ ವರ್ಗಾವಣೆ ಮಾಡಿ ತೆರವಾದ ಹುದ್ದೆಗೆ ಬೆಳಗಾವಿ ಉತ್ತರ ವಲಯ ಐಜಿಯಾಗಿದ್ದ ಸತೀಶ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ:ಮದುವೆ ದಿಬ್ಬಣಕ್ಕೆ 51 ಟ್ರ್ಯಾಕ್ಟರ್… ರಾಜಸ್ಥಾನದಲ್ಲಿ ನಡೆದ ವರನ ದಿಬ್ಬಣದ ವಿಡಿಯೋ ವೈರಲ್
ಇದೇ ವೇಳೆ ದಕ್ಷಿಣ ಕನ್ನಡ ಎಸ್ ಪಿಯಾಗಿ ಸಿ.ಬಿ ರಿಷ್ಯಂತ್ ಅವರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳ ಪಟ್ಟಿ
ರಾಮಚಂದ್ರ ರಾವ್- ಎಡಿಜಿಪಿ, ಪೊಲೀಸ್ ಗೃಹ ನಿರ್ಮಾಣ ನಿಗಮ
ಮಾಲಿನಿ ಕೃಷ್ಣಮೂರ್ತಿ- ಎಡಿಜಿಪಿ, ಬಂದಿಖಾನೆ
ಅರುಣ್ ಚಕ್ರವರ್ತಿ- ಎಡಿಜಿಪಿ, ಡಿಸಿಆರ್ಇ
ಮನೀಷ್ ಕರ್ಬಿಕರ್- ಎಡಿಜಿಪಿ, ಸಿಐಡಿ
ಚಂದ್ರಶೇಖರ್- ಐಎಸ್ ಡಿ, ಎಡಿಜಿಪಿ
ವಿಪುಲ್ ಕುಮಾರ್- ಹೆಚ್ಚುವರಿ ಪೊಲೀಸ್ ಆಯುಕ್ತ ಪೂರ್ವ ವಲಯ
ಪ್ರವೀಣ್ ಮಧುಕರ್ ಪವಾರ್- ಐಜಿಪಿ ಸಿಐಡಿ
ಸತೀಶ್ ಕುಮಾರ್- ಹೆಚ್ಚುವರಿ ಪೊಲೀಸ್ ಆಯುಕ್ತ ಪಶ್ಚಿಮ ವಲಯ
ಸಂದೀಪ್ ಪಾಟಿಲ್- ಕೆಎಸ್ಆರ್ ಪಿ ಐಜಿಪಿ
ವಿಕಾಸ್ ಕುಮಾರ್ ವಿಕಾಸ್- ಐಜಿಪಿ ಐಎಸ್ ಡಿ
ರಮಣ್ ಗುಪ್ತಾ-ಬೆಳಗಾವಿ ವಲಯ ಐಜಿಪಿ
ಸಿದ್ದರಾಮಪ್ಪ- ಕೇಂದ್ರ ಕಚೇರಿ ಐಜಿಪಿ
ಬೋರಲಿಂಗಯ್ಯ- ಮೈಸೂರು ವಲಯ ಡಿಐಜಿ
ವಂಶಿಕೃಷ್ಣ- ಡಿಐಜಿ ಸಿಐಡಿ
ರಿಷ್ಯಂತ್ – ದಕ್ಷಿಣ ಕನ್ನಡ ಎಸ್ ಪಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.