ಸಿ ಫೋರ್-ಬಿಜೆಪಿ ಆಂತರಿಕ ಸಮೀಕ್ಷೆ ತಾಳೆ?
Team Udayavani, Aug 23, 2017, 8:40 AM IST
ಹುಬ್ಬಳ್ಳಿ: ರಾಜ್ಯದಲ್ಲಿ ಸದ್ಯ ಚುನಾವಣೆ ನಡೆದರೆ ಬಿಜೆಪಿ ಗಳಿಸಬಹುದಾದ ಸ್ಥಾನಕ್ಕೆ ಸಂಬಂಧಿಸಿದಂತೆ ಸಿ-ಫೋರ್ ನಡೆಸಿದ ಸಮೀಕ್ಷೆಗೂ ಬಿಜೆಪಿ ಆಂತರಿಕವಾಗಿ ನಡೆಸಿದ ಸಮೀಕ್ಷೆ ಫಲಿತಾಂಶಕ್ಕೂ ತಾಳೆ ಆಗುತ್ತಿದೆಯೇ? – ಹೌದು ಎನ್ನುತ್ತಿವೆ ಪಕ್ಷದ ಮೂಲಗಳು! ಬಿಜೆಪಿ ಆಂತರಿಕ ತಂಡ ನಡೆಸಿದ ಸಮೀಕ್ಷೆ ವೇಳೆ ಸದ್ಯ ಚುನಾವಣೆ ನಡೆದರೆ ಪಕ್ಷ 70
-80ರಷ್ಟು ಸೀಟು ಗಳಿಸಬಹುದು. ಅಲ್ಲದೇ ಸುಮಾರು 86 ಕ್ಷೇತ್ರಗಳಲ್ಲಿ ಗೆಲ್ಲುವ ಬಲವೇ ಇಲ್ಲವಾಗಿದೆ ಎಂಬ ಅಂಶ ಗೊತ್ತಾಗಿತ್ತು. ಇದನ್ನು ಇತ್ತೀಚಿಗಷ್ಟೇ ರಾಜ್ಯ ಪ್ರವಾಸ ಕೈಗೊಂಡಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಮನಕ್ಕೂ ತರಲಾಗಿತ್ತು. ಈಗ ಸಿ-ಪೋರ್ ಸಮೀಕ್ಷೆಯಲ್ಲೂ ಬಿಜೆಪಿ 60-70 ಸ್ಥಾನ ಗಳಿಸಬಹುದು ಎಂದು ಹೇಳಿರುವುದು
“ಮಿಷನ್-150′ ಗುರಿ ಹೊಂದಿರುವ ಪಕ್ಷಕ್ಕೆ ಶಾಕ್ ನೀಡಿದೆ ಎನ್ನಲಾಗಿದೆ.
ರಾಜ್ಯದ ಸುಮಾರು 86 ಕ್ಷೇತ್ರಗಳಲ್ಲಿ ಬಿಜೆಪಿಗೆ ಗೆಲ್ಲುವ ಬಲವಿಲ್ಲ ಎಂಬ ಸಂಗತಿ ತಿಳಿದ ಅಮಿತ್ ಶಾ, ಪಕ್ಷ ಸಂಘಟನೆಗೆ ಹಾಗೂ ಕಾಂಗ್ರೆಸ್ ಸರಕಾರದ ವಿರುದಟಛಿ ಹೋರಾಟ ನಡೆಸುವಂತೆ ಖಡಕ್ ಸಂದೇಶ ನೀಡಲೂ ಬಿಜೆಪಿ ಆಂತರಿಕ ಸಮೀಕ್ಷೆ ವರದಿಯೇ ಕಾರಣ ಎನ್ನಲಾಗುತ್ತಿದೆ. ಒಂದೂವರೆ ವರ್ಷಗಳ ಹಿಂದೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಕ್ಷ ಸಂಘಟನೆ ಕುರಿತು ನೀಡಿದ್ದ ಸೂಚನೆಯ ಹೊರತಾಗಿಯೂ ಪರಿಣಾಮಕಾರಿಯಾಗಿ ಸಂಘಟನೆ ಮಾಡದಿರುವ ಬಗ್ಗೆಯೂ ಶಾ ಅಸಮಾಧಾನ ವ್ಯಕ್ತಪಡಿಸಿದ್ದರು. ಪ್ರಮುಖವಾಗಿ ಪಕ್ಷಕ್ಕೆ ಯುವಜನರನ್ನು ತರಬೇಕಾದ ರಾಜ್ಯ ಯುವಮೋರ್ಚಾ ಘಟಕ ಸರಿಯಾಗಿ ಕೆಲಸ ಮಾಡದಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಶಾ, ಯುವ ಘಟಕದ ಪದಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದರು. ಪಕ್ಷ ಸಂಘಟನೆ, ಹೋರಾಟಕ್ಕೆ ಮುಂದಾಗದಿದ್ದರೆ ಘಟಕ ಪುನಾರಚನೆ ಅನಿವಾರ್ಯ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ ಎನ್ನಲಾಗಿದೆ.
ಇದೆಲ್ಲದಕ್ಕೂ ಮಿಷನ್-150 ಮತ್ತು ಬಿಜೆಪಿ ಆಂತರಿಕ ಸಮೀಕ್ಷೆ ನಡುವಿನ ಅಂತರವೇ ಕಾರಣ ಎನ್ನಲಾಗುತ್ತಿದೆ.
ಅಮಿತ್ ಶಾ ಎಚ್ಚರಿಕೆ ಹಾಗೂ ಪಕ್ಷದ ಆಂತರಿಕ ಚುನಾವಣೆ ಸಮೀಕ್ಷೆ ಅಂಕಿ-ಅಂಶದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕ ಪಕ್ಷ ಸಂಘಟನೆ, ಕಾಂಗ್ರೆಸ್ ಸರಕಾರದ ವಿರುದಟಛಿ ಹೋರಾಟಕ್ಕೆ ಮುಂದಾಗಿದೆ. ಮುಂದಿನ ವಾರ ಬೆಂಗಳೂರಿನಲ್ಲಿ ನಡೆಯುವ ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಪ್ರಮುಖರ ಸಭೆಯಲ್ಲಿ ಇನ್ನಷ್ಟು ಮಹತ್ವದ ತೀರ್ಮಾನ
ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ. ಅಕ್ಟೋಬರ್ ಕೊನೆ ವೇಳೆಗೆ ಮತ್ತೂಮ್ಮೆ ರಾಜ್ಯಕ್ಕೆ ಬರುವುದಾಗಿ ಅಮಿತ್ ಶಾ ತಿಳಿಸಿದ್ದು, ಅಷ್ಟರೊಳಗೆ ಪಕ್ಷ ಸಂಘಟನೆ, ಹೋರಾಟದ ವರದಿ ಸಿದಟಛಿಪಡಿಸುವ ಒತ್ತಡಕ್ಕೆ ರಾಜ್ಯ ಬಿಜೆಪಿ ಘಟಕ
ಸಿಲುಕಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.: ಅನರ್ಹ “ಬಿಪಿಎಲ್’ ಕತ್ತರಿಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಗುತ್ತಿಗೆಯಡಿ ತುರ್ತು ಚಿಕಿತ್ಸಾ ವೈದ್ಯರ ನೇಮಕಕ್ಕೆ ಆರೋಗ್ಯ ಇಲಾಖೆ ಸೂಚನೆ
“ಕಾಂಗ್ರೆಸ್‌ನಲ್ಲಿ ದಲಿತ ಸಚಿವರಿಗೆ ಊಟದ ಸ್ವಾತಂತ್ರ್ಯವೂ ಇಲ್ಲ’
BJP: ಭಿನ್ನರನ್ನು ನಿಯಂತ್ರಿಸದಿದ್ದರೆ ಕಷ್ಟ: ಎಸ್.ಟಿ. ಸೋಮಶೇಖರ್
Karnataka: ಸರಕಾರ ಉತ್ತರಿಸಬೇಕಾದ ಪ್ರಶ್ನೆಗಳಿವೆ: ಬಿ.ಎಲ್. ಸಂತೋಷ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.