C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

ಕೊ*ಲೆ ಮಾಡಲು 40 ಜನ ಬಂದಿದ್ದರು... ಅವರ ವಿರುದ್ಧ ಕ್ರಮವಿಲ್ಲ.. ಕಾಂಗ್ರೆಸ್ ನಂತೆ ಅಬ್ಬೇಪಾರಿ ಪಾರ್ಟಿಯಲ್ಲ: ವಿಜಯೇಂದ್ರ, ಅಶೋಕ್ ಕೆಂಡಾಮಂಡಲ

Team Udayavani, Dec 20, 2024, 8:15 PM IST

1-ct

ದಾವಣಗೆರೆ : ವಿಧಾನ ಪರಿಷತ್ ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿದ ಆರೋಪಿದಲ್ಲಿ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕ, ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಹೈಕೋರ್ಟ್ ಆದೇಶದ ಬಳಿಕ ಶುಕ್ರವಾರ ರಾತ್ರಿ(ಡಿ20 ) ದಾವಣಗೆರೆಯಲ್ಲಿ ಪೊಲೀಸರು ಬಿಡುಗಡೆ ಮಾಡಿದರು.

ಸಿ.ಟಿ.ರವಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರಕಾರ ಮತ್ತು ಪೊಲೀಸರ ವಿರುದ್ಧ ಕೆಂಡಾಮಂಡಲವಾದರು.

ಬಿ.ವೈ. ವಿಜಯೇಂದ್ರ ಮಾತನಾಡಿ ನೋಟಿಸ್ ಕೊಡದೆ ಸಿ.ಟಿ.ರವಿ ಅವರನ್ನುಅರೆಸ್ಟ್ ಮಾಡಿರುವುದು ತಪ್ಪು.ರಾಜಕೀಯ ಷಡ್ಯಂತ್ರ ಮಾಡಿ ಜನಪ್ರತಿನಿಧಿಯೊಬ್ಬರನ್ನು ಬಂಧನ ಮಾಡಲಾಗಿದೆ. ಹೀಗಾದರೆ ಸಾಮಾನ್ಯರ ಪರಿಸ್ಥಿತಿ ಏನು? ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಿ.ಟಿ.ರವಿ ಅವರನ್ನು ಬೆಳಗಾವಿಯಿಂದ ಹೊರ ಬಿಟ್ಟಿದ್ದೆ ಹೆಚ್ಚು ಎನ್ನುವ ದಾಟಿಯಲ್ಲಿ ಮಾತನಾಡಿದ್ದಾರೆ. ಕಾಂಗ್ರೆಸ್ ನವರೇ ಬಿಜೆಪಿ ಕಾರ್ಯಕರ್ತರೇನು ಬಳೆ ತೊಟ್ಟು ಕುಳಿತಿಲ್ಲ. ಚರ್ಚೆ ಮಾಡುತ್ತೇವೆ,ತಾರ್ಕಿಕ ಅಂತ್ಯದ ವರೆಗೆ ಹೋರಾಟ ಮಾಡುತ್ತೇವೆ. ನಾವೆಲ್ಲರೂ ಒಟ್ಟಾಗಿ ಮುಂದಿನ ಹೆಜ್ಜೆಯ ಕುರಿತು ತೀರ್ಮಾನ ಮಾಡುತ್ತೇವೆ” ಎಂದರು.

ಅಬ್ಬೇಪಾರಿ ಪಾರ್ಟಿ ಅಲ್ಲ

ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ ” ಕಾಂಗ್ರೆಸ್ ಸರಕಾರ ದೇಶದ ಮೇಲೆ ಬಾಂಬ್ ಹಾಕಲು ಬಂದವರನ್ನು, ಸಾವಿರಾರು ಜನರ ಮೇಲೆ ಹಲ್ಲೆ ಮಾಡಿದ ದೇಶದ್ರೋಹಿಗಳನ್ನು ಬಿಟ್ಟು ಬಿಟ್ಟಿದೆ. ಬಂಧಿಸುವ ಮುನ್ನ ಅವರಿಗೆಲ್ಲ ನೋಟಿಸ್ ಕೊಟ್ಟು ಬಿರಿಯಾನಿ ಕಬಾಬ್ ಕೊಟ್ಟಿದೆ. ಉಗ್ರರ ವಿರುದ್ಧ ಕೇಸ್ ವಾಪಾಸ್ ಪಡೆದಿದೆ, ಹುಬ್ಬಳ್ಳಿ, ಡಿಜೆ ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಅಪರಾಧಿಗಳನ್ನು ಬಿಟ್ಟು ಕಳುಹಿಸಿದ್ದಾರೆ. ಸಿ.ಟಿ.ರವಿ ಹಿಂದೂ ಪರ ಹೋರಾಟಗಾರ. ಅವರನ್ನು ಬಗ್ಗು ಬಡಿಯಲು ನೋಟಿಸ್ ಕೂಡ ಕೊಡದೆ ಬಂಧನ ಮಾಡಲಾಗಿದೆ. ಹೈ ಕೋರ್ಟ್ ಎಲ್ಲಿದ್ದಾರೋ ಅಲ್ಲೇ ಬಿಡುಗಡೆ ಮಾಡಬೇಕು ಅಂದು ತೀರ್ಪು ನೀಡಿದೆ. ನೀಡಿದ ತೀರ್ಪಿಗೆ ಸರಕಾರಕ್ಕೆ ಮಾನ ಮಾರ್ಯಾದೆ ಇದ್ದಾರೆ ರಾಜೀನಾಮೆ ಕೊಟ್ಟು ಹೋಗಬೇಕು. ಯಾಕೆ ಬಂಧಿಸಲಾಗಿದೆ ಎಂದು ಹೇಳಿಯೇ ಇಲ್ಲ. 10 ಠಾಣೆಗಳಿಗೆ ಕರೆದೊಯ್ದಿದ್ದರು.ಈ ರೀತಿ ಇತಿಹಾಸದಲ್ಲಿ ಎಲ್ಲೂ ನಡೆದಿಲ್ಲ” ಎಂದು ಆಕ್ರೋಶ ಹೊರ ಹಾಕಿದರೂ.

”ಕಾಂಗ್ರೆಸ್ ನವರೇನು ಪರ್ಮನೆಂಟ್ ಗಿರಾಕಿಗಳು ಅಲ್ಲ, ಮುಸ್ಲಿಮರ ಓಲೈಕೆ ಮಾಡಿ ಮಾಡಿ ಜನರು ದೇಶದಿಂದ ಓಡಿಸಿದ್ದಾರೆ. ಸಿದ್ದರಾಮಯ್ಯ ಅವರು ಔಟ್ ಗೋಯಿಂಗ್ ಸಿಎಂ. ಈಗಾಗಲೇ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ, ಅಧಿಕಾರ ಒದ್ದು ಪಡೆಯುವುದಾಗಿ” ಎಂದು ಕಿಡಿ ಕಾರಿದರು.

”ಸಿ.ಟಿ.ರವಿ ಒಬ್ಬಂಟಿ ಅಲ್ಲ ನಾವು ಜತೆಯಾಗಿ ನಿಲ್ಲುತ್ತೇವೆ. ಸಾವಿರಾರು ಕಾರ್ಯಕರ್ತರು ಜತೆಗಿದ್ದಾರೆ. ನಮ್ಮದು ಸಂಘಟನಾತ್ಮಕ ಶಕ್ತಿ ಉಳ್ಳ ಪಕ್ಷ. ಕಾಂಗ್ರೆಸ್ ರೀತಿ ಅಬ್ಬೇಪಾರಿ ಪಾರ್ಟಿ ಅಲ್ಲ. ನಾವು ಎಚ್ಚರಿಕೆ ನೀಡುತ್ತೇವೆ. ನಾವೂ ಬೀದಿಗಿಳಿದು ಹೋರಾಟ ಮಾಡುತ್ತೇವೆ. ತೀರ್ಪು ಕೊಡಲು ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ಏನು ಜಡ್ಜಾ? ಯಾರವರು?” ಎಂದು ಅಶೋಕ್ ಕಿಡಿ ಕಾರಿದರು.

”ಸಿ.ಟಿ.ರವಿ ಅವರ ಕೊಲೆ ಮಾಡಲು ಸುವರ್ಣ ಸೌಧಕ್ಕೆ 40 ಜನ ಬಂದಿದ್ದರು. ಐದು ಗಂಟೆ ಖಾನಾಪುರ ಪೊಲೀಸ್ ಠಾಣೆಯ ಹೊರಗೆ ನಮ್ಮನ್ನು ಕಾಯುವಂತೆ ಮಾಡಿದರು. ನಾನು ಗೃಹ ಸಚಿವನಾಗಿ ಕೆಲಸ ಮಾಡಿದವನು. ಒಬ್ಬರಾದ ಮೇಲೆ ಒಬ್ಬರು ಸಚಿವರು ಪೊಲೀಸರಿಗೆ ಕರೆ ಮಾಡಿ ಒತ್ತಡ ಹಾಕುತ್ತಿದ್ದರು. ತನಿಖಾಧಿಕಾರಿಗೆ ಬಿಟ್ಟು ಯಾರಿಗೂ ಅಧಿಕಾರ ಇಲ್ಲ. ಕಮಿಷನರ್ ಗೂ ಅಧಿಕಾರ ಇಲ್ಲ, ಮಂತ್ರಿಗೂ ಅಧಿಕಾರ ಇಲ್ಲ. ಅರಣ್ಯದ ಒಳಗೆ ಕರೆದುಕೊಂಡು ನಿಲ್ಲಿಸುತ್ತೀರಲ್ಲ. 500 ಕಿ.ಮೀ ಸಿ.ಟಿ.ರವಿ ಅವರನ್ನು ಅರಣ್ಯದಲ್ಲಿ ಸುತ್ತಾಡಿಸಿದರು. ಖಾನಾಪುರ ಠಾಣೆಗೆ ದೂರು ನೀಡಲು ಹೋದರೆ ನನಗೆ ಪ್ರವೇಶ ಇಲ್ಲ.ನಾನು ಸಂವಿಧಾನದತ್ತ ಹುದ್ದೆಯಲ್ಲಿದ್ದವನು. ನನಗೆ ಅಪಮಾನ ಮಾಡಿದರು. ಗುಂಡಾಗಿರಿ ಮಾಡಿದರು” ಎಂದು ಕೆಂಡಾಮಂಡಲರಾದರು.

ನಮಗೆ ಕಾನೂನು ತಜ್ಞರ ಜತೆ ಚರ್ಚೆ ಮಾತನಾಡಲು ಹಕ್ಕಿದೆ. ಅದಕ್ಕೆ ಅಡ್ಡಿ ಮಾಡಲು ಅವಕಾಶ ಇಲ್ಲ. ಯಾರು ಶಿಕ್ಷೆ ಕೊಡಬೇಕು ಎನ್ನುವುದು ತೀರ್ಮಾನವಾಗಬೇಕು. ನಮಗೆ ಕಾನೂನಿನಲ್ಲಿ ನಂಬಿಕೆ ಇದೆ. ಸಭಾಧ್ಯಕ್ಷರು ತಪ್ಪು ಎಂದು ತೀರ್ಪು ಕೊಡಬೇಕು, ಅವರು ದೂರು ನೀಡಬೇಕು, ಬಳಿಕ ಆರೋಪ ಸಾಬೀತಾದ ಮೇಲೆ ಜಡ್ಜ್ ತೀರ್ಪು ನೀಡಬೇಕು’ ಎಂದರು.

ಇನ್ನಷ್ಟು ಹೋರಾಟ

ತೀವ್ರವಾಗಿ ಬಳಲಿಲ್ಲ ಸಿ.ಟಿ.ರವಿ ಮಾತನಾಡಿ ”ಪೊಲೀಸ್ ಠಾಣೆಯ ಪರಿಧಿಗೆ ಬಾರದ ಪ್ರಕರಣದಲ್ಲಿ ಬಂಧಿಸಿ ನಾಲ್ಕು ಜಿಲ್ಲೆ, 11 ಗಂಟೆಗೂ ಹೆಚ್ಚು ಕಾಲ ಅಲೆದಾಡಿಸಿ ಮಾನಸಿಕವಾಗಿ ಕುಗ್ಗಿಸಿ, ದೈಹಿಕ ಹಲ್ಲೆ ಮಾಡುವುದನ್ನು ಕಾಂಗ್ರೆಸ್ ಸರಕಾರ ಪೊಲೀಸ್ ಬಲ ಉಪಯೋಗಿಸಿ ಮಾಡಿದೆ. ಎಲ್ಲ ನಾಯಕರು, ಸಾಮಾನ್ಯ ಕಾರ್ಯಕರ್ತರು ಜತೆಯಲ್ಲಿ ನಿಂತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಸತ್ಯಮೇವ ಜಯತೆ ಅನ್ನುವುದನ್ನು ನಾನು ಹೇಳಿದ್ದೇನೆ . ನಾನು ಹೋರಾಟದ ಮೂಲಕ ಬಂದವನು. 35 ವರ್ಷಗಳ ಹಿಂದೆ ಇಂತಹದ್ದು ಅನುಭವಿಸಿದ್ದೇನೆ. ಈ ರೀತಿ ಮಾಡಿದರೆ ಜನರ ಪರ ಇನ್ನಷ್ಟು ಹೋರಾಟ ಮಾಡಲು ಶಕ್ತಿ ನೀಡುತ್ತದೆ. ಮುಂದಿನ ವಿಚಾರ ನಿಧಾನಕ್ಕೆ ಹೇಳುತ್ತೇನೆ” ಎಂದರು.

ಟಾಪ್ ನ್ಯೂಸ್

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

High Court: ಮುಮ್ತಾಜ್‌ ಅಲಿ ಆತ್ಮಹ*ತ್ಯೆ ಪ್ರಕರಣ: ಆರೋಪಿಗಳನ್ನು ಪೊಲೀಸ್‌ ವಶಕ್ಕೆ ನೀಡಲ್ಲ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

Karnataka: ಲೋಕಾಯುಕ್ತ ದಾಳಿ; ಕಂತೆ ಕಂತೆ ಹಣ ವಶಕ್ಕೆ

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

H. D. Kumaraswamy: ರಾಜ್ಯದಲ್ಲಿ ಪ್ರಜಾಪ್ರಭುತ್ವ ಕೊನೆಯುಸಿರೆಳೆಯುತ್ತಿದೆಯೇ?

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

football

Football Ranking: ಭಾರತ ಒಂದು ಸ್ಥಾನ ಪ್ರಗತಿ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.