ಸಿದ್ದುಗೆ ದೇಶಭಕ್ತ- ದೇಶವಿರೋಧಿಗಳ ನಡುವಿನ ವ್ಯತ್ಯಾಸ ಗೊತ್ತಿಲ್ಲ: ಸಿ.ಟಿ.ರವಿ
Team Udayavani, Sep 30, 2022, 6:45 AM IST
ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶಭಕ್ತ ಸಂಘಟನೆ. ದೇಶದ ಮೇಲೆ ಬಾಹ್ಯ ಆಕ್ರಮಣ ಹಾಗೂ ಪ್ರಕೃತಿ ವಿಕೋಪಕ್ಕೆ ಒಳಗಾದಾಗ ದೇಶದ ಪರ ನಿಂತು ಕೆಲಸ ಮಾಡಿದ ಸಂಘಟನೆ. ದೇಶಭಕ್ತ ಸಂಘಟನೆಯನ್ನು ನಿಷೇಧಿ ಸುವುದು ಎಂದರೆ ಸಿದ್ದರಾಮಯ್ಯ ಏನೆಂದು ತಿಳಿದುಕೊಂಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸ್ವಯಂ ಸೇವಕರಾಗಿದ್ದವರು ದೇಶದ ಪ್ರಧಾನಿಯಾಗಿದ್ದಾರೆ. ನಾನು ಸ್ವಯಂ ಸೇವಕನಾಗಿ ಕೆಲಸ ಮಾಡಿದ್ದೇನೆ. ಸ್ವಯಂಸೇವಕ ಸಂಘ ಎಂದರೆ ಏನೆಂದು ನಮಗೆ ಗೊತ್ತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷೇಧಿ ಸಲು ಕಾರಣ ಬೇಕಲ್ವಾ? ದೇಶಭಕ್ತ ಸಂಘಟನೆ, ದೇಶ ವಿರೋಧಿ ಸಂಘಟನೆ ಇವೆರೆಡರ ನಡುವಿನ ವ್ಯತ್ಯಾಸ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಎಂದರು.
ಅಲ್ಪಸಂಖ್ಯಾತರ ಮತಕ್ಕೆ ಆಸೆ ಪಟ್ಟು ದೇಶದ್ರೋಹದ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಕುಮ್ಮಕ್ಕು ನೀಡುತ್ತಿವೆ. ನಮ್ಮ ಬದುಕು, ಜೀವನ, ಅಧಿಕಾರಕ್ಕಿಂತ ದೇಶ ದೊಡ್ಡದು. ಅವರಿಗೆ ದೇಶ ಹಾಳಾದರೂ ಪರವಾಗಿಲ್ಲ. ಅಧಿಕಾರ ಬೇಕು ಎಂಬ ಮನಸ್ಥಿತಿ ಹೊಂದಿದವರು. ಇವರ ಆಟ ಇಲ್ಲಿ ನಡೆಯುವುದಿಲ್ಲ ಎಂದರು.
ಲೂಟಿ ರವಿ ಮೊದಲು ಸಂವಿಧಾನಕ್ಕೆ ಗೌರವ ಕೊಡುವುದನ್ನು ಕಲಿಯಲಿ ಎಂಬ ಕಾಂಗ್ರೆಸ್ ಮುಖಂಡ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಫ್ತಾ ಗ್ಯಾಂಗ್ ನಾಯಕರೆಲ್ಲಾ ಪೊಲಿಟಿಕಲ್ ಲೇಬಲ್ ಅಂಟಿಸಿಕೊಂಡರೆ ನಾಯಕರಾಗಲು ಸಾಧ್ಯವಿಲ್ಲ. ಹರಿಪ್ರಸಾದ್ ಒಂದು ಕಾಲದಲ್ಲಿ ಹಫ್ತಾ ವಸೂಲಿ ಗ್ಯಾಂಗ್‌ನಲ್ಲಿದ್ದವರು. ಅವರು ನನಗೆ ಸರ್ಟಿಫಿಕೇಟ್ ಕೊಡುವ ಅವಶ್ಯಕತೆ ಇಲ್ಲ. ಬಿ.ಕೆ.ಹರಿಪ್ರಸಾದ್ ಇಲ್ಲಿಯವರೆಗೂ ಒಂದೇ ಒಂದು ಚುನಾವಣೆಯಲ್ಲಿ ಗೆಲುವು ಸಾಧಿ ಸಿಲ್ಲ. ಗೆಲ್ಲೋಕೆ ಸಾಧ್ಯನೂ ಇಲ್ಲ. ಹರಿಪ್ರಸಾದ್ ರೀತಿಯಲ್ಲಿ ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯನೂ ಅಲ್ಲ. ಹಫ್ತಾ ವಸೂಲಿ ಮಾಡುವ ಕ್ಯಾರೆಕ್ಟರ್ ನನ್ನದಲ್ಲ ಎಂದರು.
ಸಿದ್ದರಾಮಯ್ಯ ಮಾತನಾಡುವ ಮುಂಚೆ ಎಚ್ಚರಿಕೆ ವಹಿಸಬೇಕು. ದೇಶದ್ರೋಹಿಗಳ ಜತೆ ಸೇರಿ ದೇಶಪ್ರೇಮಿಗಳನ್ನು ಅವಮಾನಿಸಿದರೆ ನೀವು ಉಳಿಯುವುದಿಲ್ಲ, ದೇಶದ್ರೋಹಿಗಳೂ ಉಳಿಯುವುದಿಲ್ಲ. ದೇಶಪ್ರೇಮಿಗಳನ್ನು ಹೊರ ಹಾಕಿದರೆ ದೇಶ ಉಳಿಸುವವರು ಯಾರು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.