ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಸಿ.ವಿ.ಶಿವಶಂಕರ್ ನಿಧನ
Team Udayavani, Jun 28, 2023, 11:46 AM IST
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ, ಗೀತ ಸಾಹಿತಿ ಸಿ.ವಿ. ಶಿವಶಂಕರ್ (90) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು.
ಹೃದಯಾ ಘಾತವಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆ ಯುಸಿರೆಳೆದಿದ್ದಾರೆ.
ಬಾಲನಟರಾಗಿ ರಂಗಭೂಮಿ ಪ್ರವೇಶಿಸಿದ ಸಿ.ವಿ.ಶಿವಶಂಕರ್ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ, ಗೀತ ಸಾಹಿತಿ ಹೀಗೆ ಹಲವು ವಿಭಾಗಗಳಲ್ಲಿ ಗುರುತಿಸಿಕೊಂಡಿದ್ದರು. “ಸ್ಕೂಲ್ ಮಾಸ್ಟರ್’, “ಕೃಷ್ಣ ಗಾರುಡಿ’, “ರತ್ನಮಂಜರಿ’, “ರತ್ನಗಿರಿ ರಹಸ್ಯ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅನೇಕ ನಿರ್ದೇಶಕರ ಜೊತೆ ಸಹಾಯಕರಾಗಿ ದುಡಿದು ಬಳಿಕ “ಮನೆ ಕಟ್ಟಿ ನೋಡು’ ಸಿನಿಮಾವನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದರು. ಬಳಿಕ “ನಮ್ಮ ಊರು’, “ಪದವೀಧರ’, “ಮಹಡಿಮನೆ’, “ಮಹಾತಪಸ್ವಿ’,”ನಮ್ಮ ಊರ ರಸಿಕರು’, “ಕನ್ನಡಕುವರ’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಬಹುಮುಖ ಪ್ರತಿಭೆ: ಕನ್ನಡದ ಅತ್ಯುತ್ತಮ ಕವಿಗಳಲ್ಲಿ ಒಬ್ಬರಾಗಿದ್ದ ಲಕ್ಷ್ಮಣ ರಾವ್ ಹೊಯ್ಸಳ ಅವರ ಅಳಿಯ ಶಿವಶಂಕರ್. ಆಗ ಮದರಾಸಿನಲ್ಲಿದ್ದ ಕನ್ನಡ ಚಿತ್ರರಂಗದಲ್ಲಿ ತಮಿಳು ನಟ ನಟಿಯರಿಗೆ ಕನ್ನಡ ಕಲಿಸಲು ಶಿವಶಂಕರ ಅವರನ್ನು ಅಂದಿನ ನಿರ್ದೇಶಕ, ನಿರ್ಮಾಪಕರು ನೇಮಿಸುತ್ತಿದ್ದರಂತೆ. ಅಂದಿನ ಕಾಲದ ಕನ್ನಡದ ಅನೇಕ ನಟ ನಟಿಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಶಿವಶಂಕರ್ ಅವರದು.
ಸಿನಿಮಾದ ಜೊತೆಗೆ ಅವರು ರಂಗಭೂಮಿಯಲ್ಲೂ ತೊಡಗಿಸಿಕೊಂಡಿದ್ದರು. ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸುವ ಜೊತೆಗೆ ರೇಡಿಯೋ, ದೂರದರ್ಶನಕ್ಕೂ ಕಾರ್ಯಕ್ರಮಗಳನ್ನು ಮಾಡಿದ್ದರು.
ಕನ್ನಡಾಭಿಮಾನದ ಸಾಹಿತಿ:
ಸಿ.ವಿ.ಶಿವಶಂಕರ್ ಅವರ ಕನ್ನಡಾಭಿಮಾನ ದೊಡ್ಡದು. ತಮ್ಮ ಪ್ರತಿಯೊಂದು ಚಿತ್ರಗಳಲ್ಲೂ ಕನ್ನಡ ನಾಡಿನ ಹಿರಿಮೆ ಸಾರುವ ಗೀತೆಗಳನ್ನು ರಚಿಸುತ್ತಿದ್ದರು. ಸಿರಿವಂತನಾದರೂ ಕನ್ನಡ ನಾಡಲ್ಲಿ ಮೆರೆವೆ… , ಕನ್ನಡದಾ ರವಿ ಮೂಡಿ ಬಂದಾ… ನಾಡಚರಿತೆ ನೆನಪಿಸುವಾ ವೀರಗೀತೆಯಾ… ಬೆಳೆದಿದೆ ನೋಡಾ ಬೆಂಗಳೂರು ನಗರ… ನಾನೋಡಿ ನಲಿಯುವ ಕಾರವಾರ… ಇವೆಲ್ಲಾ ಅವರ ರಚನೆಯ ಗೀತೆಗಳೇ. ಮದ್ರಾಸಿನಲ್ಲಿದ್ದಾಗ ಮಾತಿನ ಮಧ್ಯೆ ಅನ್ಯ ಭಾಷೆಯ ಯಾರಾದರೂ ನಿಮ್ಮ ಕನ್ನಡದಲ್ಲಿ ಏನಿದೆ ಮಹಾ ಅಂದರೆ, ಆ ವಿಷಯವಾಗಿ ಜಗಳಕ್ಕೇ ಹೋಗಿಬಿಡುತ್ತಿದ್ದರಂತೆ ಶಿವಶಂಕರ್.ಮಾತ್ರವಲ್ಲ, ನಮ್ಮ ಕನ್ನಡದಲ್ಲಿ ಎಲ್ಲಾ ಇದೆ ಎಂದು ವಾದಿಸಿ ಗೆಲ್ಲುತ್ತಿದ್ದರಂತೆ. ಕರ್ನಾಟಕದ ಜನ ಉದ್ಯೋಗ ಅರಸಿ ವಲಸೆ ಹೊರಟಾಗ ಹೋಗದಿರಿ, ಸೋದರರೇ, ಹೋಗದಿರಿ ಬಂಧುಗಳೇ…ಎಂದು ಬರೆದವರು ಅವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಷ್ಟ್ರಮಟ್ಟದಲ್ಲೂ ಪ್ರತಿಭಟಿಸಲಿ, ಬಿಜೆಪಿಯವರೇ ಮೂಗು ಕೊಯ್ಯಿಸಿಕೊಳ್ತಾರೆ: ಪ್ರಿಯಾಂಕ್
Officers Promotion: ಹೊಸ ವರ್ಷಕ್ಕೆ 153 ಅಧಿಕಾರಿಗಳಿಗೆ ಭಡ್ತಿ ಭಾಗ್ಯ
New Office Bearers: ಜೆಡಿಎಸ್‌ಗೆ ಹೊಸ ರಾಜ್ಯಾಧ್ಯಕ್ಷ ಜತೆಗೆ ಮೂರು ಕಾರ್ಯಾಧ್ಯಕ್ಷ?
BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.