ಕಾಂಗ್ರೆಸ್‌ಗೆ ಸಂಪುಟ ಇಕ್ಕಟ್ಟು: ಸಿಎಂ, ಡಿಸಿಎಂಗೆ ಸಂಪುಟ, ಖಾತೆ ಹಂಚಿಕೆ ಸವಾಲು

Team Udayavani, May 22, 2023, 8:10 AM IST

ಕಾಂಗ್ರೆಸ್‌ಗೆ ಸಂಪುಟ ಇಕ್ಕಟ್ಟು: ಸಿಎಂ, ಡಿಸಿಎಂಗೆ ಸಂಪುಟ, ಖಾತೆ ಹಂಚಿಕೆ ಸವಾಲು

ಬೆಂಗಳೂರು: ನಾಲ್ಕು ದಿನ ದಿಲ್ಲಿಯಲ್ಲೇ ಠಿಕಾಣಿ ಹೂಡಿ, ಹಗಲು-ರಾತ್ರಿ ಸಭೆ ನಡೆಸಿ ಹಾಗೋ-ಹೀಗೋ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹುದ್ದೆಗೆ ಕ್ರಮವಾಗಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಹೆಸರು ಘೋಷಿಸಿ, ಪ್ರಮಾಣವಚನ ಸ್ವೀಕರಿಸಿದ್ದೂ ಆಯಿತು. ಈಗ ಸಚಿವ ಸಂಪುಟ ವಿಸ್ತರಣೆ ಕಗ್ಗಂಟನ್ನು ಬಿಡಿಸಬೇಕಾದ ತಲೆನೋವು ಎದುರಾಗಿದೆ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸಹಿತ ಹತ್ತು ಮಂದಿಯ ಪ್ರಮಾಣವಚನ ಸ್ವೀಕಾರದ ಬೆನ್ನಲ್ಲೇ ಸಂಪುಟ ವಿಸ್ತರಣೆಗೆ ಸಂಬಂಧಿಸಿ ಬಣಗಳ ನಡುವೆ ತೆರೆಮರೆಯ ಕಿತ್ತಾಟ ಆರಂಭ ವಾಗಿದೆ. ಇದರಿಂದ ಉಂಟಾಗಿರುವ ಕಗ್ಗಂಟು ಆಕಾಂಕ್ಷಿಗಳನ್ನು ಕಂಗೆಡಿಸಿದೆ. ಇದು ಅಲ್ಲಲ್ಲಿ ಅಸಮಾಧಾನ ಸ್ಫೋಟಗೊಳ್ಳುವಂತೆ ಮಾಡಿದೆ. “ಪಕ್ಷ ನಿಷ್ಠರನ್ನು ನಿಕೃಷ್ಟವಾಗಿ ಕಾಣುತ್ತಿರುವ’ ಬಗ್ಗೆ ರವಿವಾರ ಕೆಲವರು ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾವಿಸುವ ಶಾಸಕರ ಹೆಸರುಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅಪಸ್ವರ ಎತ್ತಿದರೆ, ಡಿ.ಕೆ. ಶಿವಕುಮಾರ್‌ ಉಲ್ಲೇಖೀಸುವ ಹೆಸರಿಗೆ ಮುಖ್ಯ ಮಂತ್ರಿಯಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಉದಾ ಹರಣೆಗೆ ಮೇಲ್ಮನೆಯಲ್ಲಿ ವಿಪಕ್ಷ ನಾಯಕರಾಗಿರುವ ಬಿ.ಕೆ. ಹರಿಪ್ರಸಾದ್‌ಗೆ ಸಹಜ ವಾಗಿ ಸಚಿವ ಸ್ಥಾನ ಸಿಗಬೇಕಿತ್ತು. ಆದರೆ ಅದಕ್ಕೆ ಬ್ರೇಕ್‌ ಹಾಕಲಾಯಿತು. ತುಮಕೂರಿನ ಟಿ.ಬಿ. ಜಯಚಂದ್ರ ಮತ್ತು ಕೆ.ಎನ್‌. ರಾಜಣ್ಣ ಹೆಸರುಗಳನ್ನು ಸಭಾಧ್ಯಕ್ಷ ಮತ್ತು ಉಪ ಸಭಾಧ್ಯಕ್ಷರ ಸ್ಥಾನಕ್ಕೆ ಪ್ರಸ್ತಾವಿಸಿದಾಗ, ಒಂದೇ ಜಿಲ್ಲೆಯವರಾಗುತ್ತಾರೆ ಎಂಬ ನಿರಾಕರಣೆ ಕೇಳಿಬರುತ್ತಿದೆ. ಇದಕ್ಕೆ ಪರ್ಯಾಯವಾಗಿ ಬಳ್ಳಾರಿಯ ನಾಗೇಂದ್ರ ಅವರ ಹೆಸರನ್ನು ಪ್ರಸ್ತಾ ವಿಸಿದಾಗ, ಮತ್ತೂಂದು ಬಣ “ಬೇಡ’ ಎಂದು ತಳ್ಳಿಹಾಕುತ್ತಿದೆ. ಈ ಹಿಂದೆ ಜಮೀರ್‌ ಅಹಮ್ಮದ್‌ ಖಾನ್‌ ಹೆಸರಿಗೆ ಪ್ರತಿಯಾಗಿ ಎನ್‌.ಎ. ಹ್ಯಾರಿಸ್‌ ಹೆಸರು ತೂರಿಬಂದಿತ್ತು.

ಇಬ್ಬರ ನಡುವಿನ ಈ ತಿಕ್ಕಾಟದಿಂದಲೇ 26-28 ಸಚಿವರ ಪಟ್ಟಿ ಕೇವಲ 10ಕ್ಕೆ (ಸಿಎಂ-ಡಿಸಿಎಂ ಸೇರಿ) ಸೀಮಿತಗೊಂಡಿತು.

ಈಗಲೂ ಹಗ್ಗಜಗ್ಗಾಟ ಮುಂದು ವರಿದಿದ್ದರಿಂದ ಸಹಜ ಆಕಾಂಕ್ಷಿಗಳಿಗೆ ನಿರಾಸೆ ಆಗುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಅಸಮಾಧಾನ ಮತ್ತಷ್ಟು ತೀವ್ರಗೊಂಡು ಮುಜುಗರ ಎದುರಿಸಬೇಕಾಗುವುದು ಖಚಿತ. ದಿನೇಶ್‌ ಗುಂಡೂರಾವ್‌, ಬಿ.ಕೆ. ಸಂಗಮೇಶ್ವರ, ಬಸವರಾಜ ರಾಯರೆಡ್ಡಿ, ಪುಟ್ಟರಂಗಶೆಟ್ಟಿ ಮತ್ತಿತರರ ಬಹಿರಂಗ ಹೇಳಿಕೆಗಳು ಆಗಲೇ ಅಂಥದ್ದೊಂದು ಸುಳಿವು ನೀಡಿವೆ.

ಆಕಾಂಕ್ಷಿಗಳು ಯಾರು?
ಪಕ್ಷದ ಮೂಲಗಳ ಪ್ರಕಾರ ಒಟ್ಟಾರೆ ಸಚಿವ ಸಂಪುಟ 34 ಸಚಿವರನ್ನು ಒಳಗೊಂಡಿರುತ್ತದೆ. ಈ ಪೈಕಿ 10 ಮಂದಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಲ್ಕು ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಉಳಿದ 20 ಸ್ಥಾನಗಳಿಗೆ ಮುಸುಕಿನ ಗುದ್ದಾಟ ನಡೆದಿದೆ. ಅತಿ ಹೆಚ್ಚು ಶಾಸಕರನ್ನು ನೀಡಿರುವ ವೀರಶೈವ-ಲಿಂಗಾಯತ ಸಮುದಾಯದಲ್ಲಿ ಸಹಜವಾಗಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಬಸವನ ಬಾಗೇವಾಡಿಯ ಶಿವಾನಂದ ಪಾಟೀಲ್‌, ಧಾರವಾಡ ಗ್ರಾಮೀಣ ಕ್ಷೇತ್ರದ ವಿನಯ ಕುಲಕರ್ಣಿ, ಬೆಳಗಾವಿಯ ಲಕ್ಷ್ಮೀ ಹೆಬ್ಟಾಳ್ಕರ್‌ (ಮಹಿಳಾ ಕೋಟಾದಿಂದಲೂ) ಮತ್ತು ಲಕ್ಷ್ಮಣ ಸವದಿ, ಭದ್ರಾವತಿಯ ಬಿ.ಕೆ. ಸಂಗಮೇಶ್ವರ, ಸೇಡಂನ ಡಾ| ಶರಣಪ್ರಕಾಶ ಪಾಟೀಲ್‌ ಮತ್ತಿತರರ ಹೆಸರು ಮುಂಚೂಣಿಯಲ್ಲಿದೆ.
ಒಕ್ಕಲಿಗರಲ್ಲಿ ಶಿರಾ ತಾಲೂಕಿನ ಟಿ.ಬಿ. ಜಯಚಂದ್ರ, ಬ್ಯಾಟರಾಯನಪುರದ ಕೃಷ್ಣ ಬೈರೇಗೌಡ, ವಿಜಯನಗರದ ಎಂ. ಕೃಷ್ಣಪ್ಪ, ಮಾಗಡಿಯ ಎಚ್‌.ಸಿ. ಬಾಲಕೃಷ್ಣ, ವೆಂಕಟೇಶ್‌, ನಾಗಮಂಗಲದ ಎನ್‌. ಚೆಲುವರಾಯಸ್ವಾಮಿ, ಕುಣಿಗಲ್‌ನ ರಂಗನಾಥ್‌ ಮತ್ತಿತರರು ರೇಸ್‌ನಲ್ಲಿದ್ದಾರೆ. ಇವರ ಜತೆಗೆ ಹೊಸ ಮುಖಗಳ ಕೋಟಾದಲ್ಲಿ ಅಜಯ್‌ ಸಿಂಗ್‌, ಸಲೀಂ ಅಹಮ್ಮದ್‌, ರಹೀಂ ಖಾನ್‌, ಎನ್‌.ಎಚ್‌. ಕೋನರೆಡ್ಡಿ, ವಿಜಯಾನಂದ ಕಾಶೆಪ್ಪನವರ, ನಾಗೇಂದ್ರ, ಆನೇಕಲ್‌ನ ಶಿವಣ್ಣ ಮೊದಲಾದವರು ಆಕಾಂಕ್ಷಿಗಳಾಗಿದ್ದಾರೆ.

ಜಾತಿ, ಜಿಲ್ಲಾ ಕೋಟಾಗಳಡಿ ಲಾಬಿ
ಕೆಲವರು ತಮ್ಮ ಸಮುದಾಯ, ಜಿಲ್ಲೆ, ಪ್ರಾದೇಶಿಕತೆ ಕೋಟಾಗಳನ್ನು ಮುಂದಿಟ್ಟು ಮಂತ್ರಿ ಪಟ್ಟಕ್ಕೆ ಲಾಬಿ ಮಾಡುತ್ತಿದ್ದಾರೆ. ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್‌, “ಅಧಿಕಾರ ಮುಖ್ಯವಲ್ಲ; ಜನರ ನಂಬಿಕೆ ಉಳಿಸಿ  ಕೊಳ್ಳು ವುದು ಮುಖ್ಯ. ನಾಯಕರ ಮನೆಗಳ ಸುತ್ತ ಓಡಾಡುವುದು, ಚಾಡಿ ಹೇಳು ವುದರಿಂದ ಪ್ರಯೋಜನ ಇಲ್ಲ’ ಎಂದಿದ್ದಾರೆ.

ಸಮುದಾಯ ಅವಗಣನೆ?
ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಕೊರಮ, ಕೊರಚ, ಲಂಬಾಣಿ, ಬೋವಿ ಸಹಿತ ಪರಿಶಿಷ್ಟ ಪಂಗಡಗಳು ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರೂ ಆ ಸಮುದಾಯಗಳ ಪ್ರತಿನಿಧಿಗಳನ್ನು ಅವಗಣಿಸಲಾಗುತ್ತಿದೆ ಎಂಬ ಅಪಸ್ವರ ಕೇಳಿಬರುತ್ತಿದೆ. ಈ ಸಮುದಾಯಗಳ ರುದ್ರಪ್ಪ ಲಮಾಣಿ, ಪ್ರಕಾಶ ರಾಠೊಡ್‌ ಆಕಾಂಕ್ಷಿಗಳಾಗಿದ್ದಾರೆ. ರುದ್ರಪ್ಪ ಲಮಾಣಿಗೆ ಈ ಹಿಂದೆಯೇ ಅವಕಾಶ ನೀಡಲಾ ಗಿತ್ತು. ಪ್ರಕಾಶ್‌ ರಾಠೊಡ್‌ ಅವರು ಸಿದ್ದರಾಮಯ್ಯ ಜತೆಗೆ 120 ಕ್ಷೇತ್ರಗಳಲ್ಲಿ ಚುನಾವಣ ಪ್ರಚಾರ ಮಾಡಿದ್ದು, 40 ಕ್ಷೇತ್ರಗಳಲ್ಲಿ ಪ್ರಮುಖ ಭಾಷಣ ಮಾಡಿ ಪಕ್ಷದ ಗೆಲುವಿಗೆ ಶ್ರಮಿ ಸಿದ್ದಾರೆ. ಆದಾಗ್ಯೂ ಇವರು ಸಂಪುಟದಲ್ಲಿ ಸೇರದಿರುವ ಬಗ್ಗೆ ಸಮುದಾಯ ಬೇಸರ ವ್ಯಕ್ತಪಡಿಸಿದೆ.

ಟಾಪ್ ನ್ಯೂಸ್

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

HC-Mahadevappa

Incentive: ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಪ್ರೋತ್ಸಾಹಧನ ದ್ವಿಗುಣ: ಸಚಿವ ಮಹದೇವಪ್ಪ

Sathish-sail–court

Mining Case: ಶಿಕ್ಷೆ ರದ್ದು ಕೋರಿ ಶಾಸಕ ಸೈಲ್‌ ಸೇರಿ ನಾಲ್ವರು ಹೈಕೋರ್ಟ್‌ಗೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.