ನಾಳೆ ಸಂಪುಟ ವಿಸ್ತರಣೆ: ಟಿಎ, ಡಿಎ ಪ್ರಕರಣ ತಿಮ್ಮಾಪುರಗೆ ತೊಡರುಗಾಲು
Team Udayavani, Aug 31, 2017, 8:52 AM IST
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯನ್ನು ಶುಕ್ರವಾರ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಆದರೆ, ಸಂಪುಟ ಸೇರುವ ಪಟ್ಟಿಯಲ್ಲಿರುವ ವಿಧಾನ ಪರಿಷತ್ ಸದಸ್ಯ ಆರ್.ಬಿ. ತಿಮ್ಮಾಪುರ ಅವರಿಗೆ ಸುಳ್ಳು ದಾಖಲೆ ಸೃಷ್ಠಿಸಿ ಟಿಎ, ಡಿಎ ಪಡೆದಿರುವ ಆರೋಪ ಪ್ರಕರಣ ತೊಡರುಗಾಲು ಆಗುವ ಸಾಧ್ಯತೆಯಿದೆ.
ತಿಮ್ಮಾಪುರ ವಿರುದ್ಧದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರುವ ಪ್ರತಿಪಕ್ಷ ಬಿಜೆಪಿ ಅವರ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದೆ. ಜೊತೆಗೆ ರಾಜ್ಯ ಪಾಲರಿಗೂ ದೂರು ನೀಡಲು ಮುಂದಾಗಿರುವುದರಿಂದ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕಾಂಗ್ರೆಸ್ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ. ಎಂಟು ಮಂದಿ ವಿಧಾನಪರಿಷತ್ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ಬಿಜೆಪಿಯ ವರು ದೂರು ನೀಡಿದರೆ, ಸಂಪುಟ ವಿಸ್ತರಣೆಗೆ ಮತ್ತೆ ಗೃಹಣ ಹಿಡಿ ಯುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ತೀರ್ಮಾನ ಮಾಡಿದಂತೆ ತಿಮ್ಮಾಪುರ ಅವರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲಿ
ದ್ದಾರೆ. ಅವರ ವಿರುದ್ಧದ ಆರೋಪ ವನ್ನು ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ರಾಜ್ಯಪಾಲ ವಜುಭಾಯಿವಾಲ ಗುಜರಾತ್ ಪ್ರವಾಸದಲ್ಲಿದ್ದು, ಗುರುವಾರ ಬೆಂಗಳೂರಿಗೆ ಆಗಮಿಸಲಿದ್ದು, ಅವರು ಆಗಮಿಸಿದ ತಕ್ಷಣ ಸಂಪುಟ ವಿಸ್ತರಣೆಗೆ ಸಮಯವಕಾಶ ಕೋರಲಾಗುವುದು ಎಂದು ತಿಳಿದು ಬಂದಿದೆ. ಆರ್.ಬಿ. ತಿಮ್ಮಾಪುರಗೆ ಸ್ಥಾನ ತಪ್ಪಿದರೆ ವಿಧಾನ ಪರಿಷತ್ ಸದಸ್ಯೆ ಮೋಟಮ್ಮಗೆ ಅವಕಾಶ ದೊರೆತರೂ ಆಶ್ಚರ್ಯವಿಲ್ಲ ಎಂಬ ಮಾತು ಕೇಳಿ ಬರುತ್ತಿದೆ.
ಆರ್. ಬಿ. ತಿಮ್ಮಾಪುರ ಸಚಿವರಾಗುತ್ತಾರೋ, ಇಲ್ಲವೋ ಅಂತ ಯಾರಿಗೆ ಗೊತ್ತು? ಅವರು ತಪ್ಪು ಮಾಡಿದ್ದರೆ, ಕಾನೂನು ಪ್ರಕಾರ ಕ್ರಮ ಜರುಗುತ್ತದೆ.
ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland; ವಾಹನ ಕಂದಕಕ್ಕೆ ಬಿದ್ದು ಬೆಳಗಾವಿ ಯೋಧ ಹುತಾತ್ಮ
NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ
Naxal; ರಾಜ್ಯದಲ್ಲಿ 99 % ನಕ್ಸಲಿಸಂ ಅಂತ್ಯಗೊಂಡಿದೆ: ಡಾ.ಜಿ.ಪರಮೇಶ್ವರ್
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.