24ಕ್ಕೆ ಕೇಬಲ್ ಸಂಪರ್ಕ ಬಂದ್: 80 ಲಕ್ಷ ಸಂಪರ್ಕಗಳಲ್ಲಿ ವ್ಯತ್ಯಯ
Team Udayavani, Jan 19, 2019, 12:35 AM IST
ಬೆಂಗಳೂರು: ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಹೊಸದರ ನಿಗದಿ ನಿಯಮವನ್ನು ಖಂಡಿಸಿ ದಕ್ಷಿಣ ಭಾರತ ಆಪರೇಟರ್ಸ್ ಅಸೋಸಿಯೇಷನ್‌ನಿಂದ ಜ.24ರಂದು ಬಂದ್ ಹಮ್ಮಿಕೊಂಡಿದ್ದು, ಈ ವೇಳೆ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಕೇಬಲ್ ಸೇವೆಗಳು ಬಂದ್ ಆಗಲಿವೆ. ಅಲ್ಲದೆ ರಾಜ್ಯದ 80 ಲಕ್ಷಕ್ಕೂ ಹೆಚ್ಚಿನ ಕೇಬಲ್ ಸಂಪರ್ಕದಲ್ಲಿ ವ್ಯತ್ಯಯವಾಗಲಿದೆ.
ಈ ಕುರಿತು ಮಾಹಿತಿ ನೀಡಿದ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಅವರು, ಟ್ರಾಯ್‌ನ ಹೊಸ ನಿಯಮದಿಂದ ಕೇವಲ ಕೇಬಲ್ ಆಪರೇಟರ್ಗೆ ನಷ್ಟವಾಗುತ್ತಿಲ್ಲ. ವಿಭಿನ್ನ, ಪ್ರತ್ಯೇಕ ದರಗಳಿಂದ ವೀಕ್ಷಕರಿಗೂ ಹೊರೆಯೂ ಆಗುತ್ತಿದೆ. ಈ ಹಿಂದೆ ನಗರ ಭಾಗದ ಗ್ರಾಹಕರು 300ರೂ., ಗ್ರಾಮೀಣ ಗ್ರಾಹಕರು 150 ರೂ. ನೀಡಿ 400 ಕ್ಕೂ ಹೆಚ್ಚಿನ ಚಾನೆಲ್‌ಗಳನ್ನು ಪಡೆಯುತ್ತಿದ್ದರು. ಟ್ರಾಯ್ ಹೊಸ ನೀತಿಯಿಂದ ಈಗ ಎಲ್ಲಾ ಗ್ರಾಹಕರು ಜಿಎಸ್‌ಟಿ ಸೇರಿ 154 ರೂ. ಕಡ್ಡಾಯವಾಗಿ ಪಾವತಿಸಬೇಕಿದೆ. ಆನಂತರ ತಮ್ಮ ಇಚ್ಚೆಯ ಚಾನೆಲ್‌ಗಳಿಗೆ ಪ್ರತ್ಯೇಕ ಶುಲ್ಕ ಹಾಗೂ ತೆರಿಗೆ ನೀಡಬೇಕಿದೆ. ಇನ್ನು ಉಚಿತವಾಗಿ ನೀಡುತ್ತಿರುವ 100 ಚಾನೆಲ್‌ಗಳಲ್ಲಿ 24 ದೂರದರ್ಶನ ಚಾನೆಲ್ ಗಳು, ಸುದ್ದಿ ಚಾನೆಲ್‌ಗಳೇ ಇವೆ. ಮನೋರಂಜನೆ, ಕ್ರೀಡಾ ಚಾನೆಲ್‌ಗಳು ಸಾಕಷ್ಟು ಕಡಿಮೆ ಇವೆ. ಅಲ್ಲದೇ ಪ್ರಸ್ತುತ ಕೇಬಲ್ ಆಪರೇಟರ್ ನೀಡುತ್ತಿರುವಷ್ಟು ಚಾನೆಲ್‌ಗಳನ್ನು ಈ ಹೊಸ ನಿಯಮದಡಿ ಪಡೆದರೆ ತಿಂಗಳ ಶುಲ್ಕ ಒಂದು ಸಾವಿರ ರೂ. ದಾಟುತ್ತದೆ. ಇವೆಲ್ಲವನ್ನೂ ಪ್ರಶ್ನಿಸಿ ನಿಯಮದಲ್ಲಿ ತಿದ್ದುಪಡಿ ತರಲು ಈ ಬಂದ್ ಮಾಡುತ್ತಿದ್ದೇವೆ ಎಂದರು.
ಈ ಹಿಂದೆ ಕೇಬಲ್ ಅಪರೇಟರ್ಗಳೇ ಶೇ.5ರಷ್ಟು ತೆರಿಗೆ ಕಟ್ಟುತ್ತಿದ್ದರು. ಆದರೆ, ಈಗ ಶುಲ್ಕದ ಜತೆ ಶೇ.18ರಷ್ಟು ಜಿಎಸ್‌ಟಿ ಕಟ್ಟಬೇಕಾಗಿದೆ. ಕನ್ನಡ ಚಾನೆಲ್‌ಗಳ ಪೈಕಿ ಎಲ್ಲಾ ನ್ಯೂಸ್ ಚಾನೆಲ್‌ಗಳು ಮಾತ್ರ ಉಚಿತವಿದ್ದು, ಉಳಿದ ಎಲ್ಲಾ ಮನೋರಂಜನಾ ಚಾನೆಲ್‌ಗಳಿಗೆ ಪ್ರತ್ಯೇಕ ಶುಲ್ಕ ನೀಡಬೇಕಿದೆ. ಇದು ಗ್ರಾಹಕ ವಿರೋಧಿ ನಡೆ ಎಂದರು. ಬಂದ್‌ಗೆ ಎಲ್ಲಾ ರಾಜ್ಯಗಳ ಜಿಲ್ಲಾ, ತಾಲೂಕುವಾರು ಆಪರೇಟರ್ ಬೆಂಬಲ ನೀಡಿದ್ದಾರೆ. ಜ.24ರಂದು ದಕ್ಷಿಣ ಭಾರತ ಕೇಬಲ್ ಸೇವೆ ಸಂಪೂರ್ಣ ಬಂದ್ ಆಗಲಿದೆ. ಈ ಬಂದ್ ಗ್ರಾಹಕರು ಹಿತಕ್ಕೆ ಮಾಡುತ್ತಿದ್ದು, ಅವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇನ್ನು ಟ್ರಾಯ್ ಗ್ರಾಹಕ ಹಾಗೂ ಕೇಬಲ್ ಆಪರೇಟರ್ ವಿರೋಧಿ ನಿಯಮಗಳಲ್ಲಿ ತಿದ್ದುಪಡಿ ತರದಿದ್ದಲ್ಲಿ, ಮುಂದಿನ ದಿನಗಳಲ್ಲಿ ಸಂಪೂರ್ಣ ಕೇಬಲ್ ಬಂದ್ ಮಾಡಿ ನಿರಂತರವಾಗಿ ಮುಷ್ಕರ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.