ಜಿಂದಾಲ್ ಚರ್ಚೆಗೆ ವಿಶೇಷ ಅಧಿವೇಶನ ಕರೆಯಿರಿ
Team Udayavani, Jun 19, 2019, 3:05 AM IST
ಬೆಂಗಳೂರು: “ಜಿಂದಾಲ್‌ಗೆ ಭೂಮಿ ಪರಭಾರೆ ವಿಚಾರ ಚರ್ಚಿಸಲು ಮುಖ್ಯಮಂತ್ರಿಯವರು ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಲಿ’ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿ, “ಯಡಿಯೂರಪ್ಪ ಅವಧಿಯಲ್ಲಿ ಜಿಂದಾಲ್‌ಗೆ ಭೂಮಿ ನೀಡಲಾಗಿತ್ತು ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆಗ ಮುಖ್ಯಮಂತ್ರಿಯಾಗಿದ್ದವರು ಕುಮಾರಸ್ವಾಮಿ. ಗಣಿ ಖಾತೆ ಇದ್ದದ್ದು ಅವರ ಕೈಯಲ್ಲಿ. ನಮಗೆ ಆವತ್ತು ಅಧಿಕಾರವನ್ನು ಕೊಟ್ಟೇ ಇರಲಿಲ್ಲ, ಇನ್ನೆಲ್ಲಿ ನಾವು ಕೊಡೋದು’ ಎಂದು ಹೇಳಿದರು.
ಕುಮಾರಸ್ವಾಮಿಯವರು ಬ್ಯಾಟಿಂಗ್ ಮಾಡಿ ಸುಮ್ಮನಾಗ್ತಾರೆ. ಚರ್ಚೆಗೆ ಬನ್ನಿ ಎಂದರೆ ಎಲ್ಲಿಗೆ ಅಂತ ಬರೋದು? ಅವರೇನಾದ್ರೂ ಅಡ್ರೆಸ್ ಹೇಳಿದ್ರಾ? ಅವ್ರು ಯಾವ ಮನೆಯಲ್ಲಿ ಇರ್ತಾರೆ ಅನ್ನೋದು ನಮಗೆ ಗೊತ್ತಿಲ್ಲ. ಇನ್ನೆಲ್ಲಿ ಅವ್ರನ್ನು ಕೇಳ್ಳೋದು ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿಯವರು ಪತ್ರ ಕಳುಹಿಸಿರೋದು ಕೇವಲ ಜನರು, ಮೀಡಿಯಾದವರ ಕಣ್ಣು ಒರೆಸೋಕೆ ಮಾತ್ರ. ಕೊಟ್ಟ ಹಾಗೇ ಇರಬೇಕು, ಕೊಡದ ಹಾಗೇ ಇರಬೇಕು ಎಂದು ಕೊಟ್ಟಿದ್ದಾರೆ ಅಷ್ಟೇ. ನಮ್ಮ ಹೋರಾಟ ನಿಲ್ಲಲ್ಲ ಎಂದರು.
ಜಿಂದಾಲ್‌ಗೆ ಭೂಮಿ ಪರಭಾರೆ ವಿಚಾರದಲ್ಲಿ ಉಪ ಸಮಿತಿ ರಚನೆಯೇ ಬೇಕಿಲ್ಲ. ಭೂಮಿ ನೀಡಲು ವಿರೋಧ ಮಾಡುತ್ತಿರುವವರು ಎಚ್.ಕೆ.ಪಾಟೀಲ್, ಎಚ್.ವಿಶ್ವನಾಥ್. ಅಷ್ಟೇ ಏಕೆ? ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್ ಬಿಟ್ಟು ಎಲ್ಲರ ವಿರೋಧವೂ ಇದೆ. ನಾವು ಜಿಲ್ಲಾ ಮಟ್ಟದಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಜಿಂದಾಲ್‌ನವರು ಮೈನಿಂಗ್‌ಗೆ ಜಾಗ ತಗೊಂಡು ಒಳಗೆ ಹೋಟೆಲ್‌ಗೆ ಕೊಟ್ಟಿದ್ದಾರೆ ಯಾಕೆ? ಸ್ಥಳೀಯ ಶಾಸಕರು ಭೂಮಿ ನೀಡೋದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಿಂದಾಲ್ ಭೂಮಿ ಪರಭಾರೆ ದೊಡ್ಡ ಹಗರಣ. ನೈಸ್ ಭೂಮಿಯಂತೆ ಜಿಂದಾಲ್ ಭೂಮಿಯೂ ಗುಳುಂ ಯೋಜನೆ ಎಂದು ಆರೋಪಿಸಿದರು.
ಜಿಂದಾಲ್‌ಗೆ ಜಮೀನು ಗುತ್ತಿಗೆ ಹಾಗೂ ಮಾರಾಟ ಮಾಡಿಕೊಡುವ ಒಪ್ಪಂದ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದಾಗ, ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಲೇ ತೀರ್ಮಾನ ಆಗಿದೆ. ಆ ಸಂದರ್ಭದಲ್ಲಿ ಆನಂದ್ ಸಿಂಗ್ ಬಿಜೆಪಿಯಲ್ಲಿದ್ದರು. ಅವರ ಬಳಿ ಏನಾದರೂ ದಾಖಲೆ ಇದ್ದರೆ, ಸಂಪುಟ ಉಪ ಸಮಿತಿಗೆ ಮಾಹಿತಿ ನೀಡಲಿ.
-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
MUST WATCH
ಹೊಸ ಸೇರ್ಪಡೆ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibanda: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Tumkuru; ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ಪುತ್ರ ಆತ್ಮಹ*ತ್ಯೆ
Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.