ಬಿಜೆಪಿಯಿಂದ ಶಾಸಕರಿಗೆ ಆಮಿಷ: ಸ್ವತಃ ಮುಖ್ಯಮಂತ್ರಿ ಯಿಂದಲೇ ಬಾಂಬ್
Team Udayavani, Jan 26, 2019, 12:35 AM IST
ಬೆಂಗಳೂರು: ಆಪರೇಷನ್ ಕಮಲ ಕಾರ್ಯಾಚರಣೆ ಇನ್ನೂ ನಿಂತಿಲ್ಲ. ಬುಧವಾರ ರಾತ್ರಿಯಷ್ಟೇ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರೊಬ್ಬರಿಗೆ ದೂರವಾಣಿ ಕರೆ ಮಾಡಿ “ಬೃಹತ್ ಗಿಫ್ಟ್’ ವಿಚಾರ ಪ್ರಸ್ತಾವಿಸಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ರಾಜ್ಯಪಾಲ ವಜೂಭಾç ವಾಲಾ ಅವರನ್ನು ಭೇಟಿ ಮಾಡಿ ಪ್ರಸಕ್ತ ರಾಜಕೀಯ ವಿದ್ಯಮಾನ ಗಳ ಬಗ್ಗೆ ಮಾಹಿತಿ ನೀಡಿದ ಅನಂತರ ವಿಧಾನಸೌಧದಲ್ಲಿ ಸುದ್ದಿ ಗಾರರ ಜತೆ ಮಾತ ನಾಡಿದ ಅವರು, ಬಿಜೆಪಿ ಆಪ ರೇಷನ್ ಕಮಲ ಪ್ರಯತ್ನ ಮುಂದು ವರಿಸಿದೆ. ಕಾಂಗ್ರೆಸ್ ಶಾಸಕ ರೊಬ್ಬರಿಗೆ ಮಾಡಿರುವ ದೂರವಾಣಿ ಕರೆ ಸಾಕ್ಷಿ ಎಂದು ಹೇಳಿದರು.
ಬಿಜೆಪಿ ನಾಯಕರ ಗಿಫ್ಟ್ ಆಫರ್ ಅನ್ನು ಕಾಂಗ್ರೆಸ್ ಶಾಸಕರು ನಿರಾಕರಿಸಿದ್ದು. ನಮ್ಮ ಪಾಡಿಗೆ ನಮ್ಮನ್ನು ಇರಲು ಬಿಡಿ ಎಂದು ಫೋನ್ ಕಟ್ ಮಾಡಿದ್ದಾರೆ. ಇದಕ್ಕಿಂತ ಬೇರೇನು ಉದಾಹರಣೆ ಬೇಕು ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕ ರಿಗೆ ಆಫರ್ ಮಾಡಿದ ಗಿಫ್ಟ್ ಮೊತ್ತ ಕೇಳಿ ದರೆ ನೀವೇ ಆಶ್ಚರ್ಯ ಪಡುತ್ತೀರಿ. ಎಲ್ಲಿಗೆ ತಲುಪಿಸಬೇಕು ಗಿಫ್ಟ್ ಎಂದು ನೇರ ವಾಗಿಯೇ ಕೇಳಿದ್ದಾರೆ. ಎಲ್ಲಿಂದ ಆ ಹಣ ಬರುತ್ತಿದೆ ಎಂದು ಕೇಳಿದರೂ ನಿಮಗೆ ಅಚ್ಚರಿಯಾಗುತ್ತದೆ ಎಂದು ಹೇಳಿದರು.
ಆದರೆ ಗಿಫ್ಟ್ ಆಫರ್ ಮಾಡಿದ ಬಿಜೆಪಿ ನಾಯಕರು ಯಾರು? ದೂರವಾಣಿ ಕರೆ ಮಾಡಿದ್ದು ಯಾವ ಕಾಂಗ್ರೆಸ್ ಶಾಸಕರಿಗೆ? ಮೊತ್ತ ಎಷ್ಟು ಅಥವಾ ಯಾವ ರೀತಿಯ ಗಿಫ್ಟ್ ಎಂಬ ಬಗ್ಗೆ ಕುಮಾರಸ್ವಾಮಿ ಮಾಹಿತಿ ನೀಡಲಿಲ್ಲ. ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದರು.
ರಾಜ್ಯಪಾಲರ ಬುಲಾವ್?
ರೆಸಾರ್ಟ್ ರಾಜಕಾರಣ, ಕಾಂಗ್ರೆಸ್ ಶಾಸಕರ ಮಾರಾಮಾರಿ ಕುರಿತು ರಾಜ್ಯಪಾಲರು ಮೌಖೀಕವಾಗಿ ಸ್ಪಷ್ಟನೆ ಕೇಳಿದ್ದ ಹಿನ್ನೆಲೆ ಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಶುಕ್ರವಾರ ರಾಜಭವನಕ್ಕೆ ಭೇಟಿ ನೀಡಿ ಸಮಜಾಯಿಷಿ ನೀಡಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ನಡೆಸಿದ್ದರಿಂದಲೇ ರೆಸಾರ್ಟ್‌ಗೆ ಶಾಸಕರನ್ನು ಕರೆದೊಯ್ಯಬೇಕಾಯಿತು. ಮುಂಬಯಿಯಲ್ಲಿ ನಾಯಕರೊಬ್ಬರ ಸಂಪರ್ಕ ದಲ್ಲಿ ದ್ದಾರೆ ಎನ್ನಲಾದ ಇಬ್ಬರು ಶಾಸಕರು ಇನ್ನೂ ಹೊರಗೆ ಕಾಣಿಸಿ ಕೊಂಡಿಲ್ಲ ಎಂದು ರಾಜ್ಯಪಾಲರಿಗೆ ದೂರಿದ್ದಾರೆ ಎನ್ನಲಾಗಿದೆ.
ರೆಸಾರ್ಟ್‌ನಲ್ಲಿ ಇಬ್ಬರು ಶಾಸಕರ ಗಲಾಟೆ ವೈಯಕ್ತಿಕ. ಆ ಬಗ್ಗೆ ಕಾನೂನು ರೀತಿ ಕ್ರಮ ಕೈಗೊಳ್ಳ ಲಾಗುತ್ತಿದೆ. ನಾಪತ್ತೆ ಯಾಗಿರುವ ಶಾಸಕನ ಬಂಧನಕ್ಕೆ 3 ತಂಡ ರಚಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ. ಜತೆಗೆ ಜಂಟಿ ಅಧಿವೇಶನ ಹಾಗೂ ವಿಧಾನಪರಿಷತ್‌ಗೆ ತಿಪ್ಪೇಸ್ವಾಮಿ ನಾಮಕರಣ ವಿಚಾರವನ್ನೂ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.