ಶಂಕರ್ ಪರಿಷತ್ ಸದಸ್ಯರಾಗಬಹುದಾ?
Team Udayavani, Nov 16, 2019, 3:00 AM IST
ಬೆಂಗಳೂರು: ರಾಣಿಬೆನ್ನೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ತಪ್ಪಿರುವ ಆರ್.ಶಂಕರ್‌ಗೆ ಈಗಿನ ಸ್ಥಿತಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ. ಏಕೆಂದರೆ, ಸುಪ್ರೀಂಕೋರ್ಟ್ ತೀರ್ಪಿನಲ್ಲಿ 15 ಶಾಸಕರ ಅನರ್ಹತೆ ಎತ್ತಿ ಹಿಡಿಯಲಾಗಿದ್ದು, ಉಪ ಚುನಾವಣೆ ಸ್ಪರ್ಧೆಗೆ ಮಾತ್ರ ಒಪ್ಪಿಗೆ ನೀಡಲಾಗಿದೆ. ಮತ್ತೆ ಚುನಾವಣೆಯಲ್ಲಿ ಆಯ್ಕೆಯಾದರೆ ಮಾತ್ರ ಸಚಿವಗಿರಿ, ನಿಗಮ ಮಂಡಳಿ ಅಧ್ಯಕ್ಷಗಿರಿ ಸೇರಿ ಅಧಿಕಾರ ಪಡೆಯಲು ಸಾಧ್ಯ ಎಂದು ಹೇಳಲಾಗಿದೆ.
ಹೀಗಾಗಿ, ಶಂಕರ್ ಚುನಾವ ಣೆಗೆ ಸ್ಪರ್ಧೆ ಮಾಡದೆ, ಆಯ್ಕೆಯಾಗದೆ ಸಚಿವ ಅಥವಾ ಪರಿಷತ್ ಸದಸ್ಯರಾಗಲು ಸಾಧ್ಯ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಆದರೆ, ಬಿಜೆಪಿ ಮೂಲಗಳ ಪ್ರಕಾರ ಆರ್.ಶಂಕರ್ ಚುನಾವಣೆಗೂ ಸ್ಪರ್ಧೆ ಮಾಡ್ತೇನೆ ಟಿಕೆಟ್ ಕೊಡಿ, ಸೋತರೆ ಪರಿಷತ್ ಸದಸ್ಯ ರನ್ನಾಗಿ ಮಾಡಿ ಎಂದು ಬೇಡಿಕೆ ಇಟ್ಟಿದ್ದರು. ಆದರೆ, ಬಿಜೆಪಿ ಹೈಕಮಾಂಡ್ ಎರಡಲ್ಲಿ ಒಂದು ಆಯ್ಕೆ ಮಾಡಿಕೊ ಳ್ಳಲು ತಿಳಿಸಿತ್ತು.
ಅದರಂತೆ ಅಂತಿಮವಾಗಿ ಪರಿಷತ್ ಸ್ಥಾನ ಪಡೆ ಯಲು ಒಪ್ಪಿ ಕಣದಿಂದ ಹಿಂದೆ ಸರಿದಿದ್ದಾರೆ. ಸುಪ್ರಿಂ ತೀರ್ಪಿನಲ್ಲಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರಬೇಕು ಎಂದಿದೆ. ಪರಿಷತ್‌ಗೂ ಚುನಾವಣೆಯಲ್ಲೇ ಆಯ್ಕೆಯಾಗ ಬೇಕು. ಹೀಗಾಗಿ, ಪರಿಷತ್ ಸದಸ್ಯರಾಗಲು ಅವರಿಗೆ ಯಾವುದೇ ಅಡ್ಡಿ ಇಲ್ಲ ಎಂದು ಬಿಜೆಪಿ ಸಮಜಾಯಿಷಿ ನೀಡುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.