ಶ್ರೀರಂಗಪಟ್ಟಣದಲ್ಲಿ ಮಕರ ಸಂಕ್ರಮಣ ಲಕ್ಷ ದೀಪೋತ್ಸವ
Team Udayavani, Jan 13, 2020, 3:00 AM IST
ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇಗುಲದಲ್ಲಿ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿಯ ಅಂಗವಾಗಿ ಜ.15ರಂದು 30ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಶ್ರೀರಂಗನಿಗೆ ಅಂದೇ ಲಕ್ಷ ದೀಪದ ವಿಶೇಷ ಪೂಜೆ ನಡೆಯಲಿದ್ದು, ಭಕ್ತರಿಗೆ ಸ್ವರ್ಗದ ಬಾಗಿಲಿನ ಮೂಲಕ ಪ್ರವೇಶ ನೀಡಲಾಗುವುದು.
ದೇವರಿಗೆ ಬೆಣ್ಣೆ ಅಲಂಕಾರ ಕೂಡ ಮಾಡಲಾಗುತ್ತದೆ. ಲಕ್ಷ ದೀಪೋತ್ಸವದ ಅಂಗವಾಗಿ ದೇವಾಲ ಯದಿಂದ ಗಂಡಭೇರುಂಡ ವೃತ್ತದವರೆಗೆ ಸುಮಾರು 300 ಮೀಟರ್‌ನಷ್ಟು ದೂರದವರೆಗೆ ದೀಪಗಳನ್ನು ಜೋಡಿಸಲಾಗು ತ್ತದೆ. ಸಾಲಾಗಿ ಕಂಬಗಳನ್ನು ನೆಟ್ಟು, ಅದಕ್ಕೆ ಬಿದಿರಿನ ದಬ್ಬೆಗಳನ್ನು ಸಾಲಾಗಿ ಕಟ್ಟಲಾಗುತ್ತದೆ.
ನಂತರ, ಅದರ ಮೇಲೆ ಸಗಣಿ ಇಟ್ಟು, ಅದರ ಮೇಲೆ ಹಣತೆಯ ದೀಪಗಳನ್ನು ಉರಿಸಲಾಗುತ್ತದೆ. ಜ.15ರ ಮಕರ ಸಂಕ್ರಾಂತಿಯಂದು ಸೂಯಾಸ್ತಮಯ ಗೋಧೂಳಿ ಲಗ್ನದಲ್ಲಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಲಾಗುವುದು. ರಾತ್ರಿ ಹಚ್ಚಿದ ದೀಪಗಳು ಬೆಳಗಿನವರೆಗೂ ದೇವಾಲಯದ ಮುಂದೆ ಉರಿಯುವಂತೆ ಭಕ್ತರು ದೀಪಗಳಿಗೆ ಎಣ್ಣೆ ಹಾಕುತ್ತಿರುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan: ದರ್ಶನ್ ಜಾಮೀನು ರದ್ದತಿಗೆ ಸುಪ್ರೀಂ ಮೊರೆ ಹೋಗಲು ಸಿದ್ಧತೆ
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Session: ವಕ್ಫ್ ಜೊತೆ ಬಿಪಿಎಲ್ ಹೋರಾಟಕ್ಕೆ ಬಿಜೆಪಿ ಸಜ್ಜು
Operation Fear: ಕಾಂಗ್ರೆಸ್ ಶಾಸಕರ ಮೇಲೆ ನಿಗಾ ವಹಿಸಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Padubidri: ನಿಧಾನವಾಗಿ ಚಲಿಸಿ, ಹೆದ್ದಾರಿ ಕಾಮಗಾರಿ ನಡೆಯುತ್ತಿದೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.