Congress Govt., ಸಿಐಡಿಗೆ ಪ್ರಕರಣಗಳ ಹೊರೆ: ವಿಚಾರಣೆ, ತನಿಖೆ ವಿಳಂಬ!

ತನಿಖಾ ಹಂತದಲ್ಲಿ 371, ಕೋರ್ಟ್‌ನಲ್ಲಿ 1,307 ಪ್ರಕರಣಗಳು ಶೇ. 80 ಪ್ರಕರಣ ಸೈಬರ್‌ ಕ್ರೈಂ, ಅತ್ಯಾಚಾರಕ್ಕೆ ಸಂಬಂಧಿಸಿದವು

Team Udayavani, Sep 16, 2024, 7:41 AM IST

Congress Govt., ಸಿಐಡಿಗೆ ಪ್ರಕರಣಗಳ ಹೊರೆ: ವಿಚಾರಣೆ, ತನಿಖೆ ವಿಳಂಬ!

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಬೆನ್ನಲ್ಲೇ ಸಾಲು-ಸಾಲು ಪ್ರಕರಣಗಳು ಅಪರಾಧ ತನಿಖಾ ವಿಭಾಗದ (ಸಿಐಡಿ) ಅಂಗಳಕ್ಕೆ ಬಂದು ಬೀಳಲಾರಂಭಿಸಿವೆ. ಪರಿಣಾಮ ಸಿಐಡಿ ಅಧಿಕಾರಿ ಗಳಿಗೆ ಕಾರ್ಯದೊತ್ತಡ ಹೆಚ್ಚಾಗಿ ಗಂಭೀರ ಸ್ವರೂಪದ ಪ್ರಕರಣಗಳ ವಿಚಾರಣೆ, ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಕೆ ಕೂಡ ವಿಳಂಬ
ವಾಗುತ್ತಿದೆ.

ಪ್ರಸ್ತುತ ಸಿಐಡಿಯಲ್ಲಿರುವ 371 ಪ್ರಕರಣಗಳ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿವೆ. ಚಾರ್ಜ್‌ಶೀಟ್‌ ಸಲ್ಲಿಸಿರುವ 1,307 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಈ ಎಲ್ಲ ಪ್ರಕರಣಗಳನ್ನು ಇಲ್ಲಿರುವ 539 ಅಧಿಕಾರಿ ಹಾಗೂ ಸಿಬಂದಿಯೇ ನಿರ್ವಹಿಸಬೇಕಿರುವುದು ಸವಾಲಾಗಿದೆ.

ವಿಳಂಬವೇಕೆ?
ಸಿಐಡಿ ತನಿಖೆ ನಡೆಸುತ್ತಿರುವ ಶೇ. 80ರಷ್ಟು ಪ್ರಕರಣಗಳು ಕೋಟ್ಯಂತರ ರೂ. ವಂಚನೆ, ಸೈಬರ್‌ ಕ್ರೈಂ, ಕೊಲೆ, ಅನುಮಾನಾಸ್ಪದ ಸಾವು, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ್ದಾಗಿವೆ. ಅಲ್ಲಿ ಡಿಜಿಟಲ್‌ ಸಾಕ್ಷ್ಯಗಳೇ ಹೆಚ್ಚಿನ ಮಹತ್ವ ಪಡೆದಿವೆ. ಅವುಗಳನ್ನು ಕಲೆ ಹಾಕಲು ಹಲವು ದಿನಗಳೇ ಹಿಡಿಯುತ್ತವೆ. ಹೀಗಾಗಿ ಕಾಲಮಿತಿಯೊಳಗೆ ವಿಚಾರಣೆ, ತನಿಖೆ ನಡೆಸಿ ಚಾರ್ಜ್‌ಶೀಟ್‌ ಸಲ್ಲಿಸುವುದು ಸವಾಲಾಗಿದೆ. ಹಲವು ವರ್ಷಗಳಿಂದ ಖಾಲಿ ಇರುವ ಶೇ. 12ರಷ್ಟು ಹುದ್ದೆ ಭರ್ತಿಗೆ ಸಂಸ್ಥೆಗೆ ಬಲ ತುಂಬಲು ಸರಕಾರ ಆಸಕ್ತಿ ತೋರುತ್ತಿಲ್ಲ.

ಸೈಬರ್‌ ಕಳ್ಳರಿಗೆ ಸಿಐಡಿ ಬಲೆ
ಇತ್ತೀಚೆಗೆ ರಾಜ್ಯದಲ್ಲಿ ಮಿತಿ
ಮೀರುತ್ತಿರುವ ಸೈಬರ್‌ ಕ್ರೈಂ ಪತ್ತೆಗೆ ಸಿಐಡಿ ಪೊಲೀಸರು ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕ್ರಿಪ್ಟೋ ಕರೆನ್ಸಿ, ದುಡ್ಡು ಡಬಲ್‌ ಮಾಡುವುದಾಗಿ ಕೋಟ್ಯಂತರ ರೂ. ವಂಚನೆ, ಹ್ಯಾಕಿಂಗ್‌ ಮೂಲಕ ದತ್ತಾಂಶ ಕಳವು, ಉದ್ಯೋಗದ ಹೆಸರಿನಲ್ಲಿ ವಂಚನೆ, ಬ್ಲ್ಯಾಕ್‌ಮೇಲ್ ಮಾಡಿ ದುಡ್ಡು ಲಪಟಾಯಿಸಿರುವುದಕ್ಕೆ ಸಂಬಂಧಿಸಿದ 50ಕ್ಕೂ ಹೆಚ್ಚಿನ ಪ್ರಕರಣಗಳು ತನಿಖಾ ಹಂತದಲ್ಲಿವೆ. ಈ ಪ್ರಕರಣಗಳಲ್ಲಿ ಸಕ್ರಿಯವಾಗಿರುವ ಅಂತಾರಾಜ್ಯ ಸೈಬರ್‌ ಕ್ರೈಂ ಗ್ಯಾಂಗ್‌ಗಳು ಹಾಗೂ ವಿದೇಶಗಳಲ್ಲೇ ಕುಳಿತು ಸ್ಥಳೀಯರ ಮೂಲಕ ಸೈಬರ್‌ ಕ್ರೈಂ ಎಸಗಿ ಲಕ್ಷಾಂತರ ರೂ. ಲಪಟಾಯಿಸಿ ರುವವರ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ.

ಕಳೆದ 1 ವರ್ಷಧ ಅವಧಿಯಲ್ಲಿ ಸಿಐಡಿಗೆ ವರ್ಗಾವಣೆಯಾದ ಪ್ರಮುಖ ಕೇಸ್‌ಗಳು
– ಉಡುಪಿ ಜಿಲ್ಲೆ ಕಾರ್ಕಳ ಬೈಲೂರಿನ ಪರಶುರಾಮ ಥೀಮ್‌ ಪಾರ್ಕ್‌ ಅವ್ಯವಹಾರ ಹಗರಣ
– ಉಡುಪಿಯ ಕಾಲೇಜೊಂದರಲ್ಲಿ ನಡೆದ ವಿದ್ಯಾರ್ಥಿನಿಯರ ವೀಡಿಯೋ ಪ್ರಕರಣ
-ನಿಷೇಧಿತ ಬಿಟ್‌ಕಾಯಿನ್‌ ಮೂಲಕ ಅಕ್ರಮವಾಗಿ ಕೋಟ್ಯಂತರ ರೂ. ವ್ಯವಹಾರ
– ಹಾಸನದ ಅಶ್ಲೀಲ ವೀಡಿಯೋ ವೈರಲ್‌ ಸಂಬಂಧ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ, ಸೂರಜ್‌ ರೇವಣ್ಣ, ಶಾಸಕ ಎಚ್‌. ಡಿ. ರೇವಣ್ಣ ವಿರುದ್ಧದ ಪ್ರಕರಣ
– ಯಡಿಯೂರಪ್ಪ ವಿರುದ್ಧದಪೋಕ್ಸೋ ಪ್ರಕರಣ
- ಬಾಗಲಕೋಟೆಯ ಐಡಿಬಿಐ ಶಾಖೆಯಲ್ಲಿರುವ 5 ಇಲಾಖೆ ಗಳ ಹಣ ಅಕ್ರಮ ವರ್ಗಾವಣೆ ಪ್ರಕರಣ
– ಬೆಂಗಳೂರಿನಲ್ಲಿ ನಡೆದಿದ್ದ ವಿದ್ಯಾರ್ಥಿನಿ ಪ್ರಬುದ್ಧ ಅವರ ಕೊಲೆ ಪ್ರಕರಣ
– 232.88 ಕೋಟಿ ಸಾಲ ಪಡೆದು ವಂಚಿಸಿದ ಆರೋಪದಡಿ ಬೆಳಗಾವಿಯ ಸೌಭಾಗ್ಯ ಲಕ್ಷ್ಮೀ ಶುಗರ್‌ ಕಂಪೆನಿ ವಿರುದ್ಧ ದಾಖಲಾದ ಪ್ರಕರಣ
– ಯಾದಗಿರಿ ಪಿಎಸ್‌ಐ ಪರಶುರಾಮ್‌ ಅವರ ಅನುಮಾನಾ ಸ್ಪದ ಸಾವಿನ ಪ್ರಕರಣ

ಪ್ರಕರಣಗಳನ್ನು ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ತಾಂತ್ರಿಕ ಕಾರ್ಯಾಚರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಳೆದ 1 ವರ್ಷದ ಹಿಂದೆ ಸಿಐಡಿಯಲ್ಲಿ 903 ಪ್ರಕರಣಗಳಿದ್ದವು. ಸದ್ಯ 371 ತನಿಖಾ ಹಂತದಲ್ಲಿವೆ.
– ಡಾ| ಎಂ.ಎ. ಸಲೀಂ,
ಪೊಲೀಸ್‌ ಮಹಾನಿರ್ದೇಶಕ, ಸಿಐಡಿ

ಟಾಪ್ ನ್ಯೂಸ್

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

DC-CHILD

Child safety: ಮಕ್ಕಳ ರಕ್ಷಣ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನ

Suside-Boy

Putturu: ವೃದ್ಧನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Minister ಕೆ.ಎನ್‌. ರಾಜಣ್ಣಗೆ ಪ್ರಾಸಿಕ್ಯೂಷನ್‌ ಸಂಕಷ್ಟ?

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Priyank Kharge ಶೀಘ್ರ ರಾಜ್ಯಕ್ಕೆ ಪ್ರತ್ಯೇಕ ಬಾಹ್ಯಾಕಾಶ ನೀತಿ ಪ್ರಕಟ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

Ramalinga Reddy: “ಸಾರಿಗೆ ಸಿಬಂದಿ ವೇತನ ಪರಿಷ್ಕರಣೆಗೆ ಚರ್ಚೆ

sidda

‘One Nation One Election’ ಪ್ರಸ್ತಾವ: ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಸಿಎಂ

cmCM Siddaramaiah ಮೈಸೂರಲ್ಲಿ ಚಿತ್ರನಗರಿ: 110 ಎಕರೆ ಹಸ್ತಾಂತರ

CM Siddaramaiah ಮೈಸೂರಲ್ಲಿ ಚಿತ್ರನಗರಿ: 110 ಎಕರೆ ಹಸ್ತಾಂತರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kapu2

ISPRL Programme: ಪಾದೂರು ಜಲ್ಲಿ ಕ್ರಷರ್‌: ಸರ್ವೆಗೆ ಬಂದ ಅಧಿಕಾರಿಗಳಿಗೆ ತಡೆ

THIRU

MAHE University: ವಾಗ್ಶಾ ವಿದ್ಯಾರ್ಥಿಗೆ ವಿಶ್ವ ಪಾಕಶಾಲೆ ಶ್ರೇಷ್ಠತೆ ಗರಿ

Tarpana

Konkani Movie: “ತರ್ಪಣ’ ಚಲನಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

Shourya

Dharmasthala: ಶೌರ್ಯ ಯೋಧರು ಆಪತ್ಕಾಲದ ಆಪ್ತ ರಕ್ಷಕರು: ಡಾ.ಡಿ.ವೀರೇಂದ್ರ ಹೆಗ್ಗಡೆ

Kapu-Kalahasti

Chaturmasya: ವಿಶ್ವಕರ್ಮ ಮ್ಯೂಸಿಯಂ ಸ್ಥಾಪನೆ ಗುರಿ: ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.