ರಾಜಕೀಯದಲ್ಲಿ ಜಾತಿ ಲೆಕ್ಕಾಚಾರ ಹೆಚ್ಚಾಗಿದೆ: ಪೇಜಾವರ ಶ್ರೀ ಬೇಸರ
Team Udayavani, Jun 13, 2018, 6:00 AM IST
ರಾಮನಗರ: ರಾಜಕೀಯದಲ್ಲಿ ಜಾತಿ ಮುಖ್ಯ ವಾಗಬಾರದು ಎಂದು ಉಡುಪಿ ಪೇಜಾವರ ಮಠದ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಆರಂಭದಲ್ಲಿ ಇಷ್ಟು ಜಾತಿ ಲೆಕ್ಕಾಚಾರ ಗಳು ಇರಲಿಲ್ಲ. ಇಂದು ಅದು ಅತಿಯಾಗಿದೆ. ಪ್ರತಿಯೊಂದನ್ನು ಜಾತಿ ದೃಷ್ಟಿಯಿಂದ ನೋಡುವುದು ತಪ್ಪು. ಇಂದು ರಾಜಕಾರಣದಲ್ಲಿ ಜಾತಿ ಲೆಕ್ಕಾಚಾರ ಹೆಚ್ಚಾಗಿದ್ದು ಈ ಬಗ್ಗೆ ತಮಗೆ ಬೇಸರವಿದೆ ಎಂದರು.
ತಾವೆಂದೂ ಚುನಾವಣಾ ರಾಜಕೀಯಕ್ಕೆ ಮುಂದಾಗಿಲ್ಲ. ಎಲ್ಲ ಪಕ್ಷದವರು ತಮ್ಮ ಸಂಪರ್ಕದಲ್ಲಿದ್ದಾರೆ. ಧರ್ಮ, ಆಧ್ಯಾತ್ಮಿಕ ಪ್ರಚಾರ, ಸಮಾಜಸೇವೆ ಮಾಡುವುದು ತಮ್ಮ ಕೆಲಸ, ಚುನಾವಣಾ ರಾಜಕೀಯ ಮಾಡುವುದಲ್ಲ. ರಾಜಕಾರಣಿಗಳು ತಾವಾಗಿಯೇ ಕೇಳಿದರೆ ಮಾರ್ಗದರ್ಶನ, ಸಲಹೆ ನೀಡುವುದಾಗಿ ತಿಳಿಸಿದರು.
ತಾವು ಏರ್ಪಡಿಸಿದ್ದು ಇಫ್ತಾರ್ ಕೂಟವಲ್ಲ, ಸ್ನೇಹಕೂಟ ಭೋಜನ. ಈ ವರ್ಷ ಎಲ್ಲ ಅಲ್ಪಸಂಖ್ಯಾಕ ಸಮುದಾಯದವರನ್ನು ಕರೆದು ಭೋಜನ ಕೊಡುವುದಾಗಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.