ನನ್ನ ಸ್ಟಾಫ್ ಗೆ ಹಲ್ಲೆ ಮಾಡಿದ್ದಾರೆ: ಸಿಬಿಐ ಅಧಿಕಾರಿಗಳ ಮೇಲೆ ಡಿಕೆಶಿ ಗಂಭೀರ ಆರೋಪ
Team Udayavani, Oct 6, 2020, 11:15 AM IST
ಬೆಂಗಳೂರು: ಸೋಮವಾರ ನಡೆದ ದಾಳಿ ವೇಳೆ ಸಿಬಿಐ ಅಧಿಕಾರಿಗಳು ನನ್ನ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ನನ್ನ ಪಿಎ ಗೆ ಹೊಡೆದಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಇಂದು ತಮ್ಮನ್ನು ಭೇಟಿಯಾದ ನಂಜಾವಧೂತ ಸ್ವಾಮೀಜಿಗಳ ಜೊತೆ ಮಾತನಾಡುತ್ತಾ ಡಿಕೆಶಿ ಈ ಹೇಳಿಕೆಗಳನ್ನು ನೀಡಿದ್ದಾರೆ.
ಸ್ವಾಮೀಜಿಗಳ ಜೊತೆ ಮಾತನಾಡುತ್ತಾ, ಸಿಬಿಐ ದಾಳಿ ನಡೆದುದ್ದಕ್ಕೆ ನನಗೆ ಬೇಸರವಾಗಿಲ್ಲ. ಇದೆಲ್ಲವೂ ರಾಜಕೀಯ ಷಡ್ಯಂತ್ರ. ಕೆಪಿಸಿಸಿ ಅಧ್ಯಕ್ಷನಾದ ಬಳಿಕ ನಾನು ತುಂಬಾ ಸಕ್ರಿಯವಾಗಿದ್ದು, ಬಿಜೆಪಿ ನಾಯಕರ ಕಣ್ಣು ಕುಕ್ಕಿದಂತಾಗಿದೆ. ಈಗ ಉಪಚುನಾವಣೆ ಬಂದಿರುವುದರಿಂದ ಸಿಬಿಐ ದಾಳಿ ನಡೆಯುವಂತೆ ಮಾಡಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ.
ಇದನ್ನೂ ಓದಿ:ಉಪಚುನಾವಣೆ ಹೊಸ್ತಿಲಲ್ಲಿ ಸಿಬಿಐ ದಾಳಿ: ರಾಜಕೀಯ ಚದುರಂಗದಾಟದಲ್ಲಿ ಲಾಭ ಯಾರಿಗೆ?
ಮಗಳ ಮದುವೆಗಾಗಿ ಖರೀದಿಸಿಟ್ಟಿದ್ದ ಚಿನ್ನಾಭರಣಗಳನ್ನೂ ಸೀಜ್ ಮಾಡಿ ತೆಗೆದುಕೊಂಡು ಹೋಗಿರುವುದು ನನ್ನ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಎಂದು ಸ್ವಾಮೀಜಿ ಬಳಿ ದುಃಖ ತೋಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.