ಬೆಳಗಾವಿ ಕಣದಲ್ಲಿ ಏನಾಗಲಿದೆ ಸಿ.ಡಿ. ಪ್ರಕರಣ?
Team Udayavani, Mar 22, 2021, 7:15 AM IST
ಬೆಳಗಾವಿ: ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರದ್ದೆನ್ನ ಲಾದ ಸಿ.ಡಿ. ಪ್ರಕರಣ ಯಾವ ಪಾತ್ರ ವಹಿಸಲಿದೆ ಎಂಬ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ.
ಪ್ರಕರಣದಲ್ಲಿ ಜಾರಕಿಹೊಳಿ ಕುಟುಂಬದ ಹೆಸರು ಪ್ರಸ್ತಾವ ವಾಗಿರುವುದರಿಂದ ಇದನ್ನು ಅಸ್ತ್ರ ವಾಗಿಸುವುದು ಕಾಂಗ್ರೆಸ್‌ಗೆ ಸುಲಭ ವಾಗಿಲ್ಲ. ಕಾಂಗ್ರೆಸ್‌ಗೆ ಇದು ಬಹು ಉತ್ತಮ ಆಹಾರ ಎನ್ನುವಂತಿದ್ದರೂ ಸತೀಶ್ ಜಾರಕಿಹೊಳಿ ಕಾರಣದಿಂದ ಅದನ್ನು ನುಂಗುವ ಸ್ಥಿತಿಯಲ್ಲಿಲ್ಲ.
ಉಪ ಚುನಾವಣೆಯಲ್ಲಿ ಸಿ.ಡಿ. ಪ್ರಕರಣದ ಮುಜುಗರದಿಂದ ಪಾರಾಗುವುದು ಹೇಗೆಂಬ ಸವಾಲು ಬಿಜೆಪಿಗೆ ಬಂದಿದೆ. ಪ್ರಚಾರದ ಸಂದರ್ಭದಲ್ಲಿ ಯಾವುದೇ ಕಾರ ಣಕ್ಕೂ ಅದು ಪ್ರಸ್ತಾವವಾಗದಂತೆ ಮತದಾರರ ಗಮನವನ್ನು ಹೇಗೆ ಬೇರೆಡೆ ಸೆಳೆಯಬೇಕು ಎಂಬ ಬಗ್ಗೆ ಬಿಜೆಪಿ ಚಿಂತನೆ ನಡೆದಿದೆ.
ಕಾಂಗ್ರೆಸ್‌ನಲ್ಲಿ ಸತೀಶ ಜಾರಕಿ ಹೊಳಿ ಅವರು ಕೆಪಿಸಿಸಿ ಕಾರ್ಯಾ ಧ್ಯಕ್ಷರಾಗಿರುವುದು ಹಾಗೂ ಚುನಾ ವಣೆಯ ಉಸ್ತುವಾರಿ ಹೊತ್ತಿರು ವುದರಿಂದ ಪಕ್ಷದ ನಾಯಕರು ಇಕ್ಕಟ್ಟಿ ನಲ್ಲಿದ್ದಾರೆ. ಒಂದು ವೇಳೆ ಸತೀಶ್ ಜಾರಕಿಹೊಳಿಯೇ ಸ್ಪರ್ಧಿಸಿದರೆ ಸಿ.ಡಿ. ವಿವಾದ ಬಳಸುವುದರಿಂದ ಪರೋಕ್ಷವಾಗಿ ಕಾಂಗ್ರೆಸ್‌ಗೂ ಹಾನಿ ಯಾದೀತೇ ಎಂಬ ಪ್ರಶ್ನೆ ಮೂಡಿದೆ.
ಸತೀಶ್ ಜಾಣ ನಡೆ :
ಸಿ.ಡಿ. ವಿಷಯ ಬಹಿರಂಗವಾದ ಬಳಿಕ ಸತೀಶ್ ಜಾರಕಿಹೊಳಿ ಅಧಿವೇಶನದಲ್ಲಿ ಭಾಗವಹಿಸಿಲ್ಲ. ಈ ವಿಷಯ ಪಕ್ಷದೊಳಗೆ ಚರ್ಚೆಯಾಗದಂತೆ ನೋಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರೂ ಅಂತರ ಕಾಯ್ದು ಕೊಂಡಿದ್ದಾರೆ. ಹೀಗಿರು ವಾಗ ಸತೀಶ್ ಜಾರಕಿಹೊಳಿ ಅವರು ಚುನಾವಣೆಯಲ್ಲಿ ಸಿ.ಡಿ. ವಿಷಯವನ್ನು ಪ್ರಸ್ತಾ ವಿಸುವುದು ಕಷ್ಟ ಎನ್ನಲಾಗುತ್ತಿದೆ.
ಉಸ್ತುವಾರಿ ಸಮಸ್ಯೆ :
ಗಡಿ ಜಿಲ್ಲೆಯಲ್ಲಿ ಈಗ ಉಪ ಚುನಾ ವಣೆಯದ್ದೇ ಚರ್ಚೆ. ಕೊರೊನಾ ಭೀತಿ ಮತ್ತೆ ಕಾಣಿಸಿಕೊಂಡಿದ್ದರೂ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ ಎಂಬುದಕ್ಕೆ ಭರ್ಜರಿ ಸಿದ್ಧತೆಗಳೇ ಸಾಕ್ಷಿ. ಚುನಾವಣೆ ವೇಳೆ ಎಲ್ಲಕ್ಕಿಂತ ಮುಖ್ಯವಾಗಿ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿರುವುದು ಬಿಜೆಪಿ ಉಸ್ತುವಾರಿ ವಿಷಯ. ಜಿಲ್ಲೆಯ ಯಾವ ನಾಯಕರ ಹೆಗಲಿಗೆ ಈ ಹೊಣೆ ಬೀಳಲಿದೆ ಎಂಬ ಕುತೂ ಹಲವಿದೆ. ಸಿ.ಡಿ. ಪ್ರಕರಣದಲ್ಲಿ ಸಿಲುಕಿರುವ ರಮೇಶ್ ಜಾರಕಿಹೊಳಿ ಪಾತ್ರ ಏನು, ರಮೇಶ್ ಇಲ್ಲದಿದ್ದರೆ ಬಾಲಚಂದ್ರ ಜಾರಕಿಹೊಳಿ ಏನು ಮಾಡುತ್ತಾರೆಂಬ ಚರ್ಚೆ ನಡೆಯುತ್ತಿದೆ.
ಸಿ.ಡಿ. ಪ್ರಕರಣಕ್ಕೆ ಮೊದಲು ರಮೇಶ್ ಜಾರಕಿಹೊಳಿ ಅವರು, ಬೆಳಗಾವಿಯಲ್ಲಿ ಬಿಜೆಪಿ ಐದು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದು, ಅದಕ್ಕಾಗಿ ತಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎನ್ನುತ್ತಿದ್ದರು. ಈಗ ಅವರು ಬಹಿರಂಗವಾಗಿ ಕಾಣಿಸಿಕೊಳ್ಳದಿರುವುದು ಬೆಂಬಲಿ ಗರಲ್ಲಿ ನಿರಾಸೆ ಮೂಡಿಸಿದೆ.
ಮೂರು ಕ್ಷೇತ್ರಗಳ ಮೇಲೆ ಪರಿಣಾಮ? :
ಸಿ.ಡಿ. ಪ್ರಕರಣ ಮೂರು ಕ್ಷೇತ್ರಗಳ ಉಪ ಚುನಾವಣೆ ಮೇಲೂ ಪರಿಣಾಮ ಬೀರುತ್ತದೆಯೇ ಎನ್ನುವ ಚರ್ಚೆ ಆರಂಭವಾಗಿದೆ. ಅದರಲ್ಲೂ ಬೆಳಗಾವಿ ಹಾಗೂ ಮಸ್ಕಿ ಕ್ಷೇತ್ರದ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಉಸ್ತುವಾರಿಗೆ ಸವದಿ, ಕತ್ತಿ ಪೈಪೋಟಿ :
ಸಿ.ಡಿ. ಪ್ರಕರಣಕ್ಕೆ ಮುನ್ನ ಬಿಜೆಪಿ ಸಿದ್ಧಪಡಿಸಿದ್ದ ಉಪ ಚುನಾವಣೆ ಉಸ್ತುವಾರಿ ಪಟ್ಟಿಯಲ್ಲಿ ರಮೇಶ್ ಜಾರಕಿಹೊಳಿ ಹೆಸರಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಉಸ್ತುವಾರಿ ಪೈಪೋಟಿಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಉಮೇಶ್ ಕತ್ತಿ ಹಾಗೂ ಬಾಲಚಂದ್ರ ಜಾರಕಿಹೊಳಿ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
– ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Rebels Team: ಜನವರಿಯಲ್ಲಿ ಮತ್ತೆ ರೆಬಲ್ಸ್ ಬಿಜೆಪಿ ವಕ್ಫ್ ಪ್ರವಾಸ
Belagavi Congress Session: ಮಹಾ ಜನಾಂದೋಲನ: ಕಾಂಗ್ರೆಸ್ ಪಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಪ್ಸ್ ಕೊಡದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನೇ 14 ಬಾರಿ ಇರಿದ ಪಿಜ್ಜಾ ಡೆಲಿವರಿ ಮಹಿಳೆ
Bajpe: ತರಕಾರಿ ಬೀಜ ಬಿತ್ತನೆಗೆ ಹಿಂದೇಟು
Manmohan Singh: ಮನಮೋಹನ್ ಸಿಂಗ್ ಇಷ್ಟದ ಮೆನು ಯಾವುದು? ಸಸ್ಯಹಾರಿಯಾಗಿದ್ರೂ…ಆದರೆ ಒಮ್ಮೆ
Puttur ನಗರಕ್ಕೂ ಬೇಕು ಟ್ರಾಫಿಕ್ ಸಿಗ್ನಲ್
INDvAUS; ಮೆಲ್ಬೋರ್ನ್ ನಲ್ಲಿ ಆಸೀಸ್ ಬಿಗಿ ಹಿಡಿತ; ಭಾರೀ ಹಿನ್ನಡೆಯಲ್ಲಿ ಟೀಂ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.