ಸ್ಮಶಾನದೊಳಗೇ ನೆಮ್ಮದಿ ಜಾಸ್ತಿ’ : ವನಜಾ ಪೂಜಾರಿ ಮಾತು
Team Udayavani, Mar 9, 2019, 2:34 AM IST
ಸ್ಮಶಾನದೊಳಗೇ ನೆಮ್ಮದಿ ಜಾಸ್ತಿ ಇದೆ ಮಾರ್ರೆ… – ಇದು ವೀರ ಮಹಿಳೆ ವಿಭಾಗದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದಿಟಛಿ ಇಲಾಖೆ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸ್ವೀಕರಿಸಿದ ಉಡುಪಿ ಸ್ಮಶಾನ ಕಾಯುವ ವನಜಾ ಪೂಜಾರಿ ಮಾತು!
ಕಳೆದ 27 ವರ್ಷಗಳಿಂದ ಉಡುಪಿಯ ಬೀಡನಗುಡ್ಡೆ ಹಿಂದೂ ಟ್ರಸ್ಟ್‌ನ ಸ್ಮಶಾನದ ಕಾವಲುಗಾರ್ತಿಯಾಗಿರುವ ವನಜಾ,
ಈವರೆಗೂ 40 ಸಾವಿರಕ್ಕೂ ಅಧಿಕ ಶವಗಳ ದಹನ, 10 ಸಾವಿರಕ್ಕೂ ಹೆಚ್ಚು ಶವಗಳನ್ನು ಮಣ್ಣು ಮಾಡಿದ್ದಾರೆ. 27 ವರ್ಷಗಳ ಹಿಂದೆ ಪತಿ ಪೂವ ಪೂಜಾರಿ ನಿಧನರಾದ ಬಳಿಕ ಯಾರೊಬ್ಬರ ಹಂಗೂ ಬೇಡ ಎಂದು ಆತ ಮಾಡುತ್ತಿದ್ದ ಕಾಯಕವನ್ನೇ ಹೊಟ್ಟೆಪಾಡಿಗೆ ಆರಿಸಿಕೊಂಡರು. ಇಂದಿಗೂ ತನ್ನ 69ರ ಇಳಿ ವಯಸ್ಸಿನಲ್ಲಿಯೂ ನಿತ್ಯ ಬೆಳಗ್ಗೆ 7 ರಿಂದ ಸಂಜೆ 8ರವರೆಗೆ ಸ್ಮಶಾನ ಕಾಯುತ್ತಿದ್ದಾರೆ.
ಇಂದಿಗೂ ನಮ್ಮ ಸಂಸ್ಕೃತಿಯಲ್ಲಿ ಹೆಣ ಸುಡುವಾಗ ಹೆಣ್ಮಕ್ಕಳು ಸ್ಮಶಾನಕ್ಕೆ ಹೋಗುವಂತಿಲ್ಲ. ಆದರೆ, ಈ ಮಹಿಳೆ ಸ್ಮಶಾನವನ್ನೇ ಜೀವನೋಪಾಯ ಮಾಡಿಕೊಂಡಿದ್ದಾರೆ. ಈ ಹಿಂದೆ ರಾತ್ರಿ ಹಗಲು ಎನ್ನದೇ ಶವಶಂಸ್ಕಾರ ಮಾಡುತ್ತಿದ್ದರಂತೆ. ಇವರನ್ನು “ನಿಮಗೆ ಸ್ಮಶಾನದಲ್ಲಿ ಭಯವಾಗುವುದಿಲ್ಲವೇ?” ಎಂದು ಯಾರಾದರೂ ಕೇಳಿದರೆ, “ಹೊರ ಪ್ರಪಂಚಕ್ಕಿಂತ ಸ್ಮಶಾನದೊಳಗೇ ಶಾಂತಿ, ನೆಮ್ಮದಿ ಇದೆ’ ಎನ್ನುತ್ತಾರೆ.
“ಟ್ರಸ್ಟ್ ವತಿಯಿಂದ ಕೇವಲ ಮಾಸಿಕ 300 ರೂ.ಸಂಬಳ ಸಿಗುತ್ತಿದೆ. ಇದನ್ನು ಬಿಟ್ಟರೆ ಹೆಣ ತಂದವರು 100 ರೂ. ನಿಂದ 500 ರೂ ವರೆಗೂ ನೀಡುತ್ತಾರೆ. ಇದೇ ಸಂಪಾದನೆಯಿಂದಲೇ ಇಬ್ಬರು ಹೆಣ್ಣುಮಕ್ಕಳ ಮದುವೆ ಮಾಡಿಸಿದ್ದೇನೆ, ಮಗನನ್ನು ಓದಿಸಿ,ಆತ ಈಗ ಸ್ವಯಂ ಉದ್ಯೋಗದಲ್ಲಿದ್ದಾನೆ. ಅವರೆಲ್ಲ ಇಂದು “ಸಾಕು ಈ ಕೆಲಸ ಬಿಟ್ಟು ಮನೆಯಲ್ಲಿ ಆರಾಮವಾಗಿ ಇರಿ, ಎನ್ನುತ್ತಿದ್ದಾರೆ. ಆದರೆ, ನನ್ನ ಕೈಕಾಲು ಗಟ್ಟಿ ಇರೋವರೆಗೂ ನಾನು ಇಲ್ಲಿಯೇ ದುಡಿಯುತ್ತೇನೆ,’ ಎನ್ನುವ ವನಜಾ ಅವರು ಸರ್ಕಾರ ನಮಗೆ ಈಗಲಾದರೂ ಗುರುತಿಸಿಇಂತಿಷ್ಟು ಮಾಸಿಕ ಸಹಾಯ ಧನ ನೀಡುಬಹುದು ಎಂಬ ನಿರೀಕ್ಷೆ ಹೊಂದಿದ್ದಾರೆ.
ಮಲತಾಯಿಯೊಂದಿಗೆ ಬಾಲ್ಯ ಕಳೆದೆ, ಆನಂತರ ಮದುವೆಯಾಗಿ ಒಂದಿಷ್ಟು ಕಾಲ ಪತಿ ಜತೆಯಿದ್ದೆ. ಬಳಿಕ ಮಕ್ಕಳನ್ನು ಸಾಕುವ ಹೊಣೆಹೊತ್ತು ಪತಿಗೆ ಕೊಟ್ಟ ಮಾತಿನಂತೆ ಇಂದಿಗೂ ಸ್ಮಶಾನ ಕಾಯುತ್ತಿದ್ದೇನೆ. ಕೈಕಾಲು ಗಟ್ಟಿ ಇರೋವರೆಗೂ ಈ ಕಾಯಕ ನಿಲ್ಲಿಸುವುದಿಲ್ಲ.
● ವನಜಾ ಪೂಜಾರಿ, ಸ್ಮಶಾನ ಕಾವಲುಗಾರ್ತಿ
ಮಕ್ಕಳ ಸೇವೆಯಲ್ಲಿ ಮೈಸೂರಿನ ಸೌಮ್ಯ
ತಂದೆ ತಾಯಿಗಳಿಗೆ ಬೇಡವಾದ ಬುದ್ಧಿಮಾಂದ್ಯ ಮಕ್ಕಳು ಸಮಾಜದ ಕೆಟ್ಟಕೆಲಸಗಳಿಗೆ ಬಳಕೆಯಾಗಬಾರದೆಂಬ ಉದ್ದೇಶದಿಂದ ಕಳೆದ 10 ವರ್ಷಗಳಿಂದ 500ಕ್ಕೂ ಹೆಚ್ಚು ಬುದಿಟಛಿಮಾಂದ್ಯ ಮಕ್ಕಳ ಸೇವೆ ಮಾಡುತ್ತಿರುವ “ಕರುಣಾಮಯಿ ಫೌಂಡೇಶನ್” ಕಾರ್ಯದರ್ಶಿ ಸೌಮ್ಯ ಈ ಬಾರಿಯ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಇವರ ಪತಿ 10 ವರ್ಷಗಳ ಹಿಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆನಂತರ ಸಮಾಜ ಸೇವೆಯಲ್ಲಿಯೇ ದಿನಗಳನ್ನು ಕಳೆಯಲು ನಿರ್ಧರಿಸಿದ ಇವರು, 2010ರಲ್ಲಿ ಕರುಣಾಮಯಿ ಫೌಂಡೇಶನ್ ಸ್ಥಾಪಿಸಿ ಬುದಿಟಛಿಮಾಂದ್ಯ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮಕ್ಕಳಿಗೆ ಚಿಕಿತ್ಸೆ, ಶಿಕ್ಷಣದ ಜತೆಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುತ್ತಿದ್ದಾರೆ. ದಾನಿಗಳ ಸಹಾಯದಿಂದ ಬುದ್ಧಿಮಾಂದ್ಯ ಮಕ್ಕಳ ಆಶ್ರಮ ಹಾಗೂ ಕೌಶಲ್ಯಾಭಿವೃದ್ಧಿ ಕೇಂದ್ರ ಕಟ್ಟಿಸಬೇಕೆಂಬ ಆಸೆ ಹೊಂದಿದ್ದೇನೆ.
● ಸೌಮ್ಯ, ಸಮಾಜ ಸೇವಕಿ
ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
Derogatory Term: ರಾಜಭವನ ಅಂಗಳಕ್ಕೆ ತಲುಪಿದ ಲಕ್ಷ್ಮೀ ಹೆಬ್ಬಾಳ್ಕರ್- ಸಿ.ಟಿ.ರವಿ ವಾಗ್ವಾದ
Session: ಹೊಸ ವರ್ಷಕ್ಕೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ “ಕೈ’ ಹಾಕಲಿದೆಯೇ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.