ಶಾಲಾ ಶಿಕ್ಷಣದ ಸುಧಾರಣೆಗೆ ಒತ್ತು ನೀಡಿದ ಕೇಂದ್ರ ಬಜೆಟ್: ಸುರೇಶ್ ಕುಮಾರ್
Team Udayavani, Feb 1, 2021, 6:35 PM IST
ಬೆಂಗಳೂರು: ಕೇಂದ್ರದ ಆಯವ್ಯಯವನ್ನು ಸ್ವಾಗತಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಈ ಆಯವ್ಯಯ ಶೈಕ್ಷಣಿಕ ಕ್ಷೇತ್ರದ ಸಮಗ್ರ ಸುಧಾರಣೆಯ ಹೆಚ್ಚಿನ ಒಲವುಳ್ಳದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಿರುವ ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಯವ್ಯಯದಲ್ಲಿ ಅಳವಡಿಕೆ ಮಾಡಿರುವ ಅಂಶಗಳು 39 ವರ್ಷಗಳ ನಂತರ ಜಾರಿ ಮಾಡಲಾಗುತ್ತಿರುವ ನೂತನ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆಗೆ ಒಲವು ನೀಡಿದೆ ಎಂದು ಹೇಳಿದ್ದಾರೆ.
ಶಿಕ್ಷಣ ಇಲಾಖೆಗೆ 93,224.31 ಕೋಟಿ ರೂ.ಗಳ ಅನುದಾನ ಒದಗಿಸಿರುವ ಬಜೆಟ್ ನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆಗೆ 54,873.66 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ನ್ಯಾಷನಲ್ ಪ್ರೊಫೆಷನಲ್ ಸ್ಟ್ಯಾಂಡರ್ಡ್ಸ್ ಫಾರ್ ಟೀಚರ್ಸ್-ಎನ್.ಪಿ.ಎಸ್.ಟಿ ಅಡಿಯಲ್ಲಿ ಶಿಕ್ಷಕರ ಗುಣಮಟ್ಟ ಹೆಚ್ಚಳಕ್ಕೆ ಒತ್ತು ನೀಡಲಾಗಿದ್ದು, ದೇಶದ 92 ಲಕ್ಷ ಸರ್ಕಾರಿ ಹಾಗೂ ಖಾಸಗಿ ಶಾಲಾ ಶಿಕ್ಷಕರು ಇದರ ಉಪಯೋಗ ಪಡೆಯಲಿರುವುದರಿಂದ ಪರೋಕ್ಷವಾಗಿ ಅದರ ಪ್ರಯೋಜನ ನಮ್ಮ ಮಕ್ಕಳಿಗೆ ದೊರೆಯಲಿದೆ. ಸ್ಥಳೀಯವಾಗಿ ಲಭ್ಯವಾಗಬಹುದಾದ ಆಟಿಕೆಗಳ ಮೂಲಕ ಬೋಧನೆಯನ್ನು ಎಲ್ಲ ಮಟ್ಟದ ಶಾಲಾ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಅನುವಾಗುವಂತೆ ಶಿಕ್ಷಣದ ರೂಪುರೇಷೆ ಅಭಿವೃದ್ಧಿಗೆ ಒತ್ತು ನೀಡಲಾಗಿರುವುದು ಬಜೆಟ್ ವಿಶೇಷವಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪಶುಪಾಲನೆಗೆ ಬಜೆಟ್ ನಲ್ಲಿ ಉತ್ತೇಜನ ನೀಡಲಾಗಿದೆ: ಸಚಿವ ಪ್ರಭು ಚವ್ಹಾಣ್
ಡಿಜಿಟಲ್ ಮೂಲಸೌಲಭ್ಯ ಒದಗಿಸುವ ಸಲುವಾಗಿ ನ್ಯಾಷನಲ್ ಡಿಜಿಟಲ್ ಎಜುಕೇಷನಲ್ ಆರ್ಕಿಟೆಕ್ಚರ್- ಎನ್.ಡಿ.ಇ.ಎ.ಆರ್. ಸೌಲಭ್ಯದ ಮೂಲಕ ಶಿಕ್ಷಣ ನಿರೂಪಣೆ, ಪಾಠ ಪ್ರವಚನ ಮತ್ತು ಮಕ್ಕಳ ಕಲಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಶ್ರವಣ ದೋಷವುಳ್ಳ ಮಕ್ಕಳ ಅನುಕೂಲಕ್ಕಾಗಿ ಇಂಡಿಯನ್ ಸೈನ್ ಲಾಂಗ್ವೇಜ್ ನ್ನು ದೇಶಾದ್ಯಂತ ಏಕರೂಪದಲ್ಲಿ ಪ್ರಾಮಾಣೀಕರಗೊಳಿಸಲು ಒಲವು ನೀಡಲಾಗಿದೆ. ಹಾಗೆಯೇ ಶಾಲಾ ಶಿಕ್ಷಣದಲ್ಲಿ ವಿಷಯಗಳ ಕುರಿತು ನಿರಂತರ ಆಫ್ ಲೈನ್/ಆನ್ ಲೈನ್ ವ್ಯವಸ್ಥೆಯಲ್ಲಿ ಹಿರಿಯ ಹಾಗೂ ನಿವೃತ್ತ ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. 2021-22ನೇ ಸಾಲಿನಲ್ಲಿ 56 ಲಕ್ಷ ಶಾಲಾ ಶಿಕ್ಷಕರಿಗೆ ನ್ಯಾಷನಲ್ ಇನಿಷಿಯೇಟಿವ್ ಫಾರ್ ಸ್ಕೂಲ್ ಹೆಡ್ಸ್ ಅಂಡ್ ಟೀಚರ್ಸ್ ಫಾರ್ ಹೊಲಿಸ್ಟಿಕ್ ಅಡ್ವಾನ್ಸ್ಮೆಂಟ್–ಎನ್.ಐ.ಎಸ್.ಟಿ.ಹೆಚ್.ಎ. ತರಬೇತಿ ನೀಡುವುದು, ಪರೀಕ್ಷಾ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪ್ರಸ್ತುತ ಜಾರಿಯಲ್ಲಿದ್ದ ಸಂಖ್ಯೆ ಬಿಂಬಿಸುವ ಅಂಕಪಟ್ಟಿಯನ್ನು ಬದಲಾಯಿಸಿ ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಪ್ರತಿಬಿಂಬಿಸುವ ಸಮಗ್ರ ಪ್ರಗತಿಪತ್ರ ನೀಡಲು ಅವಕಾಶ ಕಲ್ಪಿಸಿರುವುದು ಈ ಬಾರಿಯ ಬಜೆಟ್ ನ ವಿಶೇಷವಾಗಿದೆ ಎಂದು ಸಚಿವರು ಹೇಳಿದ್ದಾರೆ.
ಕಳೆದ ನಾಲ್ಕು ದಶಕಗಳ ಶಿಕ್ಷಣ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಮೂಲಕ ಪ್ರಗತಿ ಧ್ಯೋತಕ ಶಿಕ್ಷಣಕ್ಕೆ ಒತ್ತು ನೀಡುವ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಒಂದು ಕ್ರಾಂತಿಕಾರಕ ಬದಲಾವಣೆಗೆ ನಾಂದಿ ಹಾಡಲಿದ್ದು, ಒಟ್ಟಾರೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರಿನ ಹೋಟೆಲ್ ನಲ್ಲಿ ಯುವತಿಯ ಮೇಲೆ ದಾಳಿ ಪ್ರಕರಣ: ಪ್ರೇಮ ವೈಫಲ್ಯವೇ ಕಾರಣ, ಮೂವರ ಬಂಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
B. S. Yediyurappa ವಿರುದ್ಧ ಎಫ್ಐಆರ್‌ಗೆ ಸಚಿವರ ಒತ್ತಡ
BJP ಸರಕಾರ ಕಾಲದ ಕೋವಿಡ್, ಗಣಿ ತನಿಖೆಗೆ ಎಸ್‌ಐಟಿ: ಸಚಿವ ಸಂಪುಟ ನಿರ್ಧಾರ
Karnataka; 7 ವೈದ್ಯಕೀಯ ಕಾಲೇಜುಗಳಲ್ಲಿ ಕ್ರಿಟಿಕಲ್ ಕೇರ್ ವಿಭಾಗ ಆರಂಭ
Bandh; ನ. 20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.