ಸಿಇಟಿ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟ: 12 ಸಾವಿರ ಸೀಟು ಕಡಿತ
Team Udayavani, Sep 15, 2022, 6:25 AM IST
ಬೆಂಗಳೂರು: ರಾಜ್ಯದಲ್ಲಿರುವ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಲಭ್ಯವಿರುವ ಸೀಟುಗಳ ಆಧಾರದಲ್ಲಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ (ವಾಸ್ತುಶಿಲ್ಪ)ಕೋರ್ಸ್‌ಗಳ ಕರಡು ಸೀಟ್ ಮಾಟ್ರಿಕ್ಸ್ ಅನ್ನು ಉನ್ನತ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಆ ಪ್ರಕಾರ ಕಳೆದ ವರ್ಷಕ್ಕಿಂತ ಅಂದಾಜು 12 ಸಾವಿರ ಸರಕಾರಿ ಸೀಟು ಕಡಿಮೆಯಾಗಿದೆ.
ಕಳೆದ ವರ್ಷ ಸುಮಾರು 65 ಸಾವಿರ ಎಂಜಿನಿಯರಿಂಗ್ ಸೀಟುಗಳು ಲಭ್ಯವಾಗಿದ್ದವು. ಈ ಪೈಕಿ 33 ಸಾವಿರ ಸೀಟುಗಳು ಭರ್ತಿಯಾಗಿದ್ದು, 32 ಸಾವಿರ ಸೀಟುಗಳು ಉಳಿಕೆಯಾಗಿದ್ದವು. ಈ ವರ್ಷ ಸದ್ಯ ಕರಡು ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಕಟಿಸಿದ್ದು, ಒಟ್ಟಾರೆ 1,11,322 ಸೀಟುಗಳು ಲಭ್ಯವಾಗಿದ್ದು, ಈ ಪೈಕಿ 53,108 ಸರಕಾರಿ ಸೀಟುಗಳು ಲಭ್ಯವಾಗಲಿವೆ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಎಐಸಿಟಿಇ ಮತ್ತು ಕೌನ್ಸಿಲ್ ಆಫ್ ಆರ್ಕಿಟೆಕ್ಟರ್ ಕ್ರಮವಾಗಿ ಎಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸ್‌ಗಳಿಗೆ ನೀಡಿರುವ ಅನುಮೋದಿತ ಇನ್‌ಟೇಕ್‌ನಂತೆ ರಾಜ್ಯದಲ್ಲಿರುವ ವೃತ್ತಿಪರ ಸಂಸ್ಥೆಗಳಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಕೈಗೊಳ್ಳಬೇಕಿದೆ. ಅದರನ್ವಯ ಕರಡು ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಕಟಿಸಲಾಗಿದೆ.
ಸರಕಾರಿ, ಅನುದಾನಿತ, ಖಾಸಗಿ ಕಾಲೇಜು, ಖಾಸಗಿ ಅನುದಾನಿತ ಅಲ್ಪಸಂಖ್ಯಾಕ ಕಾಲೇಜುಗಳು, ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಲಭ್ಯವಿರುವ ಸರಕಾರಿ ಕೋಟಾ, ಖಾಸಗಿ ಕೋಟಾ ಮತ್ತು ಮ್ಯಾನೇಜ್‌ಮೆಂಟ್ ಸೀಟುಗಳ ವಿವರಗಳನ್ನು ಸಲ್ಲಿಸಿದೆ.
ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಇದರಲ್ಲಿ ಯಾವುದಾದರೂ ಲೋಪದೋಷಗಳಿದ್ದಲ್ಲಿ ಸಾರ್ವಜನಿಕರು ಮತ್ತು ಶಿಕ್ಷಣ ಸಂಸ್ಥೆಗಳು 5 ದಿನಗಳೊಳಗೆ [email protected] , [email protected] , [email protected]ಗೆ ಸಲ್ಲಿಸಬಹುದು ಎಂದು ಉನ್ನತ ಶಿಕ್ಷಣ ಇಲಾಖೆ ಉಪ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.
ಎಂಜಿನಿಯರಿಂಗ್ ಸೀಟುಗಳು
ವಿಭಾಗ ಒಟ್ಟಾರೆ ಸೀಟು ಸರಕಾರಿ ಸೀಟು
ಸರಕಾರಿ ಕಾಲೇಜು 5,140 5,140
ಅನುದಾನಿತ ಕಾಲೇಜು 3,200 3,040
ಖಾಸಗಿ ಕಾಲೇಜು 74,872 33,707
ಅಲ್ಪಸಂಖ್ಯಾಕ 8,910 3,564
ಖಾಸಗಿ ಅನುದಾನ ರಹಿತ 17,160 7,03
ಡೀಮ್ಡ್ ವಿಶ್ವವಿದ್ಯಾನಿಲಯ 2,040 627
ಒಟ್ಟು 1,11,322 53,108
ವಾಸ್ತುಶಿಲ್ಪ
ವಿಭಾಗ ಒಟ್ಟಾರೆ ಸೀಟು ಸರಕಾರಿ ಸೀಟು
ಸರಕಾರಿ ಕಾಲೇಜು 38 38
ಖಾಸಗಿ 1890 851
ಖಾಸಗಿ ವಿಶ್ವವಿದ್ಯಾನಿಲಯ 300 126
ಒಟ್ಟಾರೆ 2,228 1,015
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.