ಸಿಇಟಿ ಗೊಂದಲಕ್ಕೆ ತೆರೆ; ಪುನರಾವರ್ತಿತ ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸಿಹಿ
ಸಿಇಟಿ ಜತೆಗೆ ದ್ವಿತೀಯ ಪಿಯುಸಿ ಅಂಕಗಳ ಪರಿಗಣನೆಗೆ ಸೂಚನೆ; ತೀರ್ಪು ಅಧ್ಯಯನ ಮಾಡಿ ಮುಂದಿನ ಕ್ರಮಕ್ಕೆ ಸರಕಾರ ನಿರ್ಧಾರ
Team Udayavani, Sep 4, 2022, 7:00 AM IST
ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಗೊಂದಲಕ್ಕೆ ತೆರೆ ಎಳೆದಿರುವ ಹೈಕೋರ್ಟ್, 2022ನೇ ಸಾಲಿನ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ದಿಂದ ಅವಕಾಶ ವಂಚಿತರಾಗುವ ಆತಂಕದಲ್ಲಿದ್ದ 2020-21ನೇ ಸಾಲಿನ ದ್ವಿತೀಯ ಪಿಯು ಪುನರಾವರ್ತಿತ ವಿದ್ಯಾರ್ಥಿಗಳ ಪರ ತೀರ್ಪು ನೀಡಿದೆ.
2020-21ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ವೃತ್ತಿಪರ ಕೋರ್ಸ್‌ಗಳ ಕೋರ್ಸ್‌ಗಳ ಪ್ರವೇಶಕ್ಕೆ ಪರಿಗಣಿಸಲಾಗದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2022 ಜು. 30ರಂದು ಹೊರ ಡಿಸಿದ್ದ ಟಿಪ್ಪಣಿಯನ್ನು ಹೈಕೋರ್ಟ್ ರದ್ದು ಮಾಡಿದೆ. ಇದರಿಂದ ಕೋವಿಡ್-19 ಕಾರಣದಿಂದ ಪರೀಕ್ಷೆ ಬರೆ
ಯದೆ “ಆಂತರಿಕ ಮೌಲ್ಯಮಾಪನದ’ ಆಧಾರದಲ್ಲಿ 2021ನೇ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯು ಉತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಗೆ ಅನುಕೂಲವಾದಂತಾಗಿದೆ.
ಕೆಇಎ ಕ್ರಮ ಪ್ರಶ್ನಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಲ್ಲಿಸಿದ್ದ ಪ್ರತ್ಯೇಕ ತಕರಾರು ಅರ್ಜಿಗಳ ಸಂಬಂಧ ಶನಿವಾರ ನ್ಯಾ| ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತೀರ್ಪು ನೀಡಿದೆ. ಜತೆಗೆ 2020-21ನೇ ಸಾಲಿನಲ್ಲಿ ಪಿಯುಸಿ ತೇರ್ಗಡೆಯಾದವರು ಗಳಿಸಿದ ಶೇ.50 ಅಂಕ ಮತ್ತು ಸಿಇಟಿಯ ಶೇ.50 ಅಂಕಗಳನ್ನು ಪರಿಗಣಿಸಿ ಹೊಸದಾಗಿ ರ್‍ಯಾಂಕ್ ಪಟ್ಟಿ ಪ್ರಕಟಿಸಬೇಕು ಎಂದು ಸರಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕೆಇಎ ನೀತಿ ತಾರತಮ್ಯ ಮತ್ತು ಕಾನೂನುಬಾಹಿರವಾಗಿದೆ. ಹಾಗಾಗಿ, 2020-21, 2021-22ನೇ ಸಾಲಿನ ಪಿಯು ಪರೀಕ್ಷೆಯಲ್ಲಿ ಅರ್ಜಿದಾರ ವಿದ್ಯಾರ್ಥಿಗಳು ಪಡೆದ ಅಂಕಗಳಲ್ಲಿ ಶೇ.50 ಅಂಕ ಮತ್ತು ಸಿಇಟಿಯಲ್ಲಿ ಪಡೆದಿರುವ ಶೇ.50 ಅಂಕ ಆಧರಿಸಿ ರ್‍ಯಾಂಕ್ ಪ್ರಕಟಿಸಲು ಕೆಇಎಗೆ ನಿರ್ದೇಶಿಸಬೇಕು ಎಂದು ಕೋರಿದ್ದರು.
25:75 ಸೂತ್ರ ನಿರಾಕರಣೆ
2020-21ನೇ ಸಾಲಿನ ಪಿಯು ಪರೀಕ್ಷೆಯ ಶೇ.50 ಅಂಕಗಳನ್ನು ಪರಿಗಣಿಸಲು ಸರಕಾರಕ್ಕೆ ನಿರ್ದೇ ಶಿಸುವಂತೆ ಅರ್ಜಿದಾರರು ಕೋರಿ ದ್ದಾರೆ. ಮತ್ತೂಂದೆಡೆ ಕೋವಿಡ್ ಹಿನ್ನೆಲೆ ಯಲ್ಲಿ 2021ನೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಉತ್ತೀರ್ಣ ಆಗಿರುವುದರಿಂದ ಅವರ ಮನವಿ ಪರಿಗಣಿಸುವುದಿಲ್ಲ ಎಂಬು ದಾಗಿ ಸರಕಾರ ಹೇಳುತ್ತಿದೆ. ಹಾಗಾಗಿ, ಸಿಇಟಿಯ ಶೇ.75 ಅಂಕ ಮತ್ತು ಪಿಯು ಪರೀಕ್ಷೆಯ ಶೇ.25ರಷ್ಟು ಅಂಕ ಪರಿಗಣಿಸಿ ರ್‍ಯಾಂಕ್ ಲಿಸ್ಟ್ ಪ್ರಕಟಿಸಲು ಸಾಧ್ಯವೇ ಎಂದು ಹೈಕೋರ್ಟ್ ಸರಕಾರವನ್ನು ಕೇಳಿತ್ತು. ಇದಕ್ಕೆ ಸರಕಾರ ಒಪ್ಪಿರಲಿಲ್ಲ.
ಹೈಕೋರ್ಟ್ ಹೇಳಿದ್ದು
01.ಕಳೆದ ಸಾಲಿನ ಪಿಯು ಅಂಕಗಳನ್ನು ಬೇರೆ ಪದವಿ ಕೋರ್ಸ್‌ಗಳಿಗೆ ಪರಿಗಣಿಸಿ, ಕೇವಲ ತಾಂತ್ರಿಕ ಕೋರ್ಸ್‌ಗಳಿಗೆ ಪರಿಗಣಿಸದೇ ಇರುವುದು ತಾರತಮ್ಯ.
02.ಸಿಇಟಿ ರ್‍ಯಾಂಕಿಂಗ್ ಪ್ರಕಟವಾದ ದಿನವೇ 2021ನೇ ಸಾಲಿನ ಪಿಯು ಅಂಕಗಳನ್ನು ಪರಿಗಣಿಸದಿರುವ ಬಗ್ಗೆ ಕೆಇಎ ಟಿಪ್ಪಣಿ ಹೊರಡಿಸಿದೆ. ಆಯ್ಕೆ ಪ್ರಕ್ರಿಯೆ ಆರಂಭಗೊಂಡು ಅದು ಮುಗಿಯುವ ಹಂತದಲ್ಲಿರುವಾಗ ಈ ರೀತಿ ಅರ್ಹತ ಮಾನದಂಡಗಳನ್ನು ಬದಲಿಸಲು ಸಾಧ್ಯವಿಲ್ಲ. 2022ರ ಎ. 18ರಿಂದ ಸಿಇಟಿ ಪ್ರಕ್ರಿಯೆ ಆರಂಭಗೊಂಡಿದ್ದು, ಜು. 30ರಂದು ಮುಕ್ತಾಯ ಹಂತದಲ್ಲಿರುವಾಗ ಕೆಇಎ ಆದೇಶ ಹೊರಡಿಸಿದೆ. ಇದು ಕಾನೂನುಬಾಹಿರ ಕ್ರಮ.
03.2022ನೇ ಸಾಲಿನ ಸಿಇಟಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಹಾಗೂ ಕೆಇಎ ಹೊರಡಿಸಿರುವ ಬುಲೆಟಿನ್‌ನಲ್ಲಿ ಅರ್ಹತೆ, ವಿದ್ಯಾರ್ಹತೆ, ಮೆರಿಟ್ ಮತ್ತಿತರ ಅಂಶಗಳನ್ನು ಉಲ್ಲೇಖಿಸಲಾಗಿದ್ದು, ದ್ವಿತೀಯ ಪಿಯುಸಿ ಹಾಗೂ ಸಿಇಟಿ ಎರಡೂ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನು ಸಮಾನ ಪ್ರಮಾಣದಲ್ಲಿ ಪರಿಗಣಿಸುವ ಬಗ್ಗೆ ಹೇಳಲಾಗಿದೆಯೇ ಹೊರತು, 2021ನೇ ಸಾಲಿನ ಅಂಕಗಳನ್ನು ಪರಿಗಣಿಸದಿರುವ ಬಗ್ಗೆ ಎಲ್ಲಿಯೂ ಸ್ಪಷ್ಟವಾಗಿ ಹಾಗೂ ಸೂಚ್ಯವಾಗಿ ತಿಳಿಸಿಲ್ಲ.
042021ರಲ್ಲಿ ಪಿಯು ಪರೀಕ್ಷೆ ಬರೆದ ವಿದ್ಯಾರ್ಥಿ ಗಳಿಗೆ ಅವರ ಪಿಯು ಅಂಕಗಳನ್ನು 2022ನೇ ಸಾಲಿನ ಸಿಇಟಿ ರ್‍ಯಾಂಕ್‌ಗೆ ಪರಿಗಣಿಸಲಾಗುವುದಿಲ್ಲ ಎಂದು ಕೆಇಎ ಮೊದಲೇ ಮಾಹಿತಿ ನೀಡಿಲ್ಲ. 2022ರ ಜು.30ರಂದು ಟಿಪ್ಪಣಿ ಹೊರಡಿಸುವವರೆಗೂ ವಿದ್ಯಾರ್ಥಿಗಳಿಗೆ ಆ ಬಗ್ಗೆ ಯಾವುದೇ ಮಾಹಿತಿಯೇ ಇರಲಿಲ್ಲ. ಪರೀûಾ ಪ್ರಾಧಿಕಾರದ ಈ ಕ್ರಮ ಅರ್ಜಿದಾರರು ಹಾಗೂ ಇತರ ಪುನರಾವರ್ತಿತ ವಿದ್ಯಾರ್ಥಿಗಳನ್ನು ಅವಕಾಶವಂಚಿತರನ್ನಾಗಿಸುತ್ತದೆ.
ಲಾಭವೇನು?
-ಪುನರಾವರ್ತಿತ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಶೇ.50ರಷ್ಟು ಅಂಕ ಗಳನ್ನು ಪರಿಗಣಿಸುವಂತೆ ತೀರ್ಪು ನೀಡಿ ರುವುದರಿಂದ ರ್‍ಯಾಂಕ್ ಪಟ್ಟಿಯಲ್ಲಿ ಹಿಂದಿದ್ದ ವಿದ್ಯಾರ್ಥಿಗಳಿಗೆ ಅನುಕೂಲ
– ಪುನರಾವರ್ತಿತ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸ್‌ನಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ
– ಸರಕಾರದ ಎಡವಟ್ಟಿನಿಂದ ನೊಂದಿದ್ದ ವಿದ್ಯಾರ್ಥಿಗಳನ್ನು ನ್ಯಾಯಾಲಯದ ತೀರ್ಪು ಅತಂತ್ರ ಪರಿಸ್ಥಿತಿಯಿಂದ ಪಾರು ಮಾಡಿದೆ
ನಷ್ಟವೇನು?
– ಈ ವರ್ಷ ಸಿಇಟಿ ಬರೆದಿರುವ ವಿದ್ಯಾರ್ಥಿಗಳು ರ್‍ಯಾಂಕ್ ಪಟ್ಟಿಯಲ್ಲಿ ಹಿಂದುಳಿಯಬಹುದು
– ಮೊದಲ ಸುತ್ತಿನಲ್ಲಿಯೇ ಸೀಟು ಸಿಗಲಿದೆ ಎಂದು ಖುಷಿಯಲ್ಲಿದ್ದವರು 2ನೇ ಸುತ್ತಿನಲ್ಲಿ ಅಥವಾ 3ನೇ ಸುತ್ತಿನವರೆಗೂ ಸೀಟಿಗಾಗಿ ಕಾಯಬೇಕಾಗಬಹುದು ಅಥವಾ ಸೀಟು ಸಿಗದಿರಬಹುದು
-ರ್‍ಯಾಂಕ್ ಪಟ್ಟಿ ಪ್ರಕಟಿಸುವುದುಸೇರಿದಂತೆ ಪ್ರಕ್ರಿಯೆಯನ್ನು ಕೆಇಎ ಮತ್ತೆ ಹೊಸದಾಗಿ ನಡೆಸಬೇಕಾಗುತ್ತದೆ. ಇದು ಕೆಇಎ ದೊಡ್ಡ ಹೊಡೆತ
-ಪ್ರಕ್ರಿಯೆ ನಡೆಸಲು ಸಾಕಷ್ಟುಸಮಯದ ಆವಶ್ಯಕತೆ ಇರುವುದರಿಂದ ಖಾಸಗಿ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಬೋಧನ ತರಗತಿಗಳು ತಪ್ಪಲಿವೆ.
ಸರಕಾರದ ಎಡವ ಟ್ಟನ್ನು ಪ್ರಶ್ನಿಸುವ ಜತೆಗೆ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿರುವುದರಿಂದ ನ್ಯಾಯಾಲಯದ ಮೇಲಿನ ನಂಬಿಕೆ ಹೆಚ್ಚಿದೆ. ಸಾವಿರಾರು ವಿದ್ಯಾರ್ಥಿಗಳಲ್ಲಿ ಆಶಾಭಾವನೆ ಮೂಡಿಸಿದೆ.
-ಅರವಿಂದ, ಪುನರಾವರ್ತಿತ ಅಭ್ಯರ್ಥಿ
ನ್ಯಾಯಾಲಯದ ತೀರ್ಪಿನಿಂದ ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ತಬ್ಬಿಬ್ಟಾಗಿದ್ದಾರೆ. ರ್‍ಯಾಂಕ್ ಪಟ್ಟಿಯಲ್ಲಿ ಹಿಂದುಳಿಯುವ ಜತೆಗೆ ಇಚ್ಛಿ ಸುವ ಕಾಲೇಜಿನಲ್ಲಿ ಸೀಟು ಕೈ ತಪ್ಪುವ ಆತಂಕ ಮೂಡಿದೆ.
– ಮನೋಜ್,
ಸಿಇಟಿ ರ್‍ಯಾಂಕ್ ಅಭ್ಯರ್ಥಿ
ನ್ಯಾಯಾಲಯದ ಏನೆಂದು ತೀರ್ಪು ನೀಡಿದೆ ಎಂದು ಸಂಪೂರ್ಣವಾಗಿ ತಿಳಿದುಬಂದಿಲ್ಲ. ಸವಿವರ
ವಾಗಿ ತಿಳಿದ ಅನಂತರಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.
– ಡಾ| ಸಿ.ಎನ್.ಅಶ್ವತ್ಥ ನಾರಾಯಣ,ಉನ್ನತ ಶಿಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
MUST WATCH
ಹೊಸ ಸೇರ್ಪಡೆ
Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.