Bengaluru ವಿವಿಧ ಕ್ಷೇತ್ರಗಳ 25 ಸಾಧಕರಿಗೆ ರಾಜ್ಯಪಾಲ ಗೆಹ್ಲೋಟ್ ಅವರಿಂದ ಆತ್ಮೀಯ ಗೌರವ
"ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ' ಪ್ರಶಸ್ತಿ ಪ್ರದಾನ
Team Udayavani, Nov 8, 2023, 8:57 PM IST
ಬೆಂಗಳೂರು: ರಾಜ್ಯಕ್ಕೆ ಒಂದಿಲ್ಲೊಂದು ರೀತಿಯಲ್ಲಿ ಕೊಡುಗೆ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಂಸದ ತೇಜಸ್ವಿ ಸೂರ್ಯ, ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾದ್ ಸೇರಿದಂತೆ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ಭಾರತೀಯ ಆರ್ಥಿಕತೆಯ ಸಂವಾದ ವೇದಿಕೆ (ಇಂಟರ್‌ಆ್ಯಕ್ಟಿವ್ ಫೋರಂ ಆನ್ ಇಂಡಿಯನ್ ಎಕಾನಮಿ ಐಎಫ್ಐಇ) ಮಂಗಳವಾರ “ಚಾಂಪಿಯನ್ಸ್ ಆಫ್ ಚೇಂಜ್ ಕರ್ನಾಟಕ’ ಪ್ರಶಸ್ತಿ ನೀಡಿ ಗೌರವಿಸಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಈ ಅಪರೂಪದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೊಡುಗೆ ನೀಡಿದ ಮಹನೀಯರ ಸಮ್ಮಿಲನಕ್ಕೆ ವೇದಿಕೆಯಾಗಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಸಾಧಕರನ್ನು ಆತ್ಮೀಯವಾಗಿ ಗೌರವಿಸಿದರು.
ನಂತರ ಮಾತನಾಡಿದ ರಾಜ್ಯಪಾಲರು, “ಸಮಾಜದಲ್ಲಿ ಮಹತ್ವದ ಬದಲಾವಣೆ ತರುವಲ್ಲಿ ಯಶಸ್ವಿಯಾದ ಕರ್ನಾಟಕದ ಮಹಾನ್ ವ್ಯಕ್ತಿಗಳನ್ನು ಗೌರವಿಸುವ ಅವಕಾಶ ನನಗೆ ಸಿಕ್ಕಿದೆ. ಇದು ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದೆ. ಈ ಸಾಧಕರ ಸಾಧನೆ ಇಷ್ಟಕ್ಕೇ ನಿಲ್ಲಬಾರದು. ಬದಲಾವಣೆ ಪ್ರಕೃತಿಯ ನಿಯಮ. ತಮ್ಮ ಪ್ರಯತ್ನದ ಮೂಲಕ ಸಮಾಜ, ಸಾರ್ವಜನಿಕ ಹಿತಾಸಕ್ತಿಯಿಂದ ಮಾಡುತ್ತಿರುವ ಕೆಲಸ ಮುಂದುವರಿಯಬೇಕು. ಆ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ಸಂತಸ ವ್ಯಕ್ತಪಡಿಸಿದರು.
ದೇಶದಲ್ಲಿ ಅನೇಕ ಮಹಾನ್ ವ್ಯಕ್ತಿಗಳು ತಮ್ಮ ಸಂಪತ್ತು ಮತ್ತು ವೈಭವವನ್ನು ತ್ಯಾಗ ಮಾಡಿದ್ದಾರೆ. ದೇಶ, ಸಮಾಜದ ಕಲ್ಯಾಣ, ಧರ್ಮ ಮತ್ತು ಸಂಸ್ಕೃತಿಯನ್ನು ಬಲಪಡಿಸಲು ನಿರಂತರ ಸೇವೆಯಲ್ಲಿ ತೊಡಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಗಳಿಂದ ಪ್ರೇರಣೆ ಪಡೆದು, ಪರೋಪಕಾರ ಮನೋಭಾವದಿಂದ ಮಾನವ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ದೇಶ ನಿರ್ಮಾಣಕ್ಕೆ ಎಲ್ಲ ಕ್ಷೇತ್ರದ ಕೊಡುಗೆ ಮುಖ್ಯ: ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವೀರೇಂದ್ರ ಹೆಗ್ಗಡೆ, “ದೇಶವನ್ನು ಸಮೃದ್ಧವಾಗಿ ಕಟ್ಟಲು ಪ್ರತಿ ಕ್ಷೇತ್ರದ ಕೊಡುಗೆ ಕೂಡ ಮಹತ್ವದ್ದಾಗಿದೆ. ಸಿನಿಮಾ ರಂಗವು ಸಂಸ್ಕೃತಿ, ಸಮಾಜ ಮತ್ತು ಆಡಳಿತವನ್ನು ಬೆಳೆಸಿದರೆ, ಉಳಿದ ಕ್ಷೇತ್ರಗಳು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡುತ್ತಿವೆ. ಹಳೆಯ ಸಂಪ್ರದಾಯದ ಜತೆಗೆ ವರ್ತಮಾನವನ್ನು ಉಳಿಸಿಕೊಂಡು, ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಯುವಕರಿಗೆ ಮಾರ್ಗದರ್ಶನ ಮಾಡಬೇಕಿದೆ’ ಎಂದು ತಿಳಿಸಿದರು.
ನಟ ಉಪೇಂದ್ರ ಮಾತನಾಡಿ, “ಜೀವನದಲ್ಲಿ ಮತ್ತೊಬ್ಬರನ್ನು ಅನುಸರಿಸದೆ, ಸ್ವಂತಿಕೆ ಉಳಿಸಿಕೊಳ್ಳಬೇಕು. ಆ ಸ್ವಂತಿಕೆಯ ಹೊಸತನಕ್ಕೆ ನಾಂದಿ ಆಗಲಿದೆ. ಮಹಾನ್ ಸಾಧಕರೊಂದಿಗೆ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿ ಅನಿಸುತ್ತಿದೆ’ ಎಂದರು.
ಪ್ರಶಸ್ತಿ ತೀರ್ಪುಗಾರ ತಂಡದ ಅಧ್ಯಕ್ಷ ಹಾಗೂ ನಿವೃತ್ತ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮಾತನಾಡಿ, ಸಮಾಜಕ್ಕೆ ಕೊಡುಗೆ ನೀಡಿದ ಸಾಧಕರನ್ನು ಗುರುತಿಸಿ ಹೀಗೆ ಸನ್ಮಾನಿಸುವುದು ಮಾದರಿ ಮತ್ತು ಪ್ರೋತ್ಸಾಹದಾಯಕವಾಗಿದೆ. ಈ ಗೌರವವು ಸಾಧಕರ ಜವಾಬ್ದಾರಿಗಳನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿಯ ಸಂಸ್ಥಾಪಕ ಹಾಗೂ ವಕೀಲ ನಂದನ್ ಝಾ, ಚಾಂಪಿಯನ್ಸ್ ಆಫ್ ಚೇಂಜ್ ಪ್ರಶಸ್ತಿಗಳ ಪೋಷಕ ಶ್ಯಾಮ್ ಜಾಜು ಮತ್ತಿತರರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕೃತರು
ಸಮಾಜಸೇವೆ: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ, ಪರಸರವಾದಿ ತುಳಸಿಗೌಡ, ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ಸಂಸದ ತೇಜಸ್ವಿ ಸೂರ್ಯ, ನಟಿ ಖುಷ್ಬೂ ಯಾದವ್, ಉದ್ಯಮಿಗಳಾದ ಬಿಪಿನ್ ದಯಾಳ್, ಮಯಾಂಕ್ ಗೋಯಲ್, ಉಪೇಂದ್ರರಾವ್ ಕೊಳ್ಳು, ಬಿಪಿನ್ ಚಂದ್ರ, ಡಾ.ಸೋಮದತ್ತಸಿಂಗ್, ರಾಜೇಶ್ ರೆಡ್ಡಿ ಶಿವಶಂಕರ್.
ಸಂಸ್ಕೃತಿ: ಜಾನಪದ ಕಲಾವಿದೆ ಮಂಜಮ್ಮ ಜೋಗತಿ, ನಟರಾದ ಡಾ.ವಿಷ್ಣುವರ್ಧನ್ (ಮರಣೋತ್ತರ), ಉಪೇಂದ್ರ, ಡಾ.ವಿ. ರವಿಚಂದ್ರನ್.
ವಿಜ್ಞಾನ ಮತ್ತು ನಾವೀನ್ಯತೆ: ವಿಜ್ಞಾನಿ ಪ್ರೊ.ಸಿ.ಎನ್.ಆರ್. ರಾವ್, ನಿಖೀಲ್ ಪಾಲ್.
ಆವಿಷ್ಕಾರ ಮತ್ತು ಕೌಶಲ್ಯ ಅಭಿವೃದ್ಧಿ: ಡಾ.ರಾಜಾ ವಿಜಯ್ ಕುಮಾರ್, ಡಾ.ಡೈಸಿ ಬಾಗಿc.
ಸಾಮಾಜಿಕ ಕಾರ್ಯಕರ್ತ: ಬಿ. ರಾಮಚಂದ್ರ
ಕ್ರೀಡೆ: ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ರಾಜೇಶ್ವರಿ ಗಾಯಕವಾಡ, ಸೋಮಜೀತ್‌ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.