ಸಿಎಂ ಆಪ್ತ, ಸಚಿವ ಮಹದೇವ ಪ್ರಸಾದ್ ನಿಧನ
Team Udayavani, Jan 4, 2017, 3:45 AM IST
– ಚಿಕ್ಕಮಗಳೂರಿನ ರೆಸಾರ್ಟ್‌ನಲ್ಲಿ ಮಲಗಿದ್ದಾಗಲೇ ಹೃದಯಾಘಾತದಿಂದ ನಿಧನ
– ಮೂರು ದಿನ ಸರ್ಕಾರಿ ಶೋಕ, ಸಿಎಂ ಸೇರಿ ಹಲವು ಗಣ್ಯರ ಅಶ್ರು ತರ್ಪಣ
ಚಿಕ್ಕಮಗಳೂರು/ ಚಾಮರಾಜನಗರ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಆಪ್ತ, ಸಜ್ಜನ ರಾಜಕಾರಣಿ, ಸಚಿವ ಸಂಪುಟದ ಹಿರಿಯ ಸದಸ್ಯ, ಸಹಕಾರಿ ಹಾಗೂ ಸಕ್ಕರೆ ಸಚಿವ ಎಚ್. ಎಸ್.ಮಹಾದೇವ ಪ್ರಸಾದ್ (58) ಅವರು
ಚಿಕ್ಕಮಗಳೂರು ಹೊರವಲಯದ ಸೆರಾಯ್ ರೆಸಾರ್ಟ್‌ನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೊಪ್ಪ ತಾಲೂಕಿನ ಸಹಕಾರಿ ಸಾರಿಗೆ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ
ಸಚಿವರು, ರಾತ್ರಿ ರೆಸಾರ್ಟ್‌ನಲ್ಲಿ ತಂಗಿದ್ದರು. ಸೋಮವಾರ ರಾತ್ರಿ ಮಾಜಿ ಶಾಸಕ ಐ.ಬಿ.ಶಂಕರ್ ನಿವಾಸದಲ್ಲಿ ಭೋಜನ ಸ್ವೀಕರಿಸಿ, ರಾತ್ರಿ 10.30ರ ಸುಮಾರಿಗೆ ರೆಸಾರ್ಟ್‌ಗೆ ತೆರಳಿ ಸವಿ ನಿದ್ದೆಗೆ ಜಾರಿದ್ದರು. ಮಂಗಳವಾರ ಬೆಳಗಿನ ಜಾವ ಸುಮಾರು 3 ಗಂಟೆ ವೇಳೆಗೆ ಹೃದಯಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. 1958ರಲ್ಲಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ಶ್ರೀಕಂಠಶೆಟ್ಟರ ಮತ್ತು ವೀರಮ್ಮ ದಂಪತಿಯ
ಹಿರಿಯ ಪುತ್ರನಾಗಿ ಜನಿಸಿದ್ದರು ಅವರು, ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿದ್ದರು. 1994ರಲ್ಲಿ ಮೊದಲ ಬಾರಿಗೆ ಗುಂಡ್ಲುಪೇಟೆಯಿಂದ ವಿಧಾನಸಭೆಗೆ ಆಯ್ಕೆಯಾದ ಅವರು, 5 ಬಾರಿ ಶಾಸಕರಾಗಿದ್ದರು. ಸಿದ್ದರಾಮಯ್ಯ ಸಂಪುಟದಲ್ಲಿ ಸಹಕಾರಿ ಹಾಗೂ ಸಕ್ಕರೆ ಸಚಿವರಾಗಿದ್ದರು. ಮೃತರು ಪತ್ನಿ ಡಾ.ಗೀತಾ, ಪುತ್ರ ಗಣೇಶ್ ಪ್ರಸಾದ್ ಅವರನ್ನು
ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಹುಟ್ಟೂರಾದ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯ ಅವರ ತೆಂಗಿನ ತೋಟದಲ್ಲಿ
ಬುಧವಾರ ಬೆಳಗ್ಗೆ 11.30ಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ, ವೀರಶೈವ ಸಂಪ್ರದಾಯದಂತೆ ನಡೆಯಲಿದೆ.
ಸಚಿವರ ದಿಢೀರ್ ಅಗಲಿಕೆಯಿಂದ ರಾಜ್ಯಾದ್ಯಂತ ಶೋಕ ಮಡುಗಟ್ಟಿದ್ದು, ಮಂಗಳವಾರ ಸರ್ಕಾರಿ ರಜೆ ಘೋಷಿಸಲಾಗಿತ್ತು. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಮಧ್ಯಾಹ್ನದ ನಂತರ ಕೆಲಸ ನಿರ್ವಹಿಸಲಿಲ್ಲ. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಚಾಮರಾಜನಗರ ಜಿಲ್ಲೆಯಲ್ಲಿ ಮಂಗಳವಾರ ಅಘೋಷಿತ ಬಂದ್ ವಾತಾವರಣ ನಿರ್ಮಾಗೊಂಡಿದ್ದು, ಬುಧವಾರವೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸಚಿವರ ಗೌರವಾರ್ಥ ರಾಜ್ಯಾದ್ಯಂತ ಮೂರು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ವಿಧಾನಸೌಧದ ಮುಂಭಾಗದಲ್ಲಿ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿದೆ.
ಸವಿನಿದ್ದೆಯಲ್ಲೇ ಹೃದಯಾಘಾತ: ಕೊಪ್ಪ ತಾಲೂಕಿನ ಸಹಕಾರಿ ಸಾರಿಗೆ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೋಮವಾರ ರಾತ್ರಿಯೇ ಅವರು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಸಚಿವರೊಂದಿಗೆ ಅವರ ಆತ್ಮೀಯರಾದ ಚಲನಚಿತ್ರ ನಿರ್ಮಾಪಕ ಶಂಕರೇಗೌಡ ಹಾಗೂ ಗುಂಡ್ಲುಪೇಟೆ ಪುರಸಭೆ ಮಾಜಿ ಅಧ್ಯಕ್ಷ ನದೀಂ ಕೂಡ ಇದ್ದರು. ರಾತ್ರಿ ಸುಮಾರು 9.30ಕ್ಕೆ ಕೋಟೆ ಬಡಾವಣೆಯಲ್ಲಿರುವ ಮಾಜಿ ಶಾಸಕ ಐ.ಬಿ.ಶಂಕರ್ ನಿವಾಸಕ್ಕೆ
ತೆರಳಿ ಊಟ ಮಾಡಿದರು. ನಂತರ 10.30ರ ಸುಮಾರಿಗೆ ಸೆರಾಯ್ ರೆಸಾರ್ಟ್‌ಗೆ ತೆರಳಿ ಮಲಗಿದ್ದರು.
ಬೆಳಗ್ಗೆ ಎಂಟು ಗಂಟೆಯಾದರೂ ಸಚಿವರು ಕೊಠಡಿಯಿಂದ ಹೊರಗೆ ಬಂದಿರಲಿಲ್ಲ. ಶಂಕರೇಗೌಡ ಅವರು ಹಲವು ಬಾರಿ ರೂಮಿನ ಬಾಗಿಲು ತಟ್ಟಿದರು. ಸಚಿವರ ಮೊಬೈಲ್‌ಗೆ ಕರೆ ಮಾಡಿದರು. ಬಾಗಿಲು ತೆರೆಯದಿದ್ದಾಗ ಅನುಮಾನಗೊಂಡು, ಹೋಟೆಲ್ ಸಿಬ್ಬಂದಿಯನ್ನು ಕರೆಸಿದರು. ಹೋಟೆಲ್‌ನ ಬಾಗಿಲು ತೆರೆದು ನೋಡಿದಾಗ ಸಚಿವರು ಮಲಗಿದ ಸ್ಥಿತಿಯಲ್ಲಿದ್ದರು. ಸಚಿವರ ಕೈಮುಟ್ಟಿ ನೋಡಿದಾಗ ಕೈತಣ್ಣಗಾಗಿತ್ತು. ಕೂಡಲೇ ಜಿಲ್ಲಾಡಳಿತಕ್ಕೆ ವಿಷಯ ಮುಟ್ಟಿಸಿದರು.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಜಿ.ಸತ್ಯವತಿ, ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಮಲ್ಲಿಕಾರ್ಜುನಪ್ಪ ಹಾಗೂ ಜಿಲ್ಲಾ ಸರ್ಜನ್ ಡಾ| ಕುಮಾರ ನಾಯಕ್ ಆಗಮಿಸಿದರು.
ಸಚಿವರನ್ನು ಪರಿಶೀಲಿಸಿದ ವೈದ್ಯರು, ಸಚಿವರು ಹೃದಯಾಘಾತದಿಂದ ಮೃತಪಟ್ಟು ಆರು ಗಂಟೆಗೂ ಹೆಚ್ಚು ಕಾಲ ಕಳೆದಿದೆ ಎಂದು ಸ್ಪಷ್ಟಪಡಿಸಿದರು. ಬಳಿಕ, ಪೊಲೀಸರು ಮಹಜರು ನಡೆಸಿದರು.
ನಂತರ ಕೊಠಡಿಯಿಂದ ಮೃತದೇಹ ಹೊರಗೆ ತಂದು ಮೂರು ಬಾರಿ ಸಿಡಿಮದ್ದು ಸಿಡಿಸಿ, ಸರ್ಕಾರಿ ಗೌರವ ಸಲ್ಲಿಸಲಾಯಿತು. ಬಳಿಕ, ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 10 ನಿಮಿಷ ಪಾರ್ಥೀವ ಶರೀರವಿಟ್ಟು, ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ, ಹಾಸನ ಮಾರ್ಗದ ಮೂಲಕ ಮೈಸೂರಿಗೆ ಪಾರ್ಥಿವ ಶರೀರವನ್ನು ಕರೆತರಲಾಯಿತು. ಪಾರ್ಥಿವ ಶರೀರದೊಂದಿಗೆ ಜಿಲ್ಲಾಧಿಕಾರಿ ಜಿ.ಸತ್ಯವತಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಅಣ್ಣಾಮಲೈ
ಆಗಮಿಸಿದರು.
ಬಳಿಕ, ಸಂಜೆ 4.18ರ ವೇಳೆಗೆ ಮೈಸೂರಿನ ಕುವೆಂಪುನಗರದ ಗಗನಚುಂಬಿ ಜೋಡಿ ರಸ್ತೆಯಲ್ಲಿನ ಅವರ ನಿವಾಸ “ದೇವಗೀತ’ಕ್ಕೆ ಪಾರ್ಥೀವ ಶರೀರವನ್ನು ತರಲಾಯಿತು. ಸಚಿವ ಸಹದ್ಯೋಗಿಗಳಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಜತೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಕುಟುಂಬದವರಿಗೆ ಸಾಂತ್ವನ ಹೇಳಿದರು.
10 ನಿಮಿಷಗಳ ಕಾಲ ಮನೆಯೊಳಗಿರಿಸಿ, ಕುಟುಂಬದವರ ಅಂತಿಮ ದರ್ಶನದ ನಂತರ ಸಂಜೆ 4.30ರಿಂದ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ, ಸಂಜೆ 6.55ಕ್ಕೆ ತೆರೆದ ವಾಹನದಲ್ಲಿ
ಪಾರ್ಥಿವ ಶರೀರವನ್ನು ಗುಂಡ್ಲುಪೇಟೆಗೆ ಕೊಂಡೊಯ್ದು, ದೇವರಾಜ ಅರಸು ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ
ದರ್ಶನಕ್ಕೆ ಇಡಲಾಯಿತು. ಹಿರಿಯ ಗಣ್ಯರು ಆಗಮಿಸಿ, ಅಗಲಿದ ನಾಯಕನ ಅಂತಿಮ ದರ್ಶನ ಪಡೆದರು.
ಬಳಿಕ, ಹುಟ್ಟೂರು, ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಗೆ ಮೃತದೇಹ ಕೊಂಡೊಯ್ಯಲಾಗಿದೆ. ಬುಧವಾರ ಬೆಳಗ್ಗೆ
11.30ಕ್ಕೆ ಅವರ ತೋಟದ ಮನೆಯಲ್ಲಿ ವೀರಶೈವ ಸಂಪ್ರದಾಯದಂತೆ, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಹಾಲಹಳ್ಳಿಯಲ್ಲಿಂದು 11.30ಕ್ಕೆ ಅಂತ್ಯಕ್ರಿಯೆ
ಮಹದೇವಪ್ರಸಾದ್ ಅವರ ಅಂತ್ಯಕ್ರಿಯೆ ಅವರ ಹುಟ್ಟೂರು, ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ಬುಧವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ. ಬೊಗ್ಗನಪುರ ತೆಂಗಿನ ನರ್ಸರಿ ಫಾರಂನಲ್ಲಿ ಅವರ ತಂದೆ ದಿ.ಶ್ರೀಕಂಠಶೆಟ್ಟರ ಮತ್ತು ತಾಯಿ ವೀರಮ್ಮ ಅವರ ಸಮಾಧಿಯ ಪಕ್ಕದಲ್ಲಿ, ವೀರಶೈವ ಸಂಪ್ರದಾಯದಂತೆ, ಸರ್ಕಾರಿ ಗೌರವಗಳೊಂದಿಗೆ ಅವರ
ಅಂತ್ಯಕ್ರಿಯೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
Belagavi: ಕಾಂಗ್ರೆಸ್ ಶಕ್ತಿ ಏನೆಂದು ನಮಗಿಂತ ಚೆನ್ನಾಗಿ ಬಿಜೆಪಿಯವರಿಗೆ ಗೊತ್ತಿದೆ: ಡಿಕೆಶಿ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Madikeri: ರಾಜ್ಯದಲ್ಲೇ ಮೊಟ್ಟಮೊದಲ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.