“Gruha Arogya scheme’: ಕಾರ್ಯಕ್ರಮಕ್ಕೆ ಸಿಎಂ ಚಾಲನೆ; ಜನವರಿಯಿಂದ ರಾಜ್ಯಾದ್ಯಂತ ಜಾರಿ

ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತರಿಂದ ತಪಾಸಣೆ

Team Udayavani, Oct 25, 2024, 12:13 AM IST

cm

ಬೆಂಗಳೂರು: “ಆರೋಗ್ಯವಂತ ಕರ್ನಾಟಕ’ ನಿರ್ಮಾಣ ಮಾಡಬೇಕೆಂಬ ಸದುದ್ದೇಶದಿಂದ ಆರೋಗ್ಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾದ “ಗೃಹ ಆರೋಗ್ಯ’ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಗುರುವಾರ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದ ಸಿಎಂ, ಉಚಿತ ತಪಾಸಣೆ ಹಾಗೂ ಔಷಧ ಪಡೆದ ಫ‌ಲಾನುಭವಿಗಳ ಜತೆಗೆ ಸಂವಾದವನ್ನೂ ನಡೆಸಿದರು.

ಅನಾರೋಗ್ಯ ಹಾಗೂ ಮರಣ ಪ್ರಮಾಣ ಹೆಚ್ಚಿಸುತ್ತಿರುವ ಅಸಾಂಕ್ರಾಮಿಕ ರೋಗಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಈ ಕ್ರಮ ಕೈಗೊಂಡಿದ್ದು, 30 ವರ್ಷ ಮೇಲ್ಪಟ್ಟವರ ಪೈಕಿ ಶೇ. 24ರಷ್ಟು ರಕ್ತದೊತ್ತಡ ಹಾಗೂ ಶೇ. 15.6ರಷ್ಟು ಮಂದಿ ಮಧುಮೇಹಿಗಳಿದ್ದಾರೆ. ಅಲ್ಲದೆ, ಶೇ. 11.5ರಷ್ಟು ಜನರಲ್ಲಿ ಬಾಯಿ ಕ್ಯಾನ್ಸರ್‌, ಶೇ. 26ರಷ್ಟು ಮಂದಿಯಲ್ಲಿ ಸ್ತನ ಕ್ಯಾನ್ಸರ್‌, ಶೇ. 18.3ರಷ್ಟು ಗರ್ಭಕಂಠದ ಕ್ಯಾನ್ಸರ್‌ ರೋಗಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ.

ಕನಿಷ್ಠ 3.03 ಕೋಟಿ ಜನರ
ತಪಾಸಣೆ ಮಾಡುವ ಗುರಿ
ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆ ಯಲ್ಲಿ “ಗೃಹ ಆರೋಗ್ಯ’ ಕಾರ್ಯಕ್ರಮ ಆರಂಭವಾಗಲಿದ್ದು, ಮುಂದಿನ ಜನವರಿ ಯಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ರಾಜ್ಯದಲ್ಲಿರುವ ಅಂದಾಜು 6.75 ಕೋಟಿ ಜನರ ಪೈಕಿ ಕನಿಷ್ಠ 3.03 ಕೋಟಿ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸುವ ಗುರಿ ಹೊಂದಲಾಗಿದ್ದು, ಆಶಾ ಕಾರ್ಯಕರ್ತೆಯರು, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬಂದಿಯು ಪ್ರತೀ ಮನೆಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನೂ ಆರೋಗ್ಯ ತಪಾಸಣೆಗೆ ಒಳಪಡಿಸಲಿದ್ದಾರೆ. ಅಸಾಂಕ್ರಾಮಿಕ ರೋಗಗಳು ಕಂಡುಬಂದರೆ, ಅಂಥ‌ವರಿಗೆ ಉಚಿತವಾಗಿ ಔಷಧ ವಿತರಣೆಯನ್ನೂ ಮಾಡಲಾಗುತ್ತದೆ.

ದಿನಕ್ಕೆ 15 ಮನೆಗಳಿಗೆ ಭೇಟಿ
ಪ್ರಸ್ತುತ ಕೋಲಾರದಲ್ಲಿ ಆರೋಗ್ಯ ಕಾರ್ಯಕರ್ತರ ತಂಡ ದಿನಕ್ಕೆ 15 ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿದೆ. ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಈ ತಂಡ ಮನೆ-ಮನೆಗೆ ಭೇಟಿ ನೀಡಲಿದೆ. ದೃಢಪಟ್ಟ ಪ್ರಕರಣಗಳಿಗೆ ಔಷಧ, ಮಾತ್ರೆ ನೀಡಲಾಗುವುದು. ಜೀವನಶೈಲಿ, ಆಹಾರ, ವ್ಯಾಯಾಮ ಇತ್ಯಾದಿಗಳ ಬಗ್ಗೆ ಜಾಗೃತಿ ಹಾಗೂ ಸಲಹೆ, ಮಾರ್ಗದರ್ಶನಗಳನ್ನೂ ನೀಡಲಾಗುತ್ತದೆ. 2 ತಿಂಗಳ ಅನಂತರ ಮತ್ತೂಮ್ಮೆ ತಪಾಸಣೆ ಮಾಡಲಾಗುತ್ತದೆ.

ಯಾವ್ಯಾವ ಕಾಯಿಲೆಗಳ ತಪಾಸಣೆ ?
ರಕ್ತದೊತ್ತಡ, ಮಧುಮೇಹ, ಬಾಯಿ, ಗರ್ಭಕಂಠ, ಸ್ತನ ಕ್ಯಾನ್ಸರ್‌ ತಪಾಸಣೆ, ಬಿಎಂಐ, ವೇಸ್ಟ್‌ ಹಿಪ್‌ ಅನುಪಾತ, ಸ್ಲಿàಪ್‌ ಅಪ್ನಿಯಾ (ನಿದ್ದೆಯಲ್ಲಿ ಉಸಿರುಗಟ್ಟುವಿಕೆ) ಹಾಗೂ ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ತಪಾಸಣೆಯನ್ನು ನಡೆಸಲಾಗುತ್ತದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

1-prr

Piracy;ಕಳೆದ ವರ್ಷ 22,400 ಕೋಟಿ ರೂ. ನಷ್ಟ!

1-kashmir

Kashmir; ರಾಜ್ಯ ಸ್ಥಾನಮಾನ ವಾಪಸ್‌ ಮಾಡಿ: ಪ್ರಧಾನಿಗೆ ಒಮರ್‌ ಮನವಿ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

Kaup: ಮಾರಿಯಮ್ಮ ದೇವಿಯ ಸ್ವರ್ಣ ಗದ್ದುಗೆ: ಸ್ವರ್ಣ ಸಮರ್ಪಣೆಗೆ ಅಮಿತೋತ್ಸಾಹ

gold

Kerala; ಆಭರಣ ಘಟಕಕ್ಕೆ ದಾಳಿ: ದಾಖಲೆ ಇಲ್ಲದ 104 ಕೆ.ಜಿ. ಚಿನ್ನ ವಶ!

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ

Udupi: ಅಧಿಕ ಲಾಭಾಂಶದ ಆಮಿಷ: ಲಕ್ಷಾಂತರ ರೂ.ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫ‌ಲಿತಾಂಶಕ್ಕೆ ತಡೆ

Results: 8, 9, 10ನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆ ಫ‌ಲಿತಾಂಶಕ್ಕೆ ತಡೆ

CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ

CM Siddaramaiah: ನೀತಿಸಂಹಿತೆ ಬಳಿಕ ಜಾತಿ ಗಣತಿ ತೀರ್ಮಾನ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Congress: ಸಿ.ಪಿ. ಯೋಗೇಶ್ವರ್‌ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್‌

Congress: ಸಿ.ಪಿ. ಯೋಗೇಶ್ವರ್‌ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್‌

congress

Maharashtra Election; ಕಾಂಗ್ರೆಸ್‌ 48 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

Udupi: ಗೀತಾರ್ಥ ಚಿಂತನೆ-74: ಕುಲನಾಶದ ಕಳವಳ

1-bjp

Water pollution; ಮಲಿನ ಯಮುನೆಯಲ್ಲಿ ಮಿಂದು ಬಿಜೆಪಿ ದಿಲ್ಲಿ ಘಟಕದ ಅಧ್ಯಕ್ಷ ಪ್ರತಿಭಟನೆ

death

Pimpri Chinchwad; ನೀರಿನ ಟ್ಯಾಂಕ್‌ ಕುಸಿತ: 5 ಕಾರ್ಮಿಕರು ಸಾ*ವು

Terror 2

Pakistan; ಖೈಬರ್‌ ಪ್ರಾಂತದಲ್ಲಿ 9 ಭಯೋತ್ಪಾದಕರ ಹ*ತ್ಯೆ

suicide

Ayodhya: ಹೆಚ್ಚುವರಿ ಡೀಸಿ ಅನುಮಾನಾಸ್ಪದ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.