ಕ್ಷೇತ್ರ ಗೆಲ್ಲಿಸಲಾಗದ ಸಚಿವರ ತಲೆದಂಡ?ಮೇಲುಗೈ ಸಾಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Team Udayavani, Jun 5, 2024, 6:45 AM IST
ಬೆಂಗಳೂರು: ಲೋಕಸಭಾ ಚುನಾವಣೆ ಅನಂತರ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಹಲವು ರೀತಿಯ ಪಲ್ಲಟಗಳು ಆಗಲಿವೆ ಎಂಬ ನಿರೀಕ್ಷೆ ವಿಪಕ್ಷದಲ್ಲಿತ್ತು. ಮಂಗಳವಾರದ ಫಲಿತಾಂಶ ಅದನ್ನು ಹುಸಿಗೊಳಿಸಿದೆ.
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಬಣಗ ಳಿವೆ. ಆ ಬಣಗಳಲ್ಲಿ ಯಾರು ಸೋತರೂ ಇಡೀ ನಾಯಕತ್ವದ ವೈಫಲ್ಯ ಆಗುತ್ತದೆ. ಆಗ ಗುಂಪುಗಾರಿಕೆ ಶುರುವಾಗುತ್ತದೆ. ಅದರ ಲಾಭ ತಮಗೆ ಆಗಬಹುದು ಎಂಬ ಹವಣಿಕೆ ವಿಪಕ್ಷಗಳಲ್ಲಿತ್ತು. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರ ಮುಖ್ಯ ಮಂತ್ರಿ ಏಕನಾಥ್ ಶಿಂಧೆ ಚುನಾವಣ ಪ್ರಚಾರದ ವೇಳೆ ಕಾಂಗ್ರೆಸ್ ಸರಕಾರವನ್ನು ಅಸ್ಥಿರ ಗೊಳಿಸುವ ಹೇಳಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಕಾಂಗ್ರೆಸ್‌ನಲ್ಲೂ ಆತಂಕ ಮನೆಮಾಡಿತ್ತು. ಆದರೆ ಫಲಿತಾಂಶ ಪಕ್ಷದ ಪಾಲಿಗೆ ತೀರ ಕಳಪೆ ಇಲ್ಲ. ಮತ್ತೂಂದೆಡೆ ಕೇಂದ್ರದಲ್ಲಿ ಬಿಜೆಪಿಗೂ ಬಹುಮತ ಬಂದಿಲ್ಲ. ಈ ಎರಡೂ ಕಾರಣಗಳಿಂದ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರು ವುದಿಲ್ಲ.
ಸಿಎಂ ತನ್ನ ಬಣದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದು, ಆ ಮೂಲಕ ತಮ್ಮ ಕುರ್ಚಿ ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಪಕ್ಷದಲ್ಲೂ ತುಸು ಮೇಲುಗೈ ಸಾಧಿಸಿದ್ದಂತೂ ನಿಜ. ಆದರೆ ಅದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರು ವಂತಹದ್ದೇನಲ್ಲ. ಈಗಾಗಲೇ ಅಧಿಕಾರ ಹಸ್ತಾಂತರದ ತೀರ್ಮಾನಗಳು ಆಗಿಬಿಟ್ಟಿವೆ. ಕೆಪಿಸಿಸಿ ಅಧ್ಯಕ್ಷಗಿರಿಯನ್ನೂ ಬಿಟ್ಟುಕೊಡುವ ಬಗ್ಗೆ ಮೊದಲೇ ಚರ್ಚೆಗಳೂ ನಡೆದಿವೆ. ಅದರಂತೆ ಬದಲಾವಣೆಗಳಾದರೂ ಅದು ಕಾಕತಾಳೀಯವಷ್ಟೇ ಎಂದು ಮುಖಂಡರು ವಿಶ್ಲೇಷಿಸುತ್ತಾರೆ. ಇಷ್ಟೆಲ್ಲ ಗ್ಯಾರಂಟಿಗಳನ್ನು ಕೊಟ್ಟು, ಅದಕ್ಕೆ ಸಾವಿರಾರು ಕೋಟಿ ರೂ. ನೀಡಿಯೂ ನಿರೀಕ್ಷಿತ ಗುರಿ ಸಾಧನೆ ಸಾಧ್ಯ ವಾಗದಿರುವುದು ಪಕ್ಷವನ್ನು ಚಿಂತೆಗೀಡು ಮಾಡಿದೆ. ಇದಕ್ಕೆ ಪೂರಕವಾಗಿ “ಗ್ಯಾರಂಟಿ ಗಳಿಂದ ನಮಗೆ ಇನ್ನೂ ಹೆಚ್ಚಿನ ಸ್ಥಾನಗಳು ಬರಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈ ಫಲಿತಾಂಶವು ಚಿಂತನೆಗೆ ಹಚ್ಚಿದೆ’ ಎಂದು ಡಿಸಿಎಂತಿಳಿಸಿದ್ದಾರೆ.
ತಲೆದಂಡ ಫಿಕ್ಸ್?: ಹೈಕಮಾಂಡ್ ಈ ಮೊದಲೇ ಸಚಿವರಿಗೆ ತಮ್ಮ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ಟಾಸ್ಕ್ ನೀಡಿತ್ತು. ಒಂದು ವೇಳೆ ವಿಫಲವಾದರೆ ತಲೆದಂಡ ಎಂಬ ಎಚ್ಚರಿಕೆಯನ್ನೂ ನೀಡಿತ್ತು. ಈಗ ಅದಕ್ಕೆ ಕಾಲ ಸನ್ನಿಹಿತವಾಗಿದೆಯೇ ಎಂಬ ಪ್ರಶ್ನೆ ಪಕ್ಷದ ವಲಯದಲ್ಲಿ ಶುರುವಾಗಿದೆ.
ಹಲವು ಕ್ಷೇತ್ರಗಳಲ್ಲಿ ಸಚಿವರೇ ಕಣಕ್ಕಿಳಿಯಬೇಕು ಅಂತ ಸೂಚನೆ ಬಂದಿತ್ತು. ಬಹುತೇಕ ಎಲ್ಲರೂ ಅದಕ್ಕೆ ಹಿಂದೇಟು ಹಾಕಿದರು. ಆಗ ಗೆಲ್ಲಿಸಿಕೊಂಡು ಬರಬೇಕು ಎಂದು ಟಾಸ್ಕ್ ನೀಡಲಾಯಿತು. ಟಾಸ್ಕ್ ಸ್ವೀಕರಿಸಿದ ಸಚಿವರು, ತಮ್ಮ ಕುಟುಂಬದ ಕುಡಿಗಳನ್ನೇ ಕಣಕ್ಕಿಳಿಸುವುದರ ಜತೆಗೆ ಗೆಲುವಿಗೆ ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದರು. ಒಟ್ಟಾರೆ ಹತ್ತು ಸಚಿವರು ತಮ್ಮ ಕುಟುಂಬದ ಸದಸ್ಯರನ್ನು ಸ್ಪರ್ಧೆಗಿಳಿಸಿದ್ದರು. ಅದರಲ್ಲಿ ಐವರು ಗೆಲುವು ಸಾಧಿಸಿದ್ದರೆ ಐವರು ಸೋಲನುಭವಿಸಿದ್ದಾರೆ. ಮತ್ತೂಂದೆಡೆ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆಯೂ ಅಪಸ್ವರಗಳು ಕೇಳಿಬಂದಿವೆ. ಇದೆಲ್ಲವೂ ಫಲಿತಾಂಶದ ರೂಪದಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
-ವಿಜಯ ಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
MUST WATCH
ಹೊಸ ಸೇರ್ಪಡೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.