ಚೀನದ 130 ಲೋನ್ ಆ್ಯಪ್ ನಿಷ್ಕ್ರಿಯ
Team Udayavani, Jun 24, 2022, 7:00 AM IST
ಬೆಂಗಳೂರು: ಮಧ್ಯಮ ವರ್ಗದ ಜನರಿಗೆ ಸುಲಭವಾಗಿ ಸಾಲ ಕೊಟ್ಟು ಅನಂತರ ಮಾನಸಿಕ ಕಿರುಕುಳ ನೀಡುತ್ತಿದ್ದ ಚೀನ ಮೂಲದ ಸಾಲ ಆ್ಯಪ್‌ಗಳ ವಿರುದ್ಧ ರಾಜ್ಯ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದು, 130ಕ್ಕೂ ಅಧಿಕ ಆ್ಯಪ್‌ಗಳನ್ನು ನಿಷ್ಕ್ರಿಯಗೊಳಿಸಿ 160 ಬ್ಯಾಂಕ್ ಖಾತೆಗಳನ್ನು ಬ್ಲಾಕ್ ಮಾಡಿದ್ದಾರಲ್ಲದೆ 8ರಿಂದ 10 ಕೋ. ರೂ. ಜಪ್ತಿ ಮಾಡಿದ್ದಾರೆ.
ಇಂಥ ಚೀನ ಆ್ಯಪ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರಕಾರ ಸೂಚಿಸಿದ ಬೆನ್ನಲ್ಲೇ ಬೆಂಗಳೂರು ನಗರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ನಗರದ ಎಂಟು ಸೆನ್ ಠಾಣೆಗಳಲ್ಲಿ ಆರು ತಿಂಗಳುಗಳ ಅವಧಿಯಲ್ಲಿ 600ಕ್ಕೂ ಹೆಚ್ಚು ಲೋನ್ ಆ್ಯಪ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಚೀನದ ಐವರು ದೇಶದಲ್ಲಿ ಉದ್ಯೋಗ ನೀಡುವ ನೆಪದಲ್ಲಿ ಆಮಿಷವೊಡ್ಡಿ ನಕಲಿ ಕಂಪೆನಿಗಳನ್ನು ತೆರೆದು ಈ ಕೃತ್ಯವೆಸಗಿದ್ದಾರೆ.
85 ಕಂಪೆನಿಗಳು; 62 ಬ್ಯಾಂಕ್‌ಗಳಲ್ಲಿ ಖಾತೆಗಳು :
ಕಳೆದ ವರ್ಷ ಮಾರತಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಚೀನದ ನಾಲ್ವರು ಆರೋಪಿಗಳು ಮುನ್ನೇನಕೊಳಲುವಿನಲ್ಲಿ “ಲಿಕೋರಿಸ್ ಟೆಕ್ನಾಲಜಿ ಪ್ರೈ.ಲಿ.’ ಕಂಪೆನಿ ತೆರೆದಿರುವುದು ಪತ್ತೆಯಾಗಿತ್ತು. ಅಲ್ಲದೆ ಬೇರೆಡೆ 60 ವಿವಿಧ ಕಂಪೆನಿಗಳು ಸ್ಥಾಪಿಸಿ 59 ಬ್ಯಾಂಕ್
ಗಳಲ್ಲಿ ಖಾತೆ ತೆರೆದಿದ್ದರು ಎಂಬುದು ಗೊತ್ತಾಗಿತ್ತು. ಅನಂತರ ಹೆಚ್ಚುವರಿಯಾಗಿ ಭಾರತ ಮೂಲದ 85 ಕಂಪೆನಿಗಳು ಚೀನದ ಲೋನ್ ಆ್ಯಪ್‌ಗಳಿಗೆ ಸಹಕಾರ ನೀಡಿರುವುದು, ಇದೇ ಕಂಪೆನಿಗಳು ದೇಶದ 62 ರಾಷ್ಟ್ರೀಯ, ಖಾಸಗಿ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿರುವುದು ಗೊತ್ತಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಸಿವೆ.
ಸಾಲ ಆ್ಯಪ್‌ಗಳು ಯಾವುವು? :
ಪ್ರಾಥಮಿಕ ಮಾಹಿತಿ ಪ್ರಕಾರ ಕ್ಯಾಷ್ ಮಾಸ್ಟರ್, ಕ್ರೇಜಿರುಪಿ, ಐ-ರುಪಿ, ಕ್ಯಾಷಿನ್, ರುಪಿ ಮೆನು, ಇ-ರುಪಿ, ಮನಿ ಹೋಮ್, ಕ್ಯಾಶ್‌ಮೆನು, ಓಸೀನ್ ರುಪೀಸ್‌ವು, ಲೈಪ್ ವ್ಯಾಲೇಟ್, ರಾಯಲ್ ಕ್ಯಾಷ್, ಎಲಿಫ್ಯಾಂಟ್ ಕ್ಯಾಷ್, ರೈಸ್ ವ್ಯಾಲೇಟ್, ಬಾಕ್ಸ್ ಕ್ಯಾಷ್, ಸಿಸಿ ರುಪೀ, ಟೈಮ್ ಲೋನ್, ರಬ್ಬಿಟ್ ಲೋನ್- ಹೀಗೆ ಸಾವಿರಕ್ಕೂ ಅಧಿಕ ಆ್ಯಪ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಸದ್ಯ ಈ ಪೈಕಿ 130 ಆ್ಯಪ್‌ಗಳನ್ನು ನಗರ ಪೊಲೀಸರು ನಿಷ್ಕ್ರಿಯಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೊನಾ ವೇಳೆ ಚೀನ ಮೂಲದ ಉದ್ಯಮಿಗಳು ಭಾರತದಲ್ಲಿ ಕೆಲವು ನಿರುದ್ಯೋಗಿಗಳನ್ನು ವಿವಿಧ ಆ್ಯಪ್‌ಗಳ ಮೂಲಕ ಸಂಪರ್ಕಿಸಿ ಕಮಿಷನ್ ಆಮಿಷವೊಡ್ಡಿ ಅವರ ಹೆಸರಿನಲ್ಲಿ ಹಣ ಹೂಡಿಕೆ ಮತ್ತು ಸಾಲ ಆ್ಯಪ್ ಕಂಪೆನಿ ಸೃಷ್ಟಿಸಿದ್ದಲ್ಲದೆ, ಬ್ಯಾಂಕ್ ಖಾತೆಗಳನ್ನೂ ತೆರೆದಿದ್ದರು. ಮೊಬೈಲ್‌ಗಳಿಗೆ ಸಾಲದ ಆ್ಯಪ್‌ಲಿಂಕ್ ಕಳುಹಿಸಿ ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಂಡು, ಒಟಿಪಿ ನೀಡಿದರೆ ಐದಾರು ನಿಮಿಷಗಳಲ್ಲಿ 1 ಸಾವಿರ ರೂ.ನಿಂದ ಐದು ಲಕ್ಷ ರೂ.ವರೆಗೆ ಸಾಲ ನೀಡುವುದಾಗಿ ಹೇಳುತ್ತಿದ್ದರು. ಸಾಲ ನೀಡಿದ ಕೆಲವೇ ಕ್ಷಣಗಳ ಬಳಿಕ ಮತ್ತೂಂದು ಸಂದೇಶದಲ್ಲಿ ಸಾಲಕ್ಕೆ ಶೇ. 40ರಿಂದ ಶೇ. 60ರಷ್ಟು ಬಡ್ಡಿ ವಿಧಿಸಲಾಗುತ್ತಿದ್ದು, ನಿಗದಿತ ಸಮಯದಲ್ಲಿ ಸಾಲ ಹಿಂದಿರುಗಿಸಬೇಕು ಎಂದು ಎಚ್ಚರಿಸುತ್ತಿದ್ದರು.
ಸಾಲ ಮರುಪಾವತಿ ನೆಪದಲ್ಲಿ ಹೆಚ್ಚು ಹಣಕ್ಕೆ ಬೇಡಿಕೆ ಇರಿಸಿ, ಕೊಡದಿದ್ದರೆ ಸಾಲಗಾರರ ಮೊಬೈಲ್‌ನಲ್ಲಿರುವ ಸ್ನೇಹಿತರ ನಂಬರ್‌ಗಳು, ಫೇಸ್‌ಬುಕ್, ಇನ್‌ಸ್ಟ್ರಾಗ್ರಾಂ ಸ್ನೇಹಿತರಿಗೆ ಸಾಲಗಾರರನ ಹೆಸರಿನಲ್ಲಿ ಸುಳ್ಳು ಆರೋಪಗಳು ಮತ್ತು ಅಶ್ಲೀಲ ನಿಂದನೆ ಮತ್ತು ಎಡಿಟ್ ಮಾಡಿದ ವೀಡಿಯೋಗಳನ್ನು ಟ್ಯಾಗ್ ಮಾಡಿ ಮಾನಕ್ಕೆ ಧಕ್ಕೆ ತರುತ್ತಿದ್ದರು. ಕೆಲವರು ಹೆಚ್ಚುವರಿ ಹಣ ಕೊಟ್ಟರೆ, ಇನ್ನು ಕೆಲವರು ಪೊಲೀಸ್ ಠಾಣೆ ಮೊರೆ ಹೊಗುತ್ತಿದ್ದರು.
ನಿರುದ್ಯೋಗಿಗಳ ಹೆಸರಿನಲ್ಲಿ ಕಂಪೆನಿ :
ಪ್ರಾಥಮಿಕ ಮಾಹಿತಿಗಳ ಪ್ರಕಾರ ಚೀನ ಮೂಲದ ಲಿಯು ವಿಜೆನ್, ಲಿನ್ ಜೂಜುನ್, ಜಿನ್‌ಗ್ಲಿ, ಶುಫ್ಯಾನ್ ಎಂಬವರು ಭಾರತದಲ್ಲಿ ನಿರುದ್ಯೋಗಿ ಯುವಕರಿಗೆ ವಿವಿಧ ಮಾರ್ಗಗಳ ಮೂಲಕ ಉದ್ಯೋಗದ ಆಮಿಷವೊಡ್ಡಿ ಅವರ ಹೆಸರಿನಲ್ಲಿ ನಕಲಿ ಕಂಪೆನಿಗಳು ತೆರೆದು, ಅವರನ್ನೇ ಎಚ್‌ಆರ್ ಮ್ಯಾನೇಜರ್, ಟೀಂ ಲೀಡರ್‌ಗಳನ್ನಾಗಿ ನೇಮಿಸಿದ್ದಾರೆ. ಬಳಿಕ ಬ್ಯಾಂಕ್‌ಗಳಲ್ಲಿ ಅವರ ಹೆಸರಿನಲ್ಲಿಯೇ ಖಾತೆಗಳನ್ನು ತೆರೆದು, ಅವರಿಗೆ ತಿಳಿಯದಂತೆ ಸಾಫ್ಟ್ವೇರ್ ಮೂಲಕ ವಂಚನೆ ಹಣವನ್ನು ಆ ಖಾತೆಗಳಿಗೆ ಜಮೆ ಮಾಡಿಸಿಕೊಂಡು, ಬಳಿಕ ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದರು. ಜತೆಗೆ ಈ ಆ್ಯಪ್ ಮತ್ತು ಕಂಪೆನಿಗಳ ಉದ್ಯೋಗಿಗಳ ಹೆಸರಿನಲ್ಲಿ ಭಾರತೀಯ ಸಿಮ್ ಕಾರ್ಡ್‌ಗಳನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ರೋಮಿಂಗ್ ಕಾಲ್‌ಗಳ ಮೂಲಕ ಸಾಲಗಾರರಿಂದ ಒಟಿಪಿ ಪಡೆದು ಹಣಕಾಸಿನ ವ್ಯವಹಾರ ನಡೆಸುತ್ತಿದ್ದರು ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಂದ್ರಕ್ಕೆ ವರದಿ :
ಚೀನ ಮೂಲದ ಆರೋಪಿಗಳು ಭಾರತದಲ್ಲಿ ತಾವು ಸೃಷ್ಟಿಸಿದ ಕಂಪೆನಿಗಳ ನಿರ್ದೇಶಕರು ಮತ್ತು ಸಿಬಂದಿ ಜತೆಗೆ ಸಂವಹನ ಮಾಡಲು “ಡಿಂಗ್‌ಟಾಕ್’ ಎಂಬ ಆ್ಯಪ್ ಬಳಸುತ್ತಿದ್ದಾರೆ. ಜತೆಗೆ ಪ್ರತ್ಯೇಕವಾಗಿ ಗ್ರಾಹಕರ ವಾಟ್ಸ್‌ಆ್ಯಪ್ ಗ್ರೂಪ್ ಸೃಷ್ಟಿಸಿಕೊಂಡು ಅವ್ಯವಹಾರ ನಡೆಸುತ್ತಿರುವುದು ಗೊತ್ತಾಗಿದೆ. ಈ ಎಲ್ಲ ಮಾಹಿತಿಯನ್ನು ಸಂಗ್ರಹಿಸಿರುವ ನಗರ ಪೊಲೀಸರು ಕೇಂದ್ರ ಗುಪ್ತಚರ ಇಲಾಖೆ ಸಂಪೂರ್ಣ ವರದಿ ಸಲ್ಲಿಸಿದ್ದಾರೆ.
- ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.