ಆನ್‌ಲೈನ್‌ನಲ್ಲಿ ಬರುತ್ತಿವೆ ಚೀನ ಡ್ರೋನ್
Team Udayavani, Sep 9, 2021, 7:42 AM IST
ಬೆಂಗಳೂರು: ಶ್ರೀನಗರದಲ್ಲಿರು ಐಎಎಫ್ ನೆಲೆಯ ಮೇಲೆ ಡ್ರೋನ್ ದಾಳಿಯ ಬಳಿಕ ಹೊಸ ರೀತಿಯ ದಾಳಿ ವ್ಯವಸ್ಥೆ ದೇಶದ ಭದ್ರತೆಗೆ ಮಾರಕವಾಗಿ ಪರಿಣಮಿಸಬಹುದು ಎನ್ನುವುದು ದೃಢ ಪಟ್ಟಿದೆ. ಚೀನದಲ್ಲಿ ಉತ್ಪಾದನೆಯಾಗಿ ಬರುವ ಹಾರುವ ಆಟಿಕೆ ಗಳಿಂದಂತೂ ಹೆಚ್ಚಿನ ಅಪಾಯ ಇದ್ದು, ಅವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೇಂದ್ರ ಗೃಹ ಇಲಾಖೆ ಮತ್ತು ರಾಜ್ಯದ ಪೊಲೀಸ್ ಅಧಿಕಾರಿಗಳ ನಡುವೆ ಮಾತು ಕತೆ ನಡೆಯುತ್ತಿದೆ.
ಕೇಂದ್ರ ಗೃಹ ಸಚಿವಾಲಯದ ಪ್ರಕಾರ ವಯರ್‌ಲೆಸ್ ರೇಡಿಯೋ ಹೊಂದಿರುವ ರಿಮೋಟ್ ಆಧಾರಿತ ಯಾವುದೇ ಮಾನವರಹಿತ (ಡ್ರೋನ್ ತಂತ್ರಜ್ಞಾನ ಆಧಾರಿತ) ಹಾರುವ ವಸ್ತು ಗಳು ಸಮಾಜ ಘಾತಕರ ಕೈಗೆ ಸಿಕ್ಕರೆ ಆಯುಧಗಳಾಗಿ ಪರಿವರ್ತನೆಯಾಗುವ ಸಾಧ್ಯತೆಯೇ ಹೆಚ್ಚು. ಅವುಗಳನ್ನು ಶಾಶ್ವತವಾಗಿ ನಿಷೇಧಿಸುವ ಸಲಹೆಗಳನ್ನು ಅಧಿಕಾರಿಗಳು ನೀಡಿದ್ದು, ಆ ಬಗ್ಗೆ ಯೋಚಿಸಲಾಗುತ್ತಿದೆ ಎಂದು ಅಧಿಕಾರಿ ಯೊಬ್ಬರು ತಿಳಿಸಿದ್ದಾರೆ.
ಸಂಸ್ಥೆಗಳ ಬಳಕೆಯತ್ತಲೂ ಕಣ್ಣು :
ರಾಜ್ಯದಲ್ಲಿ ವಾಯುನೆಲೆ, ಇಸ್ರೋ, ವಿಮಾನ ನಿಲ್ದಾಣಗಳು, ಜಲಾಶಯಗಳು ಮತ್ತಿತರ ಅನೇಕ ಸೂಕ್ಷ್ಮ ಘಟಕಗಳು ಇರುವುದರಿಂದ ಮತ್ತು ಬೆಂಗಳೂರು ಸಹಿತ ಪ್ರಮುಖ ಸ್ಥಳಗಳು ಅಭಿವೃದ್ಧಿ ಚಟುವಟಿಕೆಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಸೇರಿದಂತೆ ಹಲವು ಕಾರಣಗಳಿಗೆ ವಿಶ್ವದ ಗಮನ ಸೆಳೆದಿರುವುದರಿಂದ ಸಹಜವಾಗಿಯೇ ಶತ್ರು ರಾಷ್ಟ್ರಗಳೂ ಕಣ್ಣಿಟ್ಟಿರುತ್ತವೆ. ಈ ಹಿನ್ನೆಲೆಯಲ್ಲಿ ಡ್ರೋನ್‌ಗಳ ದುರ್ಬಳಕೆ ಆಗಬಾರದು ಎಂದು ಗೃಹ ಇಲಾಖೆ ತನ್ನ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದೆ.
ಮುಖ್ಯವಾಗಿ ಕಾಲೇಜುಗಳು,ಸಂಶೋಧನ ಸಂಸ್ಥೆಗಳು ಡ್ರೋನ್‌ಗಳನ್ನು ಪ್ರಯೋ ಗಗಳಿಗೆ ಬಳಸುತ್ತವೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಮತ್ತು ನಾಗರಿಕ ವಾಯುಯಾನ ನಿರ್ದೇಶನಾಲಯ (ಡಿಜಿಸಿಎ)ದ ಪರವಾನಿಗೆ ಬೇಕಿವೆ. ಆದರೆ ಪರವಾನಿಗೆ ಸಿಕ್ಕ ಬಳಿಕವೂ ಅದರ ದುರ್ಬಳಕೆಯ ಸಾಧ್ಯತೆಗಳಿವೆ. ಬೆಂಗಳೂರಿನ ಕಾಲೇಜೊಂದರ ವೈದ್ಯ ಅಬುರ್ ರೆಹಮಾನ್ ಐಸಿಸ್ ಜತೆ ಸಂಪರ್ಕ ಹೊಂದಿ ಆ್ಯಪ್‌ಗ್ಳ ಮೂಲಕ ಶಸ್ತ್ರಾಸ್ತ್ರ ಸಂಗ್ರಹಣೆ ಮತ್ತಿತರ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿ ಯಾಗಿರುವುದು ಎನ್‌ಐಎ ತನಿಖೆಯಿಂದ ಬೆಳಕಿಗೆ ಬಂದಿತ್ತು. ಬೆಂಗಳೂರು ಸರಣಿ ಸ್ಫೋಟದ ಆರೋಪಿ ಅಬ್ದುಲ್ ಸತ್ತಾರ್ ಕೇವಲ ರೇಡಿಯೋ ಮೆಕ್ಯಾನಿಕ್ ಆಗಿದ್ದರೂ ದೇಶದ ಹಲವು ಕಡೆ ನಡೆದ ಬಾಂಬ್ ಸ್ಫೋಟ ಪ್ರಕರಣಗಳ ತನಿಖೆಯಲ್ಲಿ ಪ್ರಮುಖ ಬಾಂಬ್ ತಯಾರಕ ಎಂದು ಪತ್ತೆಯಾಗಿತ್ತು. ಆದ್ದರಿಂದ ಇಂತಹ ಉಪಕರಣಗಳ ಬಗ್ಗೆ ಪೊಲೀಸರು ಮತ್ತಿತರ ತನಿಖಾ ಸಂಸ್ಥೆಗಳು ಯಾವತ್ತಿಗೂ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡ್ರೋನ್ ಅಂದರೇನು? :
- ಹಾರುವ ತಂತ್ರಜ್ಞಾನ ಅಳವಡಿ ಸಿರುವ ರೊಬೋಟ್‌ಗಳು
- ಫೋಟೋಗಳನ್ನು ಕ್ಲಿಕ್ಕಿಸಬಹುದು
- ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ವಸ್ತುಗಳನ್ನು ಒಯ್ದು ನಿಗದಿತ ಪ್ರದೇಶದಲ್ಲಿ ಬೀಳಿಸಬಹುದು
- ನಮ್ಮ ಕಾನೂನಿನ ಪ್ರಕಾರ ನಾಗರಿಕ ಸೇವೆಗಳಿಗೆ, ರಕ್ಷಣ ಕಾರ್ಯಗಳಿಗೆ ಅಧಿಕೃತ ಸಂಸ್ಥೆಗಳು ಮಾತ್ರ ಬಳಸಬಹುದು
ಭಾರತದಲ್ಲಿ ಡ್ರೋನ್ ಬೆದರಿಕೆ :
- ಭಾರತದ ಗಡಿಯಲ್ಲಿ 2019ರಲ್ಲಿ 167 ಅನಾಮಿಕ ಡ್ರೋನ್ ಹಾರಾಟದ ವರದಿಗಳಾಗಿವೆ.
- 2020ರಲ್ಲಿ ಗಡಿ ಪ್ರದೇಶಗಳಲ್ಲಿ 77 ಆಗಂತುಕ ಡ್ರೋನ್‌ಗಳ ಹಾರಾಟ ಪತ್ತೆಯಾಗಿವೆ.
- 2019ರಲ್ಲಿ ಪಂಜಾಬ್ ಪೊಲೀಸರು ಡ್ರೋನ್ ಬೀಳಿಸಿ ಶಸ್ತಾಸ್ತ್ರ ವಶಪಡಿಸಿಕೊಂಡಿದ್ದಾರೆ.
- 2020ರಲ್ಲೂ ಪಂಜಾಬ್ ಮತ್ತು ಜಮ್ಮು ಪೊಲೀಸರು ಅಂತಹ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
- 2021ರಲ್ಲಿ 2 ಡ್ರೋನ್‌ಗಳನ್ನು ಭಾರತ ರಕ್ಷಣಾ ಘಟಕ ವಶಪಡಿಸಿಕೊಂಡಿದೆ.
-ನವೀನ್ ಅಮ್ಮೆಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Contracter Case: ಗುತ್ತಿಗೆದಾರ ಆತ್ಮಹತ್ಯೆ: ಸಚಿವ ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ
Hindi ಸಂವಾದದ ಭಾಷೆ ಮಾಡಲು ಸಂಕಲ್ಪ: ಕೇಂದ್ರ ಸಚಿವ ನಿತ್ಯಾನಂದ ರಾಯ್
Name Road in Row: ಕರ್ನಾಟಕಕ್ಕೇ ಸಿದ್ದರಾಮಯ್ಯ ಅಂತ ಹೆಸರು ಇಡಲಿ: ಎಚ್‌ಡಿಕೆ ವ್ಯಂಗ್ಯ
ನಾವು ಬೀದಿಗಿಳಿದರೆ ಬಿಜೆಪಿಯವರು ಮನೆ ಖಾಲಿ ಮಾಡಬೇಕು: ಸಚಿವ ಪ್ರಿಯಾಂಕ್
Bill Pending: ದಯಾಮರಣ ಕೋರಿ ಗುತ್ತಿಗೆದಾರನಿಂದ ರಾಜ್ಯಪಾಲರು, ಸಿಎಂಗೆ ಪತ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ
ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್ ಪ್ರತಿಭಟನೆ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Train; ಬೆಂಗಳೂರು- ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾವಣೆಗೆ ಅಸಮ್ಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.