ಕುಕ್ಕೆ ಜಲಸಂಗ್ರಹ ಘಟಕದಲ್ಲಿ ಕ್ಲೋರಿನ್ ಸೋರಿಕೆ, ಆತಂಕ
Team Udayavani, Oct 30, 2019, 3:00 AM IST
ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕಲ್ಲಪಣೆಯ ಜಲಸಂಗ್ರಹ ಘಟಕದಲ್ಲಿ ಕ್ಲೋರಿನ್ ಸೋರಿಕೆಯಾಗಿ ಉಸಿರಾಟದ ತೊಂದರೆ ಕಂಡುಬಂದು ದರಿಂದ ಸ್ಥಳೀಯರು ಮನೆ ತೊರೆದು ಹೊರಬಂದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ತಡರಾತ್ರಿ 1 ಗಂಟೆ ವೇಳೆಗೆ ಕ್ಲೋರಿನ್ ಸೋರಿಕೆಯಾಗುತ್ತಿದ್ದಂತೆ ಪರಿಸರದಲ್ಲಿ ದುರ್ವಾಸನೆ ಪಸರಿಸಿತು. ಉಸಿರಾಟದ ತೊಂದರೆಗೊಳಗಾದ ಜನರು ಭಯದಿಂದ ರಾತೋರಾತ್ರಿ ಮನೆ ತೊರೆದು ಸಂಬಂಧಿಕರಲ್ಲಿ, ಪರಿಚಯಸ್ಥರಲ್ಲಿ ಆಶ್ರಯ ಪಡೆದರು.
ಘಟನೆ ವೇಳೆ ಘಟಕದಲ್ಲಿ ಇಬ್ಬರು ಸಿಬ್ಬಂದಿ ಮಾತ್ರ ಕರ್ತವ್ಯದಲ್ಲಿದ್ದರು. ಕೂಡಲೇ ದೇವಸ್ಥಾನ ಹಾಗೂ ಪೊಲೀಸರಿಗೆ ವಿಷಯ ತಿಳಿಸಲಾಯಿತು. ಸುಳ್ಯದಿಂದ ಅಗ್ನಿಶಾಮಕ ದವರು ಬಂದು ಮುಂಜಾನೆ 5ರ ಹೊತ್ತಿಗೆ ಸೋರಿಕೆ ತಡೆಗಟ್ಟಿದರು.
50 ಕುಟುಂಬಗಳಲ್ಲಿ ಭೀತಿ: ದೀಪಾವಳಿ ಸಂಭ್ರಮಾಚರಿಸಿ ನಿದ್ರೆಗೆ ಜಾರಿದ್ದ 50ಕ್ಕೂ ಅಧಿಕ ಕುಟುಂಬಗಳ ಜನರು ಏಕಾಏಕಿ ನಡೆದ ಘಟನೆಯಿಂದ ಆತಂಕಕ್ಕೊಳಗಾಗಿದ್ದರು. ಸ್ಥಳೀಯರೆಲ್ಲರೂ ಬೆಳಗಿನ ತನಕವೂ ಭಯದಲ್ಲೇ ಇರುವಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ
ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್ ಐಆರ್ ದಾಖಲು-HDK ಎ1
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.