ಇಂದು ಲಿಂಗದೀಕ್ಷೆ ಪಡೆಯುತ್ತಿರುವ ಕ್ರೈಸ್ತ ಸಾಫ್ಟ್ ವೇರ್ ಉದ್ಯಮಿ
Team Udayavani, Dec 6, 2021, 5:40 AM IST
ಬೆಂಗಳೂರು: ಹನ್ನೆರಡನೇ ಶತಮಾನದಲ್ಲಿ ತಮ್ಮ ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿರುವ ಬಸವಣ್ಣನವರ ವಚನಗಳು, ಶರಣರ ತತ್ವಗಳು ಹಾಗೂ ಜೀವನ ಶೈಲಿಯಿಂದ ಪ್ರೇರಣೆ ಪಡೆದಿರುವ ವಿದೇಶಿ ಉದ್ಯಮಿಯೊಬ್ಬರು ಸೋಮವಾರ (ಇಂದು) ಬೆಂಗಳೂರಿನ ರಾಜಾಜಿ ನಗರದ ಬಸವ ಮಂಟಪದಲ್ಲಿ ಲಿಂಗ ದೀಕ್ಷೆ ಪಡೆದುಕೊಳ್ಳುತ್ತಿದ್ದಾರೆ.
ಅಮೆರಿಕ ಮೂಲದ ಸಾಫ್ಟ್ ವೇರ್ ಉದ್ಯಮಿ ಸ್ಟೀವ್ ರೋಚ್ ಅವರು ಬಸವಣ್ಣನವರ ಸಮಾ ನತೆಯ ಸಮಾಜದ ಪರಿಕಲ್ಪನೆ, ಹೆಣ್ಣು – ಗಂಡಿನ ನಡುವಿನ ಸಮಾನತೆ, ಜಾತಿ ರಹಿತ ಸಮಾಜ ನಿರ್ಮಾಣ, “ವಸುಧೈವ ಕುಟುಂಬಕಂ’ ತತ್ವಗಳಿಂದ ಆಕರ್ಷಿತರಾಗಿ ಲಿಂಗದೀಕ್ಷೆಗೆ ನಿರ್ಧರಿಸಿದ್ದಾರೆ.
ವಚನಗಳೇ ಪ್ರೇರಣೆ
ಸ್ಟೀವ್ ರೋಚ್ ಮೊದಲಿನಿಂದಲೂ ಅಧ್ಯಾತ್ಮದ ಕಡೆಗೆ ಒಲವು ಹೊಂದಿದ್ದು, ಮೂಲತಃ ಕ್ರಿಶ್ಚಿಯನ್ ಆಗಿದ್ದಾರೆ. ಇತರ ಧರ್ಮಗಳ ಜೀವನ ಪದ್ಧತಿ ಹಾಗೂ ಆಚರಣೆಗಳ ಕುರಿತು ಹುಡುಕಾಟ ನಡೆಸಿದ ಅವರು, ಉತ್ತರ ಅಮೆರಿಕದಲ್ಲಿರುವ ಬಸವ ಕೇಂದ್ರದ ಸಂಪರ್ಕಕ್ಕೆ ಬಂದಿದ್ದಾರೆ. ಅಲ್ಲಿನ ಬಸವ ಕೇಂದ್ರದ ಮುಖ್ಯಸ್ಥರಾಗಿರುವ ಶ್ರೀಶೈಲ್ ಹಾದಿಮನಿ ಅವರೊಂದಿಗೆ ಒಡನಾಟ ಬೆಳೆದು, ಲಿಂಗ ಪೂಜೆಯ ಮಹತ್ವ, ಲಿಂಗ ಪೂಜೆಯಿಂದ ಆಗುವ ಪರಿಣಾಮಗಳ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.
ಯಾರು ಈ ಸ್ಟೀವ್ ರೋಚ್?
ಇಂಗ್ಲೆಂಡ್‌ನಲ್ಲಿ ಹುಟ್ಟಿರುವ ಇವರು ಕೆನಡಾದ ಪ್ರತಿಷ್ಠಿತ ವಾಟರ್ ಲೂ ವಿಶ್ವವಿದ್ಯಾನಿಲಯದಿಂದ ಸಿಸ್ಟಮ್ ಡಿಸೈನ್‌ನಲ್ಲಿ ಬಿಎಸ್‌ಸಿ ಪದವಿ ಪಡೆದು ಕೊಂಡಿದ್ದಾರೆ. ಅನಂತರ ಸ್ಯಾಪ್ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗ ಆರಂಭಿಸಿದರು. ಬಳಿಕ ಅಮೆರಿಕದಲ್ಲಿ ತಮ್ಮದೇ ಆದ ಎಲ್‌ಎಸ್‌ಐ ಎಂಬ ಸಂಸ್ಥೆಯನ್ನು ಆರಂಭಿಸಿದರು. ಪ್ರಸ್ತುತ ಸ್ಕೈ ಸೆಂಡ್ ಸಾಫ್ಟ್ ವೇರ್ ಸಂಸ್ಥೆಯ ಚೇರ್ಮನ್ ಆಗಿದ್ದಾರೆ. ಇಂಗ್ಲೆಂಡ್, ಅಮೆರಿಕ, ಜರ್ಮನಿ, ಕೆನಡಾ ದೇಶಗಳನ್ನು ಸುತ್ತಿರುವ ಅವರು ಪ್ರಸ್ತುತ ಅಮೆರಿಕದ ನಾರ್ಥ್ ಕೆರೊಲಿನ್ ರಾಜ್ಯದಲ್ಲಿ ಕುಟುಂಬದ ಜತೆಗೆ ನೆಲೆಸಿದ್ದಾರೆ.
ಇದನ್ನೂ ಓದಿ:ಲಾವಾ ಸ್ಫೋಟಕ್ಕೆ 13 ಸಾವು : ಇಂಡೋನೇಷ್ಯಾದ ಪೂರ್ವಭಾಗದಲ್ಲಿರುವ ಲುಮಾಜಂಗ್‌ನಲ್ಲಿ ಘಟನೆ
ಉದ್ಯಮ ವಿಸ್ತರಣೆ
ಸ್ಟೀವ್ ಲಿಂಗದೀಕ್ಷೆ ಪಡೆದು ಬಸವ ತತ್ವ ಪಾಲನೆಯ ಜತೆಗೆ ರಾಜ್ಯದಲ್ಲಿ ತಮ್ಮ ಉದ್ಯಮ ವನ್ನೂ ವಿಸ್ತರಿಸಲು ಮುಂದಾಗಿದ್ದಾರೆ. ಬೆಂಗಳೂರು ಹಾಗೂ ದಾವಣಗೆರೆಯಲ್ಲಿ ತಮ್ಮ ಸಂಸ್ಥೆಯ ಆರ್ ಆ್ಯಂಡ್ ಡಿ ಕೇಂದ್ರ ತೆರೆಯಲು ನಿರ್ಧರಿಸಿದ್ದಾರೆ.
ಲಿಂಗ, ಜಾತಿ, ಬಣ್ಣದ ಹೆಸರಿ
ನಲ್ಲಿ ತಾರ ತಮ್ಯ ಮಾಡದಿರುವುದು. ಎಲ್ಲರನ್ನೂ ಸಮಾನರನ್ನಾಗಿ ಕಾಣುವ ಬಸವಣ್ಣನವರ ತತ್ವ ನನಗೆ ಆಕರ್ಷಣೀಯ ವಾಯಿತು. ಈ ತತ್ವವನ್ನು ಎಲ್ಲರೂ ಅಳವಡಿಸಿಕೊಂಡರೆ ಸಮಾಜದಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ.
ಸ್ಟೀವ್ ರೋಚ್, ಲಿಂಗ ದೀಕ್ಷೆ
ಪಡೆಯಲಿರುವ ಅಮೆರಿಕ ಉದ್ಯಮಿ
ಒಂದೂವರೆ ವರ್ಷದಿಂದ ಸ್ಟೀವ್ ರೋಚ್ ಪರಿಚಯವಾಗಿದ್ದು, ಬಸವಣ್ಣನವರ ವಚನಗಳನ್ನು ಕೇಳಿ, ಸಮಾನತೆಯ ಸಮಾಜ ಸಾರುವ ಅವು ಗಳ ಅರ್ಥ ಕೇಳಿ ಪ್ರೇರಿತರಾಗಿದ್ದಾರೆ. ಲಿಂಗ ಪೂಜೆಯ ಮಹತ್ವ ತಿಳಿದುಕೊಂಡು, ಲಿಂಗದೀಕ್ಷೆ ಪಡೆಯುತ್ತಿದ್ದಾರೆ.
ಶ್ರೀಶೈಲ್ ಹಾದಿಮನಿ,
ಉತ್ತರ ಅಮೆರಿಕ ಬಸವ ಕೇಂದ್ರದ ಅಧ್ಯಕ್ಷ.
-ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.