ವಿಶ್ವ ಯುವ ಸಮ್ಮೇಳನಕ್ಕೆ ತೆರೆ
Team Udayavani, Nov 24, 2019, 3:07 AM IST
ಚಿಕ್ಕಬಳ್ಳಾಪುರ: ಸತ್ಯಸಾಯಿ ಗ್ರಾಮದಲ್ಲಿ ಮೊಳಗಿದ ಸಾಯಿ ನಿನಾದ, ಸರ್ವ ಧರ್ಮಗಳ ಸಾಮೂಹಿಕ ಪ್ರಾರ್ಥನೆ, ಬಾಬಾ ಸಂದೇಶ ಸಾರುವ ಸಂಗೀತ ಗಾಯನ, ತಲೆದೂಗಿದ ದೇಶ-ವಿದೇಶಗಳಿಂದ ಬಂದ ಭಕ್ತರು, ಸೇವೆಯಿಂದ ನಾಯಕತ್ವದೆಡೆಗಿನ ಸಾಮೂಹಿಕ ಘೋಷಣೆ…
ಹೀಗೆ ತಾಲೂಕಿನ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದ ಅಲಂಕೃತ ಪ್ರೇಮಾಮೃತ ಸಭಾಂಗಣದಲ್ಲಿ ಐದು ದಿನಗಳವರೆಗೆ ಅದ್ಧೂರಿಯಾಗಿ ನಡೆದ ವಿಶ್ವ ಯುವ ಸಮಾವೇಶ ಹಾಗೂ ಭಗವಾನ್ ಸತ್ಯಸಾಯಿ ಬಾಬಾರ 94ನೇ ಜಯಂತ್ಯುತ್ಸವದ ಪೂರ್ವ ಸಂಭ್ರಮಕ್ಕೆ ಶನಿವಾರ ಅಂತಿಮ ತೆರೆ ಬಿದ್ದಿತು.
ಶನಿವಾರ ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಕವಾಯತು ನಡೆಯಿತು. ಅದರಲ್ಲಿ ಸ್ವರ ಮೇಳ, ಅಶ್ವದಳದ ಶಿಸ್ತು ಬದ್ಧ ನಡಿಗೆ, ಸುಜ್ಞಾನ ಸುಧೆ ಸಾರುವ ವೇದಘೋಷ, ರಂಗುರಂಗಿನ ವಸ್ತ ವಿನ್ಯಾಸದಲ್ಲಿ ಮಿಂಚಿದ ನರ್ತಕಿಯರು, ಪ್ರೇಕ್ಷಕರನ್ನು ಮೋಡಿ ಮಾಡಿದ ಭಾರತೀಯ ನಾಟ್ಯಪಟುಗಳು, ವಿವಿಧ ದೇಶಗಳ ಪ್ರತಿನಿಧಿಗಳು, ಮೆರವಣಿಗೆಯಲ್ಲಿ ಕೈಮುಗಿದುಕೊಂಡು ಭಕ್ತಿ ಸಲ್ಲಿಸಿದ ಜನರು ಇವೆಲ್ಲವೂ ಭಗವಾನ್ ಸತ್ಯಸಾಯಿ ಬಾಬಾರವರ ಜನ್ಮ ದಿನೋತ್ಸವದ ಸಂಭ್ರಮೋಲ್ಲಾಸವನ್ನು ಇಮ್ಮಡಿಗೊಳಿಸಿದವು.
ದೇಶ, ವಿದೇಶಗಳ ಗಣ್ಯರ ಉಪಸ್ಥಿತಿ: ಬಾಬಾ ಜನ್ಮ ದಿನೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇಶ-ವಿದೇಶದ ಗಣ್ಯರು, ಆಹ್ವಾನಿತ ಅತಿಥಿಗಳು ಆಗಮಿಸಿದ್ದರು. ಅದರಲ್ಲಿ ಸಿಂಗಾಪುರದ ಭಕ್ತರ ಸಮೂಹ ಗಾಯನ, ಅಯಾನ್ ಅಲಿ ಬಂಗೇಶ್ ಮತ್ತು ಅಮಾನ್ ಅಲಿ ಬಂಗೇಶ್ ಸಹೋದರರು ಸರೋದ್ ವಾದನದ ದ್ವಂದ್ವ ಗಾಯನಗೋಷ್ಠಿ ನಡೆಸಿ, ನೆರೆದ ಜನಸ್ತೋಮ ತಲೆದೂಗುವಂತೆ ಮಾಡಿದರು.
ನೈಜೀರಿಯಾದ ಆಡಳಿತ ಉನ್ನತಾಧಿಕಾರಿ ಕ್ರಿಸ್ ಸಂಡೇಈಸ್, ಫಿಜಿಯಾದ ಆಡಳಿತ ಉನ್ನತಾಧಿಕಾರಿ ಯೋಗೀಶ ಪೂಂಜಾ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ವಿಶ್ರಾಂತ ಕುಲಪತಿ ಪೊ›. ಶಶಿಧರ ಪ್ರಸಾದ್, ಅಮೆರಿಕದ ಖ್ಯಾತ ಉದ್ಯಮಿ ಐಸಾಕ್ ಟೈಗ್ರೆಟ್, ರಾಜೇಶ್ವರಿ ಬಿರ್ಲಾ, ಪ್ರೇಮಾ ಕೃಷ್ಣ, ಸಿ.ಶ್ರೀನಿವಾಸ್, ಬಿ.ಎನ್.ನರಸಿಂಹ ಮೂರ್ತಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
32 ದೇಶ ಗಳ 2000 ಯುವಜನರು ಭಾಗಿ: ಕಳೆದ ನ.19ರಿಂದ ಸತತ ಐದು ದಿನಗಳ ಕಾಲ ಪ್ರೇಮಾಮೃತ ಸಭಾಂಗಣದಲ್ಲಿ ನಡೆದ ವಿಶ್ವ ಯುವ ಸಮ್ಮೇಳನಕ್ಕೆ ಬಾಬಾರವರ ಜಯಂತ್ಯುತ್ಸವ ಆಚರಣೆಯೊಂದಿಗೆ ವಿಧ್ಯುಕ್ತವಾಗಿ ತೆರೆಬಿದ್ದಿತು. ಸಮ್ಮೇಳನದಲ್ಲಿ ಜಗತ್ತಿನ 32 ದೇಶಗಳ ಸುಮಾರು 2 ಸಾವಿರಕ್ಕೂ ಹೆಚ್ಚು ಯುವ ಪ್ರತಿನಿಧಿಗಳು ಭಾಗವಹಿಸಿದ್ದರು.
ಸೇವೆಯಿಂದ ನಾಯಕತ್ವದೆಡೆ ಎಂಬ ಘೋಷಣೆಯಡಿ ನಡೆದ ಜಾಗತಿಕ ಯುವ ಸಮಾವೇಶದಲ್ಲಿ ದೇಶ ಹಾಗೂ ಜಗತ್ತಿನ ಸಮಸ್ಯೆ, ಸವಾಲುಗಳ ಕುರಿತು ಚಿಂತನ, ಮಂಥನ ನಡೆಯಿತು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಮಾನವ ಸಂಪನ್ಮೂಲ ವ್ಯಕ್ತಿಗಳು, ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕೃತಿಕ ಚಿಂತಕರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದ್ದರು.
* ಕಾಗತಿ ನಾಗರಾಜಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
TV Actor; 35 ನೇ ವಯಸ್ಸಿನಲ್ಲೆ ಜನಪ್ರಿಯ ಕಿರುತೆರೆ ನಟ ನಿತಿನ್ ಚೌಹಾಣ್ ನಿಧ*ನ
Social Media: ಈ ದೇಶದಲ್ಲಿ 16 ವರ್ಷದೊಳಗಿನವರು ಇನ್ಸ್ಟಾಗ್ರಾಮ್, ಫೇಸ್‌ಬುಕ್ ಬಳಸುವಂತಿಲ್ಲ!
Deve Gowda; ನನಗೀಗ ವಯಸ್ಸು 92.. ಮೊಮ್ಮಗ ಗೆದ್ದ ನಂತರ ಮನೆಯಲ್ಲಿ ಮಲಗುವುದಿಲ್ಲ..
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.