ರಾಷ್ಟ್ರಧ್ವಜ ಇಟ್ಟುಕೊಂಡೇ ಜನರ ಮುಂದೆ ಬನ್ನಿ; ಸಿಎಂ ಸವಾಲು
Team Udayavani, Feb 23, 2022, 7:40 AM IST
ವಿಧಾನ ಪರಿಷತ್ತು: “ನೀವು ಈಗ ನಡೆಸುತ್ತಿರುವ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯವನ್ನು ಇಟ್ಟುಕೊಂಡೇ ಜನರ ಮುಂದೆ ಬನ್ನಿ. ನಾವು ಅಭಿವೃದ್ಧಿ ಮಂತ್ರದೊಂದಿಗೆ ಬರುತ್ತೇವೆ. ಜನರೇ ತೀರ್ಮಾನ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಸವಾಲು ಹಾಕಿದರು.
ಮಂಗಳವಾರ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಮಂಡನೆ ವೇಳೆ ಮಾತನಾಡಿದ ಅವರು, “ರಾಜಕೀಯ ಲಾಭಕ್ಕಾಗಿ ನೀವು (ಕಾಂಗ್ರೆಸ್) ಅಧಿವೇಶನದಲ್ಲಿ ಈ ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಷಯ ಇಟ್ಟುಕೊಂಡು ಹೋರಾಟ ಮಾಡುತ್ತಿದ್ದೀರಿ. ವಾಸ್ತವವಾಗಿ ಸಚಿವರು ಹೇಳಿದೆ ಇರುವುದನ್ನು, ಸೇರಿಸಿ ಹೋರಾಟ ನಡೆಸುತ್ತಿದ್ದೀರಿ. ಇದು ತಪ್ಪು ಮತ್ತು ಜನ ಕೂಡ ಇದನ್ನು ಒಪ್ಪುವುದಿಲ್ಲ. ಬೇಕಿದ್ದರೆ ಇದೇ ವಿಷಯ ಇಟ್ಟುಕೊಂಡು ಜನರ ಮುಂದೆ ಬನ್ನಿ. ಆಗ ಜನರೇ ತೀರ್ಪು ಹೇಳುತ್ತಾರೆ’ ಎಂದು ಸವಾಲು ಹಾಕಿದರು.
“ಆಡಳಿತ ಪಕ್ಷವಾಗಿ ಅಂತೂ ಕಾಂಗ್ರೆಸ್ ಉಳಿದಿಲ್ಲ. ಈ ಅಧಿವೇಶನದಲ್ಲಿ ತಮ್ಮ ವರ್ತನೆಯಿಂದ ಪ್ರತಿಪಕ್ಷವಾಗುವ ಅರ್ಹತೆಗಳನ್ನೂ ಕಳೆದುಕೊಂಡಂತಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಭಾಗವಹಿಸಿ, ಸರ್ಕಾರದ ನೂನ್ಯತೆಗಳನ್ನು ಎತ್ತಿಹಿಡಿಯಲು ಪ್ರತಿಪಕ್ಷಕ್ಕೆ ಒಂದು ಅವಕಾಶ ಇತ್ತು.
ಪೂರ್ಣಪ್ರಮಾಣದಲ್ಲಿ ಚರ್ಚೆಯಾಗದಿರುವುದು ವಿಧಾನ ಮಂಡಲದ ಇತಿಹಾಸದಲ್ಲಿ ಕಪ್ಪುಚುಕ್ಕೆ. ಹುಬ್ಬಳ್ಳಿಯಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದಾಗ, ಸೇನಾಪಡೆಯೊಂದಿಗೆ ಬಂದವರು ನೀವು (ಕಾಂಗ್ರೆಸ್). ಅದರಲ್ಲಿ ಆರು ಜನ ಬಲಿಯಾದರು. ನಿಮ್ಮಂತಹವರಿಂದ ರಾಷ್ಟ್ರಭಕ್ತಿ ಕಲಿಯಬೇಕೇ?’ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ:ಸುನೀಲ್ ಶೆಟ್ಟಿ ನಿರ್ಮಾಣದ “ಇನ್‌ವಿಸಿಬಲ್ ಮ್ಯಾನ್’ ನಲ್ಲಿ ನಟಿಸಲಿದ್ದಾರೆ ಈಶಾ ಡಿಯೋಲ್
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬರುವ ದಿನಗಳಲ್ಲಿ 8, 9 ಮತ್ತು 10ನೇ ತರಗತಿಯ ಗ್ರಾಮೀಣ ಹೆಣ್ಣುಮಕ್ಕಳಿಗೂ ವಿದ್ಯಾನಿಧಿ ಯೋಜನೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಇರುವ ವಿದ್ಯಾನಿಧಿ ಯೋಜನೆ ಅಡಿ ಇದುವರೆಗೆ 4.52 ಲಕ್ಷ ಮಕ್ಕಳಿಗೆ ಆರ್ಥಿಕ ನೆರವು ನೀಡಲಾಗಿದೆ ಎಂದು ಹೇಳಿದರು.
ಆರು ತಿಂಗಳಲ್ಲಿ 11.2 ಲಕ್ಷ ಮನೆಗಳಿಗೆ ಮನೆ ಮನೆ ಗಂಗೆ ಕಲ್ಪಿಸಲಾಗಿದೆ. ಕಲ್ಯಾಣ ಕರ್ನಾಟಕಕ್ಕೆ 1,400 ಕೋಟಿ ರೂ. ಒಂದೇ ವರ್ಷದಲ್ಲಿ ಬಿಡುಗಡೆ ಮಾಡಲಾಗಿದೆ. ಬರುವ ವರ್ಷ ಈ ಅನುದಾನವನ್ನು ಮೂರು ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದ ಅವರು, ಕೋವಿಡ್ ಮತ್ತು ನೆರೆ ಹಾವಳಿ ನಡುವೆಯೂ ಸರ್ಕಾರ ಅಭಿವೃದ್ಧಿ ಪಥ ಮುಂದುವರಿಸಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Kumbh Mela 2025: ಮಹಾಕುಂಭ ಮೇಳದ ಆಕರ್ಷಣೆಯ ಕೇಂದ್ರ ಬಿಂದು ಅಂಬಾಸಿಡರ್ ಬಾಬಾ…ರುದ್ರಾಕ್ಷಾ!
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Winter Health Tips: ಚಳಿಗಾಲದಲ್ಲಿ ಆರೋಗ್ಯವಾಗಿರಲು 10 ಅತ್ಯುತ್ತಮ ಮಾರ್ಗಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.