ಪಠ್ಯ ಪರಿಷ್ಕರಣೆಯ ವಾಸ್ತವಾಂಶದ ಆಧಾರದಲ್ಲಿ ನಾಳೆಯೇ ಸೂಕ್ತ ನಿರ್ಧಾರ: ಸಿಎಂ ಬೊಮ್ಮಾಯಿ
Team Udayavani, Jun 1, 2022, 12:11 PM IST
ಮಣಿಪಾಲ: ಪಠ್ಯ ಪರಿಷ್ಕರಣೆಯ ವಾಸ್ತವಾಂಶದ ಆಧಾರದಲ್ಲಿ ಗುರುವಾರವೇ (ಜೂ.2) ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಠ್ಯ ಪರಿಷ್ಕರಣೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಲ್ಲಿ ಸಮಗ್ರ ವರದಿ ಕೇಳಿದ್ದೇನೆ. ಸಚಿವರು ಗುರುವಾರ ವರದಿ ನೀಡಲಿದ್ದಾರೆ. ಹಾಗೆಯೇ ವಿವಿಧ ಮಠದ ಸ್ವಾಮೀಜಿಗಳು, ಬೇರೆಯವರು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ ಪತ್ರವನ್ನು ಬರೆದಿದ್ದಾರೆ ಮತ್ತು ಪರಿಷ್ಕರಣೆಯಲ್ಲಿ ಆತಂಕ ಪಡುವ ವಿಷಯ ಏನೂ ಇಲ್ಲ ಎಂಬ ವಾದವೂ ಇದೆ. ಹೀಗಾಗಿ ಈ ಎಲ್ಲ ಅಂಶಗಳನ್ನು ಪರಿಶೀಲಿಸಿ, ಶಿಕ್ಷಣ ಸಚಿವರ ವರದಿಯನ್ನು ಆಧರಿಸಿ, ವಾಸ್ತವಾಂಶ ಏನಿದೆ ಎಂಬುದನ್ನು ತಿಳಿದು ಜೂನ್ 2 ರಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಿದ್ದೇವೆ. ಯಾರ್ಯಾರು ತಮ್ಮ ಪಠ್ಯ, ಪದ್ಯಗಳನ್ನು ವಾಪಸ್ ಪಡೆಯಲು ಪತ್ರ ಬರೆದಿದ್ದಾರೋ ಅವರೊಂದಿಗೂ ಮಾತುಕತೆ ನಡೆಸಲಿದ್ದೇನೆ ಎಂದರು.
ಶೀಘ್ರ ವೇತನ :
ಉಡುಪಿ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿ ವೆಂಚರ್ಸ್ ನಿಂದ ಸರಕಾರದ ಸ್ವಾಧೀನಕ್ಕೆ ಪಡೆಯಲಾಗಿದೆ. ಸ್ವಲ್ಪ ತಾಂತ್ರಿಕ ಗೊಂದಲದಿಂದ ಸಿಬಂದಿ ವರ್ಗಕ್ಕೆ ಸರಿಯಾಗಿ ವೇತನ ಆಗಿಲ್ಲ. ಕೂಡಲೇ ತಾಂತ್ರಿಕ ಗೊಂದಲ ನಿವಾರಿಸಿ, ಐದು ತಿಂಗಳ ವೇತವನ್ನು ಬಿಡುಗಡೆ ಮಾಡಲಾಗುವುದು. ಜತೆಗೆ ಮುಂದಿನ ದಿನಗಳಲ್ಲಿ ಸರಿಯಾದ ಕ್ರಮದಲ್ಲಿ ಅವರಿಗೆ ವೇತನ ನೀಡಲು ಬೇಕಾದ ವ್ಯವಸ್ಥೆ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಎಸಿಬಿ ಬಲವರ್ಧನೆಯಾಗಿದೆ :
ನಮ್ಮ ಸರಕಾರ ಬಂದ ಅನಂತರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ವನ್ನು ಬಲಗೊಳಿಸಿದ್ದೇವೆ ಮತ್ತು ಅದಕ್ಕೊಂದು ಪ್ರತ್ಯೇಕ ವ್ಯವಸ್ಥೆಯೂ ಬಂದಿದೆ. ಲೋಕಾಯುಕ್ತ ಇದ್ದರೂ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಎಸಿಬಿಗೆ ಆಗುತ್ತಿರಲಿಲ್ಲ. ಈಗ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲು, ದಾಳಿ ನಡೆಸಲು ಅವಕಾಶ ನೀಡಲಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲೂ ಪ್ರಕರಣ ಇರುವುದರಿಂದ ಅದಕ್ಕೂ ಕಾಯುತ್ತಿದ್ದೇವೆ ಎಂದರು.
ಕಾನೂನು ಪಾಲನೆ ಮಾಡಬೇಕು :
ಲವ್ ಜಿಹಾದ್ ಹೊಸದೇನಲ್ಲ. ಮೊದಲಿನಿಂದಲೂ ಇದೆ. ಅದರ ನಿಯಂತ್ರಣಕ್ಕಾಗಿ ಕಾನೂನು ಮಾಡಿದ್ದೇವೆ. ಆ ಕಾನೂನಿನ ಅಡಿಯಲ್ಲಿ ಎಲ್ಲವನ್ನು ಪರಿಗಣಿಸಿಸುತ್ತೇವೆ. ಯಾರು ಕೂಡ ಕಾನೂನು ಉಲ್ಲಂಘನೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ
By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ
Hassan: ಹಾಸನಾಂಬೆ ದೇವಿಗೆ ಈ ಬಾರಿ ದಾಖಲೆ ಪ್ರಮಾಣದಲ್ಲಿ ಹರಿದು ಬಂದ ಆದಾಯ!
MUDA case; ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕರೆದ ಲೋಕಾಯುಕ್ತ ಪೊಲೀಸರು
Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.