ನೂತನ ಸಂಪುಟ ಸೇರುವ ನಿರೀಕ್ಷೆಯಲ್ಲಿ ಹಲವು ಆಕಾಂಕ್ಷಿಗಳು
Team Udayavani, Jul 29, 2021, 7:20 AM IST
ಬೆಂಗಳೂರು: ಬಸವರಾಜ್ ಬೊಮ್ಮಾಯಿ ಸಂಪುಟ ಸೇರಲು ಅನೇಕ ಶಾಸಕರು ಕಸರತ್ತು ನಡೆಸುತ್ತಿದ್ದು, ಜಿಲ್ಲೆ ಹಾಗೂ ಪ್ರಾದೇಶಿಕ ಲೆಕ್ಕಾಚಾರದಲ್ಲಿ ತಮಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂಬ ಲೆಕ್ಕಾಚಾರ ಹೊಂದಿದ್ದಾರೆ.
ಅರವಿಂದ ಬೆಲ್ಲದ (ಹುಬ್ಬಳ್ಳಿ- ಧಾರವಾಡ ಪಶ್ಚಿಮ), ಬಸನಗೌಡ ಪಾಟೀಲ್ ಯತ್ನಾಳ್, (ವಿಜಯಪುರ) ಪೂರ್ಣಿಮಾ ಶ್ರೀನಿವಾಸ್ (ಹಿರಿಯೂರು), ರೂಪಾಲಿ ನಾಯ್ಕ (ಕಾರವಾರ), ರಾಮದಾಸ್ (ಮೈಸೂರಿನ ಕೃಷ್ಣರಾಜ), ಸತೀಶ್ ರೆಡ್ಡಿ (ಬೊಮ್ಮನಹಳ್ಳಿ), ಎಸ್.ಆರ್. ವಿಶ್ವನಾಥ್ (ಯಲಹಂಕ), ಎ.ಎಸ್. ಪಾಟೀಲ್ ನಡಹಳ್ಳಿ ( ಮುದ್ದೇಬಿಹಾಳ), ರಾಜುಗೌಡ (ಸುರಪುರ), ಶಿವನಗೌಡ ನಾಯಕ್( ದೇವದುರ್ಗ), ಕುಮಾರ ಬಂಗಾರಪ್ಪ (ಸೊರಬ), ಎಸ್. ಎ. ರವೀಂದ್ರನಾಥ್(ದಾವಣಗೆರೆ), ಸುನಿಲ್ ಕುಮಾರ್ (ಕಾರ್ಕಳ), ಎಂ.ಪಿ.ರೇಣುಕಾಚಾರ್ಯ (ಹೊನ್ನಾಳಿ), ಪರಣ್ಣ ಮುನವಳ್ಳಿ (ಗಂಗಾವತಿ) ಪಿ.ರಾಜೀವ್ (ಕುಡಚಿ), ದುರ್ಯೋಧನ ಐಹೊಳೆ ( ರಾಯಭಾಗ), ಶಂಕರ ಪಾಟೀಲ್ ಮುನೇನಕೊಪ್ಪ ( ನವಲಗುಂದ), ಆನಂದ ಮಾಮನಿ (ಸವದತ್ತಿ), ದತ್ತಾತ್ರೇಯ ಪಾಟೀಲ್ ರೇವೂರ ( ಕಲಬುರ್ಗಿ ದಕ್ಷಿಣ), ಅಪ್ಪಚ್ಚು ರಂಜನ್ (ಮಡಿಕೇರಿ) ಅವರು ಸಚಿವ ಸ್ಥಾನ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ಕೇಂದ್ರ ಮಾದರಿ ?:
ಕೇಂದ್ರದ ಮಾದರಿಯಲ್ಲಿ ನೂತನ ಸಂಪುಟ ರಚನೆ ಸಾಧ್ಯತೆಯಿದೆ. ಹಾಗಾದರೆ ಸಮುದಾಯಗಳ ಶಾಸಕರಿಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.
ನಾನು ನಾಡಿದ್ದು ದಿಲ್ಲಿಗೆ ತೆರಳಿ ವರಿಷ್ಠರೊಂದಿಗೆ ಚರ್ಚಿಸುತ್ತೇನೆ. ಜಗದೀಶ್ ಶೆಟ್ಟರ್ ನನ್ನ ಸಂಪುಟದಲ್ಲಿ ಸೇರುವುದಿಲ್ಲ ಎಂದು ಹೇಳಿರುವ ಬಗ್ಗೆ ಮಾಹಿತಿ ಇಲ್ಲ. ಅದು ಚರ್ಚೆಯ ವಿಷಯವೇ ಅಲ್ಲ.-ಬಸವರಾಜ್ ಬೊಮ್ಮಾಯಿ, ಸಿಎಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Food Department Operation: ಬಿಪಿಎಲ್ ಚೀಟಿದಾರರಿಗೆ ಎಪಿಎಲ್ ಕಾವು!
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.