ಅಭಿವೃದ್ಧಿ ಹಿಂದೆ ಜನ ಸುತ್ತುವುದಲ್ಲ, ಜನರ ಸುತ್ತಲೂ ಅಭಿವೃದ್ಧಿ ಇರಬೇಕು: ಸಿಎಂ ಬೊಮ್ಮಾಯಿ
Team Udayavani, Nov 1, 2021, 2:42 PM IST
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ಜನ ಸ್ಪಂದನ ವೆಬ್ ಪೋರ್ಟಲ್ ಅನ್ನು ಉದ್ಘಾಟನೆ ಮಾಡಿದ್ದಾರೆ. ಗಿಡಗಳಿಗೆ ನೀರು ಹಾಕಿ ವಿಧಾನಸೌಧದಲ್ಲಿ ಜನ ಸ್ಪಂದನ ಲೋಕಾರ್ಪಣೆ ಮಾಡಿದ್ದಾರೆ.
ನಂತರ ಮಾತನಾಡಿದ ಅವರು, ಆಳುವುದು ಮತ್ತು ಆಡಳಿತ ಮಾಡುವುದು ವ್ಯತ್ಯಾಸ ಇದೆ. ಜನಪ್ರತಿನಿಧಿಗಳು ಆಳುವ ಕೆಲಸ ಮಾಡಬೇಕು. ಆಡಳಿತ ಯಂತ್ರ ಆಡಳಿತ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಆಳುವವರು ಆಡಳಿತ ಮಾಡಲು, ಆಡಳಿತ ಮಾಡುವವರು ಆಳಲು ಹೊರಟಿದ್ದಾರೆ. ಈ ಬಗೆ ಸ್ಪಷ್ಟತೆ ಇರಬೇಕು ಎಂದರು.
ನಾಗರಿಕರು ಯಾವುದೇ ಸೇವೆ ಪಡೆಯಲು ಸಾಕಷ್ಟು ಸಮಸ್ಯೆಯಾಗುತ್ತಿದೆ. ನಾಗರಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ತರಬೇಕು ಎನ್ನುವುದು ನಮ್ಮ ಸರ್ಕಾರದ ಧೋರಣೆಯಾಗಿದೆ. ಜನರು ದುಡ್ಡು ಕೊಟ್ಟು ಸೇವೆ ಪಡೆಯುವ ಸ್ಥಿತಿ ತಪ್ಪಿಸಲು ನಮ್ಮ ಸರ್ಕಾರ ಜನರ ಮನೆ ಬಾಗಿಲಿಗೆ ತಲುಪಿಸಲು ಯೋಜನೆ ರೂಪಿಸಲಾಗಿದೆ. ಅತಿ ಹೆಚ್ಚು ಜನ ಬಳಕೆಯ ಯೋಜನೆಯನ್ನು ಜನರ ಮನೆಗೆ ತಲುಪಿಸಲು ಸಕಾಲ ಕಾಯ್ದೆ ಅಡಿಯಲ್ಲಿ ಜಾರಿಗೆ ತಂದಿದ್ದೇವೆ. ಜನರ ಸುತ್ತಲೂ ಆಡಳಿತ ಇರಬೇಕು. ಜನರ ಸುತ್ತಲೂ ಅಭಿವೃದ್ಧಿ ಇರಬೇಕು. ಅಭಿವೃದ್ಧಿ ಹಿಂದೆ ಜನ ಸುತ್ತುವಂತಾಗಬಾರದು. ನಾನು ಸಿಎಂ ಆದ ಸಂದರ್ಭದಲ್ಲಿಯೇ ಜನ ಪರ ಯೋಜನೆ ಜಾರಿಗೆ ತರುತ್ತೇನೆ ಎಂದು ಹೇಳಿದ್ದೆ. ವಿಜಯ ಭಾಸ್ಕರ್ ಅವರ ಆಡಳಿತ ಸುಧಾರಣಾ ಆಯೋಗದ ಶಿಪಾರಸ್ಸಿನಂತೆ ಜನಪರ ಯೋಜನೆಗಳನ್ನು ಇಂದಿನಿಂದ ಜಾರಿಗೆ ತರುತ್ತಿದ್ದೇವೆ ಎಂದರು.
ಇದನ್ನೂ ಓದಿ:ಬಿಟ್ ಕಾಯಿನ್ ವಿಚಾರದಲ್ಲಿ ರಾಜ್ಯ ಸರ್ಕಾರ ಕಠಿಣ ನಿಲುವು ಹೊಂದಿದೆ: ಕೆ.ಎಸ್.ಈಶ್ವರಪ್ಪ
ಪ್ರಜಾಪ್ರಭುತ್ವ ಒಪ್ಪಿಕೊಂಡು ಸರ್ಕಾರದ ಪ್ರಾಬಲ್ಯ ಹೆಚ್ಚಳ ಮಾಡಿ. ಅಭಿವೃದ್ಧಿ ಜನರ ಪರವಾಗಿ ಆಗದೆ ಕೆಲವೇ ಕೆಲವು ಜನರ ಅಭಿವೃದ್ಧಿಗೆ ಸೀಮಿತ ಆಗಬಾರದು. ನಾಗರಿಕರು ಅವರು ಕೇಳುವ ಸೇವೆ ಜನರಿಗೆ ತಲುಪಿಸಿದರೆ ಅವರು ಬೇರೆ ಕೆಲಸದಲ್ಲಿ ತೊಡಗಿಕೊಳ್ಳಬೇಕು ಎಂದು ಸಿಎಂ ಹೇಳಿದರು.
ಒಂದು ರಾಜ್ಯದ ಸರ್ಕಾರ ಶ್ರೀಮಂತ ಆದರೆ ತನಗೆ ಬೇಕಾದ ಕಾರ್ಯಕ್ರಮಗಳನ್ನು ಮಾತ್ರ ಮಾಡಲು ಸಾಧ್ಯ. ಜನರೇ ಶ್ರೀಮಂತರಾದರೆ ಅವರ ಜೀವನ ಮಟ್ಟ, ತಲಾ ಆದಾಯ ಹೆಚ್ಚಳವಾಗುತ್ತದೆ. ಅವರಿಂದ ಸರ್ಕಾರಕ್ಕೂ ಹೆಚ್ಚಿನ ಆದಾಯ ಬಂದು ಸರ್ಕಾರವೂ ಶ್ರೀಮಂತ ಆಗುತ್ತದೆ. ಪ್ರತಿಯೊಬ್ಬರ ತಲಾ ಆದಾಯ ಹೆಚ್ಚಳವಾಗಬೇಕು. ದೇಶದ ಒಟ್ಟು ತಲಾ ಆದಾಯದಲ್ಲಿ 4 ನೇ ಸ್ಥಾನದಲ್ಲಿದ್ದೇವೆ. ರಾಜ್ಯದ ಶೇ 35% ರಷ್ಟು ಜನರ ತಲಾ ಆದಾಯ ಮಾತ್ರ ಹೆಚ್ಚಿದೆ ಶೇ 65% ಜನರ ತಲಾ ಆದಾಯದಲ್ಲಿ ಪಾಲ್ಗೊಳ್ಳುತ್ತಿಲ್ಲ. ಎಲ್ಲರ ತಲಾ ಆದಾಯ ಹೆಚ್ಚಾಗಬೇಕು. ಈ ಯೋಜನೆ ಕ್ರಾಂತಿಕಾರಕವಾಗಿದ್ದು, ಇದು ಯಶಸ್ವಿಯಾಗಬೇಕು. ಅತಿ ಹೆಚ್ಚು ಜನ ಸಂಖ್ಯೆ ಇರುವ ವಿಧಾನಸಭಾ ಕ್ಷೇತ್ರಗಳಿವೆ. ಈ ಯೋಜನೆ ಯಶಸ್ವಿ ಆಗಲೇಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಎಲ್ಲ ಯೋಜನೆಗಳು ಯಶಸ್ವಿಯಾಗಲು ನಾಗರಿಕರ ಸಹಕಾರ ಮುಖ್ಯ. ಪಡಿತರ, ಪಿಂಚಣಿ, ಖಾತಾ ಹಂಚಿಕೆ ಸೇರಿದಂತೆ 56 ಸೇವೆ ಅಳವಡಿಸಲಾಗಿದೆ. 1902 ಸಂಖ್ಯೆಗೆ ಕರೆ ಮಾಡಿದರೆ ಪರಿಹಾರ ದೊರೆಯಲಿದೆ. ಸಾರಿಗೆ ಇಲಾಖೆಯಲ್ಲಿ ಲೈಸೆನ್ಸ್ ಪಡೆಯಲು ಸಾರಿಗೆ ಇಲಾಖೆಗೆ ಬರುವ ಅಗತ್ಯವಿಲ್ಲ. ಈ ಯೋಜನೆಯಲ್ಲಿ 30 ಯೋಜನೆ ಜಾರಿಗೆ ತರಲಾಗಿದೆ. ವಾಹನ ನೋಂದಣಿ ಕೂಡ ಡೀಲರ್ ಸಂಸ್ಥೆಯಿಂದಲೇ ನೀಡಲು ತೀರ್ಮಾನಿಸಿದೆ. ರಾಜ್ಯದಲ್ಲಿ 10 ಸಂಸ್ಥೆಗಳಿಗೆ ನೀಡಲಾಗಿದೆ. ಅದು ಯಶಸ್ವಿಯಾದರೆ ಎಲ್ಲ ಕಡೆ ವಿಸ್ತರಣೆ ಮಾಡಲಾಗುತ್ತದೆ. 4.11 ಲಕ್ಷ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದಾರೆ. 2.46 ಲಕ್ಷ ಬಿಪಿಎಲ್ ಹಾಗೂ ಎಪಿಎಲ್ ಅರ್ಜಿಗಳು ಬಂದಿದ್ದವು. ಎಲ್ಲರಿಗೂ ಅನುಮತಿ ನೀಡಲಾಗಿದೆ ಎಂದರು.
ಕಾನೂನು ಏನೇ ಮಾಡಿದ್ದರೂ ಮನುಷ್ಯ ಪ್ರಾಮಾಣಿಕವಾಗಿದ್ದರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಎಲ್ಲ ಸೇವೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿ ನೋಡಿಕೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ
Winter Session Issue: ಬಂಧನ, ಪೊಲೀಸ್ ದೌರ್ಜನ್ಯ: ಡಿಜಿಪಿಗೆ ಸಿ.ಟಿ.ರವಿ ದೂರು
Valmiki Nigama: ಜಪ್ತಿ ಮಾಡಿರುವ 6.11 ಕೋಟಿ ರೂ. ಬಿಡುಗಡೆಗೆ ಸೂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.